Advertisement
ಎಸ್.ವಿ ಕಶ್ಯಪ್ ಅವರ “ಅಬುìದ ಕಾಡು’ ನಾಟಕವನ್ನು ಸುಷ್ಮಾ ನಿರ್ದೇಶಿಸಿದ್ದು, ಕಾಡಿನಲ್ಲಿ ಒಂದು ರಿಯಾಲಿಟಿ ಷೋ ನಡೆಸುವ ಮೂಲಕ ನಮ್ಮ ಟಿ.ವಿ. ರಿಯಾಲಿಟಿ ಷೋಗಳ ಹಿಂದಿರುವ ಹುನ್ನಾರಗಳನ್ನು ನಾಟಕ ತೆರೆದಿಡುತ್ತದೆ. ರಿಯಾಲಿಟಿ ಷೋಗಳು ಜನರ ಮನೋಭಿಲಾಷೆಗಳನ್ನು ಆವರಿಸಿಕೊಂಡಿರುವ ಬಗೆಯನ್ನು ಅಣಕಿಸುತ್ತಲೇ, ಇಂಥ ಅಪದ್ಧತೆಗಳ ಸೃಷ್ಟಿಗೆ ಜನ ಕೂಡ ಕಾರಣರಾಗಿರುತ್ತಾರೆ ಎಂದು ಸೂಚ್ಯವಾಗಿ ಹೇಳುವ ನಾಟಕ ಇದಾಗಿದೆ.
ಶೈಲೇಶಕುಮಾರ್ ಅವರ “ಸಲಿಲ’ ನಾಟಕದಲ್ಲಿ ಅನ್ಯಗ್ರಹದಿಂದ “ಯಾಕೆ’ (ಈತ ಆಮೀರ್ ಖಾನನ “ಪೀಕೆ’ಯಂತೆ ರಂಗದ ಮೇಲೆ ಬಂದು ಎಲ್ಲರನ್ನು ರಂಜಿಸಿದ್ದು ಗಮನಾರ್ಹ) ಏಲಿಯನ್ ಓರ್ವ ಭೂಗ್ರಹದ ವಿಜಾnನಿಯೊಬ್ಬನ ಬಳಿ ತಮ್ಮ ಗೃÖದಲ್ಲಿ ನೀರಿನ ಉತ್ಪಾದನೆಗೆ ಬೇಕಾದ ಫಾರ್ಮುಲಾ ಕೇಳಿಕೊಂಡು ಬರುತ್ತಾನೆ. ಈ ನಾಟಕದಲ್ಲಿ ನೀರಿನ ಮಿತವ್ಯಯದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ವಿಜಾnನಿಯೊಬ್ಬ ಆ ಕಾರಣಕ್ಕೆ ತನ್ನ ಸಂಬಂಧಗಳನ್ನು ಕೂಡ ತ್ಯಜಿಸಲು ಸಿದ್ಧವಾಗುತ್ತಾನೆ ಎಂಬುದು ಈ ನಾಟಕದ ಕಥಾವಸ್ತು. ನೀರಿನ ಬಳಕೆಯಲ್ಲಿ ಎಚ್ಚರ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಮನೋಜ¡ವಾಗಿ ಪ್ರೇಕ್ಷಕರಿಗೆ ಮನದಟ್ಟು ಮಾಡಿದರು. ಯುವ ರಂಗಾಸಕ್ತ ಭರತ್ ಸ. ಜಗನ್ನಾಥ ರಚಿಸಿದ “ಸ್ವಪ್ನದ್ವೀಪ’ ನಾಟಕವನ್ನು ಎಸ್.ವಿ.ಕಶ್ಯಪ್ ನಿರ್ದೇಶಿಸಿದ್ದರು. “ಸ್ವಪ್ನದ್ವೀಪದಲ್ಲಿ’ ಕನಸವ್ವನಿಗೆ ಸಂಬಂಧಿಸಿದಂತೆ ಒಂದು ನಂಬಿಕೆ ಇಡೀ ಊರಿನ ಹಿರಿಯರಲ್ಲಿದೆ. ಊರಿನ ಎಲ್ಲರೂ ಪ್ರತಿದಿನ ತಮ್ಮ ದಿಂಬುಗಳನ್ನು ವಿನಿಮಯಿಸಿಕೊಂಡು ಮಲಗುತ್ತಾರೆ. ಆಗ ಅವರಿಗೆ ಆ ದಿಂಬಿನ ಮನೆಯವರ ನೋವು- ನಲಿವುಗಳ ಪರಿಚಯವಾಗಿ ಆ ಮೂಲಕ ಪರಸ್ಪರರು ಸಹಬಾಳ್ವೆ ಸಹಕಾರದಿಂದ ಒಬ್ಬರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಚಿಕ್ಕ ಮಕ್ಕಳಿಗೆ ಮಾತ್ರ ದಿಂಬು ಕೊಡಲೊಲ್ಲದ ಹಿರಿಯರನ್ನು ಪ್ರಶ್ನಿಸುವ ಚಿಕ್ಕವರ ಪ್ರಯತ್ನಗಳ ಸುತ್ತ ಈ ನಾಟಕ ರಚನೆಯಾಗಿದೆ. ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದ ಈ ನಾಟಕೋತ್ಸವ, ಫ್ಯಾಂಟಸಿ ಲೋಕದಿಂದ ವಾಸ್ತವಕ್ಕೆ ಮಕ್ಕಳ ರಂಗಭೂಮಿ ಹೊರಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಯಿತು.
Related Articles
Advertisement