ತುಮಕೂರು: ಮಕ್ಕಳಿಗೆ ಸಂಸ್ಕಾರ ಕಲಿಸಬೇಕುಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳ ಬೇಕು. ಶಿಸ್ತು, ಸಂಯಮ, ತಾಳ್ಮೆ ಅತಿಮುಖ್ಯವಾಗಿದೆ ಎಂದು ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.
ಜಿಲ್ಲೆಯ ಕುಣಿಗಲ್ ತಾಲೂಕಿನ ಭಕ್ತರಹಳ್ಳಿಯ ಸಂತ ಗ್ರಿಗೋರಿಯಸ್ ದಯಾಭವನ ಸಮೂಹ ಸಂಸ್ಥೆಗಳಲ್ಲಿ ಏರ್ಪಡಿಸಿದ್ದ ಉಚಿತ ಶೈಕ್ಷಣಿಕ,ಪೌಷ್ಟಿಕಾಂಶಯುಕ್ತ ಆಹಾರದ ಕಿಟ್ ಹಾಗೂಚಳಿಗಾಲದ ಹೊದಿಕೆಗಳ ಕಿಟ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡದರು.
253 ಮಕ್ಕಳಿಗೆ ಈ ಆಹಾರ ಕಿಟ್: ದಯಾಭವನ ಸಂಸ್ಥೆಯ ಅಂಗ ಸಂಸ್ಥೆಯಾದ ದಯಾಸ್ಪರ್ಶ ಆಸ್ಪತ್ರೆಯಲ್ಲಿ ಉತ್ತಮ ಕಾರ್ಯಕ್ರಮಮಾಡಲಾಗುತ್ತಿದೆ. ಎಚ್.ಐ.ವಿ. ಭಾದಿತ,ಭಾದಿತರಲ್ಲದ ಮಕ್ಕಳಿಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯಆಯೋಜಿಸುತ್ತಾ ಬಂದಿದ್ದು, ಈ ಕಾರ್ಯಕ್ರಮದಲ್ಲಿ 253 ಮಕ್ಕಳಿಗೆ ಈ ಆಹಾರಕಿಟ್‌ಗಳನ್ನು ವಿತರಣೆ ಉತ್ತಮ ಕಾರ್ಯ ಎಂದರು.
ದಯಾಪ್ರತೀಕ್ಷಾ: ಈ ಸಂಸ್ಥೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ 72 ಮಕ್ಕಳಿದ್ದು, ಮೇಲ್ಕಂಡ ಮಕ್ಕಳಿಗೆ ವಸತಿ ವ್ಯವಸ್ಥೆ ಇಲ್ಲದ ಕಾರಣ, ಅವರುಗಳಿಗೆ ವಿದ್ಯಾಭ್ಯಾಸ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ವಿಶೇಷವಾಗಿ ಈ ವರ್ಷ ತಂದೆ-ತಾಯಿಗಳುನಾನಾ ಕಾರಣಗಳಿಂದ ಜೈಲಿನಲ್ಲಿರುವ ಹಾಗೂ ಅವರ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗಿರುವವಿಷಯವನ್ನು ಮನಗೊಂಡು ಸಂಸ್ಥೆಯವರು 50ಮಕ್ಕಳಿಗೆ ಈ ರೀತಿಯ ದಯಾಪ್ರತೀಕ್ಷಾ ಎಂಬ ಕಾರ್ಯಕ್ರಮದ ಮೂಲಕ ಕಿಟ್‌ಗಳನ್ನು ವಿತರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಫಾದರ್ ಜಿನೇಶ್ ಕೆ.ವರ್ಕಿ ಮಾತನಾಡಿ, ಎಲ್ಲರಂತೆಭಾದಿತರೂ ಸಹ ಘನತೆಯುಳ್ಳ ಜೀವನವನ್ನುನಡೆಸಬೇಕು. ಅದಕ್ಕಾಗಿ ಸರ್ಕಾರದಂತೆ ಈಸಂಸ್ಥೆಯು ಕಾರ್ಯನಿರತರಾಗಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಘಟಕದ ಜಂಟಿ ನಿರ್ದೇಶಕರಾದ ಡಾ.ಹನುಮಂತರಾಯಪ್ಪ,ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶಾಂತಶ್ರೀ,ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ಪಿ.ಜೆ.ಚಾಕೋ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಣ್ಣ,ಮೋಹನಕುಮಾರಿ, ಫಾದರ್ ಶಿಬು, ಸತ್ಯನ್‌ಪಾರಕಡವಿಲ್, ಮೋಹನ್, ಚಾಕೋ, ದಿನಕರ್ ಮುಂತಾದವರು ಭಾಗವಹಿಸಿದ್ದರು.