Advertisement

ಮಕ್ಕಳಿಗೆ ಅಹಿಂಸಾ ಸಿದ್ಧಾಂತ ಕಲಿಸಬೇಕಿದೆ

06:00 AM Jun 24, 2018 | |

ಅಹಮದಾಬಾದ್‌: ಮಹಾತ್ಮ ಗಾಂಧಿಯವರ ಆದರ್ಶಗಳು ಇಂದಿಗೂ ಪ್ರಸ್ತುತ ವಾಗಿದ್ದು, ಅವರ ಅಹಿಂಸಾ ತತ್ವವನ್ನು ವಿಶ್ವಾದ್ಯಂತದ ಮಕ್ಕಳಿಗೆ ಕಲಿಸಿಕೊಡಬೇಕಾದ ಅಗತ್ಯವಿದೆ ಎಂದು ಸೆಷಲ್ಸ್‌ ಅಧ್ಯಕ್ಷ ಡ್ಯಾನಿ ಫೌರ್‌ ಅಭಿಪ್ರಾಯಪಟ್ಟಿದ್ದಾರೆ. 6 ದಿನಗಳ ಭಾರತ ಪ್ರವಾಸದಲ್ಲಿರುವ ಡ್ಯಾನಿ ಶನಿವಾರ ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು, ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಅವರು, “ಕಣ್ಣಿಗೆ ಕಣ್ಣು ಎಂಬ ತತ್ವವು ಇಡೀ ಜಗತ್ತನ್ನೇ ಕುರುಡಾಗಿಸುತ್ತದೆ. ಹಾಗಾಗಿ, ಅಂಥದ್ದನ್ನು ಬಿಟ್ಟು ಅಹಿಂಸಾ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು’ ಎಂದು ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next