Advertisement

ಮಕ್ಕಳ ಹಾಜರಾತಿ ಪ್ರಮಾಣ ದುಪ್ಪಟ್ಟು

11:20 PM Sep 08, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 6ರಿಂದ 8ನೇ ತರಗತಿಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಮೂರು ದಿನಗಳಲ್ಲೇ  ದುಪ್ಪಟ್ಟಾಗಿದೆ.

Advertisement

ಸೆ. 6ರಿಂದ ಸರಕಾರ 6ರಿಂದ 8ನೇ ತರಗತಿ ಆರಂಭಿಸಿತ್ತು. ಮೂರೂ ತರಗತಿಗಳಿಗೆ ಮೊದಲ ದಿನ ಶೇ.23ರಿಂದ 30ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಬುಧವಾರ 3  ತರಗತಿಗಳ ಹಾಜರಾಗಿ ಪ್ರಮಾಣ ಶೇ. 45ಕ್ಕಿಂತ ಹೆಚ್ಚಿದೆ.

ಎರಡನೇ ದಿನ ಶಿಕ್ಷಣ ಇಲಾಖೆಯ ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಸ್‌ಎಟಿಎಸ್‌) ತಂತ್ರಾಂಶದ ಸರ್ವರ್‌ ಬ್ಯುಸಿಯಿಂದಾಗಿ ಹಾಜರಾತಿ ಮಾಹಿತಿ ಲಭ್ಯವಾಗಿರಲಿಲ್ಲ. ಈಗ ಸರ್ವರ್‌ ದುರಸ್ತಿಗೊಳಿಸಿರುವ ಶಿಕ್ಷಣ ಇಲಾಖೆ ಮೂರನೇ ದಿನದ ಹಾಜರಾತಿ ಮಾಹಿತಿ ನೀಡಿದ್ದು,  ಏರಿಕೆ ಕಂಡುಬಂದಿದೆ.  ಬುಧವಾರ 6ನೇ ತರಗತಿಗೆ ಶೇ.46, 7ನೇ ತರಗತಿ ಶೇ.44.8 ಮತ್ತು 8ನೇ ತರಗತಿ ಶೇ.46.65ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ.48.71 ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯ ಅಂಕಿ-ಅಂಶಗಳನ್ನು ಅಪ್‌ಲೋಡ್‌ ಮಾಡಿದ್ದು, ಶೇ.51.29 ಶಾಲೆಗಳು ಅಪ್‌ಲೋಡ್‌ ಮಾಡಿಲ್ಲ.  ಸೆ.23ರಿಂದ ಆರಂಭಗೊಂಡಿರುವ 9 ಮತ್ತು 10ನೇ ತರಗತಿ ಹಾಜರಾತಿ ಕ್ರಮವಾಗಿ ಶೇ.59.62 ಹಾಗೂ ಶೇ.61.86ರಷ್ಟು ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next