ಶಕ್ತಿ
ಶಕ್ತಿಯು ಪ್ರಧಾನವಾಗಿ ಮೂರು ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಸೃಷ್ಟಿಯಾಗುತ್ತದೆ- ಪ್ರೊಟೀನ್, ಕೊಬ್ಬು ಮತ್ತು ಕಾಬೊìಹೈಡ್ರೇಟ್‌ಗಳು.
Advertisement
ಕಾಬೊìಹೈಡ್ರೇಟ್ಕಾಬೊìಹೈಡ್ರೇಟ್‌ಗಳು ಶಕ್ತಿಯ ಒಂದು ಪ್ರಮುಖ ಮೂಲವಾಗಿದ್ದು, ವಿಟಮಿನ್, ಖನಿಜಾಂಶಗಳು ಮತ್ತು ಸೂಕ್ಷ್ಮ ಧಾತುಗಳ ಸರಬರಾಜಿಗೆ ಸಹಾಯ ಮಾಡುತ್ತವೆ. ಸಮರ್ಪಕ ಪ್ರಮಾಣದಲ್ಲಿ ಕಾಬೊìಹೈಡ್ರೇಟ್ ಸೇವಿಸಿದರೆ ಮಾತ್ರ ಆಹಾರದ ನಾರಿನಂಶ, ಕಬ್ಬಿಣಾಂಶ, ಥಯಮೀನ್, ನಿಯಾಸಿನ್, ರೈಬೊಫ್ಲೇವಿನ್ ಮತ್ತು ಫೋಲಿಕ್ ಆ್ಯಸಿಡ್ ಹೀರಿಕೆಗೆ ಪೂರಕವಾಗುತ್ತದೆ. ಕಾಬೊìಹೈಡ್ರೇಟ್‌ಗಳು ಒಟ್ಟು ಶಕ್ತಿ ಸೇವನೆಯ ಶೇ.45ರಿಂದ ಶೇ.65ರಷ್ಟು ಇರಬೇಕು. ಇಡೀ ಗೋಧಿಯ ಬ್ರೆಡ್, ಕುಚ್ಚಿಗೆ ಅನ್ನ, ಸಜ್ಜೆ, ರಾಗಿ, ಜೋಳ ಮತ್ತು ನವಣೆ ಇತ್ಯಾದಿಗಳನ್ನು ಉಪಯೋಗಿಸಿ. ಬಿಳಿ ಬ್ರೆಡ್, ಪಾಸ್ತಾದಂತಹ ಸಂಸ್ಕರಿತ ಆಹಾರಗಳನ್ನು ವರ್ಜಿಸಿ.
– ಪ್ರೊಟೀನ್
ನಾಲ್ಕರಿಂದ 18 ವರ್ಷ ವಯಸ್ಸಿನ ಮಕ್ಕಳ ಆಹಾರದಲ್ಲಿ ಪ್ರೊಟೀನ್ ಶೇ.10ರಿಂದ 38 ಪ್ರಮಾಣದಲ್ಲಿ ಇರಬೇಕು. ಉದಾಹರಣೆಗೆ, ತೆಳು ಮಾಂಸ, ಕೋಳಿಮಾಂಸ, ಮೊಟ್ಟೆ, ಬೀನ್ಸ್ ಮತ್ತು ಬಟಾಣಿ, ಸೋಯಾ ಉತ್ಪನ್ನಗಳು ಇತ್ಯಾದಿ. ಕೆಂಪು ಮಾಂಸವನ್ನು ವರ್ಜಿಸಿ.