Advertisement
ಕರ್ನಾಟಕದಲ್ಲಿ ಪ್ರತಿ ವರ್ಷ ನಾಪತ್ತೆ ಆಗುವ ಮಕ್ಕಳ ಸಂಖ್ಯೆ ದುಪ್ಪಟ್ಟಾಗುತ್ತಿರುವುದು ಪಾಲಕರನ್ನು ಆತಂಕ ಕ್ಕೀಡು ಮಾಡಿದೆ. 2018ರಿಂದ 2023ರ(ಜುಲೈ)ವರೆಗೆ ಕಾಣೆಯಾಗಿರುವ 10,687 ಅಪ್ರಾಪ್ತರ ಪೈಕಿ 9,109 ಮಕ್ಕಳು ಪತ್ತೆಯಾಗಿದ್ದಾರೆ. ಬಾಕಿ ಉಳಿದ 1,578 ಮಕ್ಕಳು ಏನಾಗಿದ್ದಾರೆ ಎಂಬುದು ಪ್ರಶ್ನೆ ಯಾಗಿಯೇ ಉಳಿದಿದೆ. ಇದನ್ನು ಗಂಭೀರವಾಗಿ ಪರಿ ಗಣಿಸಿರುವ ರಾಜ್ಯ ಪೊಲೀಸ್ ಇಲಾಖೆಯು ಅಪರಿ ಚಿತ ಶವಗಳೊಂದಿಗೆ ನಾಪತ್ತೆಯಾದ ಮಕ್ಕಳನ್ನು ತಾಳೆ ಮಾಡಿ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್ (ಎಎಚ್‌ಟಿಯು) ಮೂಲಕ ವಿಶೇಷ ಕಾರ್ಯಾಚರಣೆ ಕೈಗೊಂಡು ಪತ್ತೆ ಕಾರ್ಯ ಚುರುಕುಗೊಳಿಸಿದೆ.
Related Articles
Advertisement
ನಾಪತ್ತೆಯಾದ ಬಹುತೇಕ ಕೇಸ್‌ಗಳನ್ನು ಹೆಚ್ಚಿನ ತನಿಖೆಗಾಗಿ ಎಎಚ್‌ಟಿಯು ಘಟಕಗಳಿಗೆ ವರ್ಗಾಯಿಸಲಾಗಿದೆ. ಆದರೆ, 1,578 ಮಕ್ಕಳ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಇನ್ನು ಮಕ್ಕಳ ರಕ್ಷಣೆಗಾಗಿ ವಿಶೇಷ ಘಟಕ ರಚಿಸಲಾಗಿದ್ದು, ಈ ಘಟಕದ ಸಿಬ್ಬಂದಿ ಶಾಲಾ-ಕಾಲೇಜು, ಹಾಸ್ಟೆಲ್‌ಗಳು, ಪಿಜಿ, ಬಸ್ ನಿಲ್ದಾಣ, ಹಾಸ್ಟೆಲ್‌ಗಳಲ್ಲಿ ಗಸ್ತು ತಿರುಗುತ್ತಿವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿದರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಅಪ್ರಾಪ್ತರ ಕಳ್ಳ ಸಾಗಾಣಿಕೆ ಮೇಲೆ ನಿಗಾ ಇರಿಸುತ್ತಾರೆ.
ಪಾಲಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು:
ನಾಪತ್ತೆಯಾದ ವಿಚಾರ ಗೊತ್ತಾದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಅಪರಿಚಿತರ ಜೊತೆ ಮಕ್ಕಳು ಹೆಚ್ಚು ಸಂಪರ್ಕ ಇಟ್ಟುಕೊಳ್ಳದಂತೆ ಎಚ್ಚರವಹಿಸಿ.
ಆಸೆ, ಆಮೀಷವೊಡ್ಡುವ ವ್ಯಕ್ತಿಗಳ ಮಾತಿಗೆ ಮಕ್ಕಳು ಮರುಳಾಗದಂತೆ ನೋಡಿಕೊಳ್ಳಿ.
ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕದೇ ಅವರ ಸಮಸ್ಯೆ ಪರಿಶೀಲಿಸಿ ಪರಿಹರಿಸಿ.
ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿಲ್ಲ. ಮಕ್ಕಳು ನಾಪತ್ತೆಯಾದ ಕೂಡಲೇ ಪಾಲಕರು ಪೊಲೀಸರಿಗೆ ದೂರು ನೀಡಿ.-ಬಿ.ದಯಾನಂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ.
-ಅವಿನಾಶ ಮೂಡಂಬಿಕಾನ