Advertisement

ಬಾಲ್ಯದಲ್ಲೇ ಬೊಜ್ಜು

10:40 PM Aug 10, 2019 | Team Udayavani |

ಕಳೆದ ಸಂಚಿಕೆಯಿಂದ- ಕ್ಯಾಲೊರಿ ಸಮತೋಲನ: ಆರೋಗ್ಯಯುತ ಆಹಾರಾಭ್ಯಾಸ
ಬೆಳೆಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ ಕ್ಯಾಲೊರಿಗಳನ್ನು ಸಮತೋಲನ ಮಾಡಿಕೊಳ್ಳುವುದರ ಒಂದು ಭಾಗವೆಂದರೆ ಸರಿಯಾದ ಪ್ರಮಾಣದ ಪೌಷ್ಟಿಕಾಂಶ ಮತ್ತು ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ಒದಗಿಸುವ ಆಹಾರ ಸೇವನೆ. ಇಷ್ಟದ ಆಹಾರವಸ್ತುಗಳನ್ನು ಇನ್ನಷ್ಟು ಆರೋಗ್ಯಕರವಾಗಿಸಿಕೊಳ್ಳುವುದು ಮತ್ತು ಕ್ಯಾಲೊರಿ ಸಮೃದ್ಧವಾಗಿರುವ ನಾಲಿಗೆಗೆ ರುಚಿಕರವಾದ ಆಹಾರಗಳ ಆಮಿಷವನ್ನು ದೂರ ಮಾಡುವ ಮೂಲಕ ಆರೋಗ್ಯಕರ ಆಹಾರಾಭ್ಯಾಸಗಳನ್ನು ಬೆಳೆಸಿಕೊಳ್ಳುವುದರಲ್ಲಿ ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡಬಹುದು.

Advertisement

ಆರೋಗ್ಯಪೂರ್ಣ ಆಹಾರಾಭ್ಯಾಸಗಳನ್ನು ಪ್ರೋತ್ಸಾಹಿಸಿ
-ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ – ವರ್ಣರಂಜಿತವಾಗಿರುವ ವೈವಿಧ್ಯಮಯ ಹಣ್ಣು ಮತ್ತು ತರಕಾರಿಗಳನ್ನು ಮಕ್ಕಳಿಗೆ ಆಹಾರವಾಗಿ ಪ್ರತಿದಿನವೂ ಒದಗಿಸಬೇಕು. ಹಣ್ಣು ಮತ್ತು ತರಕಾರಿಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸಬೇಕು. ತರಕಾರಿಗಳನ್ನು ಸೇವಿಸಲು ಮಗು ನಿರಾಕರಿಸಿದರೆ ಅವುಗಳನ್ನು ಉಪಯೋಗಿಸುವ ವಿಧಾನಗಳನ್ನು ಸೃಜನಶೀಲವಾಗಿಸಬೇಕು. ವಿವಿಧ ಆಕಾರಗಳಲ್ಲಿ ಹಣ್ಣು ತರಕಾರಿಗಳನ್ನು ಕತ್ತರಿಸಿಕೊಟ್ಟು ಮನವೊಲಿಸಬಹುದು.
– ಆರೋಗ್ಯಯುತ ಉಪಾಹಾರಗಳನ್ನು ಕೊಡಿ – ಮಕ್ಕಳ ಆಹಾರಾಭ್ಯಾಸದಲ್ಲಿ ಉಪಾಹಾರ ಸೇವನೆ ಒಂದು ಮುಖ್ಯ ಭಾಗವಾಗಿದೆ; ಇದನ್ನು ನಿರುತ್ತೇಜನಗೊಳಿಸಬಾರದು. ಬದಲಾಗಿ, ಅವುಗಳು ಕಡಿಮೆ ಕಿಲೊಜೌಲ್‌ ಇದ್ದು, ಹೆಚ್ಚು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಿ. ಹಣ್ಣು ಮತ್ತು ತರಕಾರಿಗಳಿಂದ ಉತ್ಕೃಷ್ಟ ಉಪಾಹಾರಗಳನ್ನು ತಯಾರಿಸಿ ನೀಡಿ.
– ಆನಾರೋಗ್ಯಕರ ಪಾನೀಯಗಳನ್ನು ಕಡಿಮೆ ಮಾಡಿ – ಸಕ್ಕರೆ ಬೆರೆಸಿದ ಅನಾರೋಗ್ಯಕರ ಪಾನೀಯಗಳನ್ನು ಕಡಿಮೆ ಕೊಡಿ. ನೀರು ಮತ್ತು ಕಡಿಮೆ ಕೊಬ್ಬಿರುವ ಹಾಲಿನ ಬಳಕೆಯನ್ನು ಪ್ರೋತ್ಸಾಹಿಸಿ.

-ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next