Advertisement
ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸುವಷ್ಟರಲ್ಲೇ ಬೆಳಗ್ಗೆ ಬೇಗೆ ಏಳಬೇಕಿತ್ತು. ಅಮ್ಮನಲ್ಲಿ ರಾತ್ರಿಯೇ ವಿನಂತಿ ಮಾಡಿ ಬೇಗ ಎಬ್ಬಿಸಲು ಹೇಳಿರುತ್ತಿದೆ. ಆದರೆ, ಚುಮು ಚುಮು ಚಳಿಗೆ ಮತ್ತೆ ನಿದ್ದೆ ಜಾರಿ ಬಿಡುತ್ತಿದ್ದೆ. ಆಗ ಅಮ್ಮ ಮಾತ್ರ, ನನಗೆ ಎಬ್ಬಿಸಲು ಹೇಳಿ, ಮತ್ತೇ ನೀನು ಮಲಗಿದ್ದೀಯಾ ಎಂದು ಗದರಿ, ಮುಖಕ್ಕೆ ನೀರು ಎರಚುತ್ತಿದ್ದಳು. ಅಷ್ಟರಲ್ಲೇ ಅಪ್ಪನನ್ನು ಕಂಡಾಗಲೇ ಹೆದರಿ, ಓಡಿ ಹೋಗಿ ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದೆ.
Related Articles
Advertisement
ಊಟದಲ್ಲೂ ಸ್ವರ್ಧೆ ಯಾರು ಮೊದಲು ಊಟ ಮಾಡಿ ಬರುತ್ತಾರೆ. ಅದಕೋಸ್ಕರ ತಾ ಮೊದಲು ನಾ ಮೊದಲು ಕುಳಿತುಕೊಳ್ಳಲು ಜಗಳಗಳೇ ನಡೆಯುತ್ತಿತ್ತು. ಅದು ಅಲ್ಲಿಗೆ ಮುಗಿಯುತ್ತಿತ್ತು. ಮತ್ತೆ ಎಲ್ಲರೂ ಖುಷಿಯಿಂದ ಸಮಯ ಕಳೆಯುತ್ತಿದ್ದೆವು. ಶಾಲೆಯಲ್ಲಿ ನಡೆಯುವ ಯಾವುದೇ ಸ್ಪರ್ಧೆ, ಕ್ರೀಡೆಗಳಾಗಿರಲಿ ಎಲ್ಲರೂ ಹುಮ್ಮಸ್ಸಿನಿಂದಲೇ ಭಾಗವಹಿಸುತ್ತಿದ್ದೆವು. ಸ್ಪರ್ಧೆಯ ಹೊರತಾಗಿಯೂ ನಮ್ಮ ಸ್ನೇಹ ಗಟ್ಟಿಯಾಗಿತ್ತು. ಗೆದ್ದವರೂ, ಸೋತವರೂ ಇಬ್ಬರೂ ಸಂತೋಷಪಡುತ್ತಿದ್ದೆವು.
ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಶುಭ್ರ ಬಟ್ಟೆ ಧರಿಸಿ, ಬ್ಯಾಡ್ಜ್ ಕಟ್ಟಿಕೊಂಡು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಆಚರಿಸುತ್ತಿದ್ದೆವು. ನೃತ್ಯ ಮಾಡಿ ಸಂತೋಷಪಡುತ್ತಿದ್ದೆವು. ನಿಷ್ಕಲ್ಮಶ ಮನಸ್ಸಿನಿಂದ ಎಲ್ಲರ ಜತೆ ಮಾತನಾಡುತ್ತಾ ಖುಷಿ-ಖುಷಿಯಾಗಿ ಸಮಯ ಕಳೆಯುತ್ತಿದ್ದೆವು.
ಮತ್ತೆ ಅದೇ ಬೆಂಚು, ಡೆಸ್ಕ್, ಬಾಲ್ಯದ ನೆನಪುಗಳು ಅಚ್ಚಳಿಯದಂತೆ ಕಣ್ಣೆದುರಿಗೆ ಬಂದು ಹೋಗುತ್ತದೆ. ಹಾಗೆಯೇ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅದೇ ಬ್ಯಾಗ್ ಹಾಕಿ ಮತ್ತೆ ಶಾಲೆಗೆ ಹೋಗುವಂತಿದ್ದರೆ ಎಷ್ಟೊಂದು ಖುಷಿ ನೀಡುತ್ತಿತ್ತು.
ಹರ್ಷಿತಾ ವಿಟ್ಲ
ಆಳ್ವಾಸ್ ಕಾಲೇಜು, ಮೂಡುಬಿದಿರೆ