ಹಾಸನ: ಸಂಸ್ಕಾರವುಳ್ಳ ವಿದ್ಯೆ ಗೌರವಯುತ ಜೀವನ ಕಟ್ಟಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ನಗರದ ಎಂ.ಜಿ. ರಸ್ತೆಯ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿಜ್ಞಾನ ವಿಷಯದ ಪ್ರಾಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಆಶೀವರ್ಚನ ನೀಡಿದರು.
ಸಮಯ ವ್ಯರ್ಥ ಮಾಡದಿರಿ: ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಶ್ರದ್ಧೆ ಹಾಗೂ ಆಸಕ್ತಿ ತೋರಿ ಕಲಿಯಬೇಕು. ಆಗ ಮಾತ್ರ ಬದುಕಿನಲ್ಲಿ ಉನ್ನತ ಗುರಿಯೆಡೆಗೆ ಸಾಗಲು ಸಾಧ್ಯ ವಾಗುತ್ತದೆ ಇಲ್ಲವಾ ದಲ್ಲಿ ಅನರ್ಥಗಳು ಅವನತಿಯತ್ತ ಕರೆದೊಯ್ಯುತ್ತವೆ ಎಂದು ವಿದ್ಯಾರ್ಥಿ ಗಳಿಗೆ ಎಚ್ಚರಿಕೆ ನೀಡಿದರು.
ಪವಿತ್ರ ಮನೋಭಾವನೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿ ಕೊಳ್ಳಬೇಕು. ಆಸಕ್ತಿಯಿಂದ ಕಲಿಯುವ ವಿದ್ಯೆ ಸದಾ ಉಳಿಯುತ್ತದೆ ಹಾಗಾಗಿ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ಹೊರ ಹಾಕಿದರೆ ಒಳಿತು ತುಂಬಿಸಿ ಕೊಳ್ಳಲು ನೆರವಾಗುತ್ತದೆ ಎಂದರು.
ಹೊಸ ವಿಷಯ ಕಲಿಯಿರಿ: ಹೊಸ ವಿಷಯಗಳ ಕಲಿಕೆಗೆ ವಿದ್ಯಾರ್ಥಿಗಳು ಸದಾ ಉತ್ಸುಕರಾಗಿರಬೇಕು. ಕಲಿಸುವ ವರಿಗೆ ಇರುವ ಶ್ರದ್ಧೆ ಕಲಿಯುವವರಿಗೂ ಇದ್ದರೆ ಮಾತ್ರ ಅದು ಸಾರ್ಥಕ ಎನಿಸಿ ಕೊಳ್ಳುತ್ತದೆ. ನಮ್ಮ ಜ್ಞಾನ ಭಂಡಾರಕ್ಕೆ ಸದಾ ಹೊಸ ಷಯಗಳನ್ನು ತುಂಬುವ ಕೆಲಸ ನಿರಂತರವಾಗಿ ಆಗಬೇಕು.
ಆಗ ಮಾತ್ರ ಪರಿಪೂರ್ಣ ಮನುಷ್ಯ ಎನಿಸಿಕೊಳ್ಳಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಶಂಭುನಾಥ ಸ್ವಾಮೀಜಿ ಕಿವಿಮಾತು ಹೇಳಿದರು. ಹೊಳೆರನಸೀಪುರ ತಾಲೂಕಿನ ಅಕ್ಷರ ದಾಸೋಹ ಸಹಾಯಕ ಯೋಜನಾ ನಿರ್ದೇಶಕ ಹರೀಶ್ ಮಾತನಾಡಿ, ಯಾವುದೇ ಕೆಲಸದಲ್ಲಿ ಒಂದೆರಡು ಬಾರಿ ವಿಫಲರಾದರೆ ನಿರಾಶರಾಗ ಬೇಕಿಲ್ಲ. ಏಕೆಂದರೆ ಸತತ ಪರಿಶ್ರಮ ದಿಂದ ಒಂದಿಲ್ಲೊಂದು ದಿನ ಸಾಧನೆ ಸಾಧ್ಯವಿದೆ ಎಂಬುದನ್ನು ಅರಿತು ಮುನ್ನಡೆಯಬೇಕು ಎಂದರು.
ನಿವೃತ್ತ ಉಪ ಪ್ರಾಂಶುಪಾಲ ಪಾರ್ಥ ಸಾರಥಿ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಷಯದ ಪ್ರಾಯೋಗಿಕ ಕಾರ್ಯಾಗಾರ ನಡೆಸಿಕೊಟ್ಟರು. ಶ್ರೀ ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಮಠದ ವ್ಯವಸ್ಥಾಪಕ ಚಂದ್ರಶೇಖರ್, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಿಕ್ರಮ್‌ದೇವ್ ಪ್ರಭು, ಶಿಕ್ಷಕ ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.