Advertisement

ವಿಜ್ಞಾನ ಮಾದರಿಯಿಂದ ಮಕ್ಕಳಿಗೆ ಸುಲಭದಲ್ಲಿ ಅರಿವು

12:34 PM Jan 17, 2017 | |

ಹುಣಸೂರು: ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಲ್ಲಿ ವಿಜ್ಞಾನದ ಕುರಿತು ಅರಿವ ಕುತೂಹಲವಿರುತ್ತದೆ. ಶಿಕ್ಷಕರು ಸ್ಥಳೀಯ ವಾಗಿ ಲಭ್ಯವಾಗುವ ಸಾಮಗ್ರಿ ಗಳನ್ನು ಬಳಸಿಕೊಂಡು ವಿಜ್ಞಾನದ ಮಾದರಿ ತಯಾರಿಸಿ ಮಕ್ಕಳಲ್ಲಿ ಅರಿವು ಮೂಡಿಸ ಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ಶಿವಣ್ಣ ಸೂಚಿಸಿದರು.

Advertisement

ನಗರದ ಶಿಕ್ಷಕರ ಭವನದಲ್ಲಿ ಐದು ದಿನಗಳ ಕಾಲ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ವಿಜ್ಞಾನ ತರಬೇತಿ ಕಾರ್ಯಾಗಾರದಲ್ಲಿ, ಶಿಕ್ಷಕರೇ ತಯಾರಿಸಿದ್ದ ಸರಳ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಾಲೆಗಳಲ್ಲೇ ಮಾದರಿ ತಯಾರಿಸುವ ಮೂಲಕ ಮಕ್ಕಳಿಗೆ ಬೋಧಿಸಿದಲ್ಲಿ ಸುಲಭ ವಾಗಿ ಅರ್ಥವಾಗಲಿದೆ. ಪ್ರಾಥಮಿಕ ಹಂತ ದಿಂದಲೇ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಅನುಭವ, ಕಲಿಕೆ ಮತ್ತು ಹೊಸ ಮಾದರಿಗಳ ಅನ್ವೇಷಣೆಗೆ ಉತ್ತೇಜಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ಭಟ್‌ ಮಾತನಾಡಿ, ತಾಲೂಕಿನ ಶಿಕ್ಷಕರಿಗಾಗಿ ಕಳೆದ ಐದು ದಿನಗಳಿಂದ ವಿಜ್ಞಾನ ಮಾದರಿಗಳ ತಯಾರಿಕೆ, ತರಬೇತಿ, ವಸ್ತು ಪ್ರದರ್ಶನ ನಡೆಸ ಲಾಗಿದೆ. 4-5 ಸಾವಿರ ರೂ. ವೆಚ್ಚದಲ್ಲಿ ಕಂಪ್ಯೂಟರ್‌ ತಯಾರಿಕೆ ಸಾಧ್ಯ ಎಂಬುದನ್ನು ಶಿಕ್ಷಕರೇ ತೋರಿಸಿರುವುದು ಪ್ರಶಂಸನೀಯ.

ಶಿಕ್ಷಕ ಹುದ್ದೆ ಸಿಕ್ಕ ನಂತರ ತರಬೇತಿ- ಕಲಿಕೆ ಯನ್ನು ಮೊಟಕುಗೊಳಿಸದೆ, ನಿರಂತರ ಅಧ್ಯಯನ ನಡೆಸುವ ಮೂಲಕ ಜ್ಞಾನ ಹೆಚ್ಚಿಸಿ ಕೊಳ್ಳಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಯನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.  ತಾಲೂಕಿನ 24 ಕ್ಲಸ್ಟರ್‌ಗಳ 43 ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮೊಗಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next