Advertisement

ಮಕ್ಕಳಿಂದ ಮಾನವ ಸಂಪನ್ಮೂಲ ಅಭಿವೃದ್ಧಿ

04:47 PM Nov 16, 2020 | Suhan S |

ಮಂಡ್ಯ: ಮಕ್ಕಳು ಮುಂದಿನ ಪ್ರಜೆಗಳು. ಯಾವುದೇದೇಶ ಅಭಿವೃದ್ಧಿ ಹೊಂದಲು, ಅಭಿವೃದ್ಧಿಶೀಲ ರಾಷ್ಟ್ರ ಎನಿಸಿಕೊಳ್ಳಲು ಮಾನವ ಸಂಪನ್ಮೂಲ ಅಭಿವೃದ್ಧಿಯಾಗಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸುವ ಮಕ್ಕಳ ಅಭಿವೃದ್ಧಿಯಾದರೆ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌. ರಾಜಮೂರ್ತಿ ಹೇಳಿದರು.

Advertisement

ತಾಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದ ರಂಗ ಮಂದಿರದಲ್ಲಿ ಮಕ್ಕಳ ಸಹಾಯವಾಣಿ 1098, ನೋಡೆಲ್‌ ಬರ್ಡ್ಸ್‌ ಸಂಸ್ಥೆ, ಕೊಲಾಬ್‌ ಸಂಸ್ಥೆ, ವಿಕಸನ ಸಂಸ್ಥೆ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಡೆದ ಮಕ್ಕಳ ಸಹಾಯವಾಣಿ ಸ್ನೇಹಿ ಆಂದೋಲನ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಿಂದ ಪ್ರಗತಿ ಸಾಧ್ಯ: ನ.14 ಜವಾಹರಲಾಲ್‌ ಅವರ ಜನ್ಮದಿನವಾಗಿದ್ದು, ಅವರು ಮಕ್ಕಳ ಮೇಲೆ ಇಟ್ಟಿದ್ದ ಪ್ರೀತಿಯಿಂದ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಮಕ್ಕಳ ಸಹಾಯವಾಣಿವತಿಯಿಂದ ಹಲವಾರು ಕಾರ್ಯಕ್ರಮ ರೂಪಿಸಿದ್ದು, ಮಕ್ಕಳಿಗೆ ದೊರಕಬೇಕಾದ ಸೌಲಭ್ಯ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮಕ್ಕಳ ಸಮಗ್ರ ಬೆಳವಣಿಗೆ ದೇಶದ ಅಭಿವೃದ್ಧಿ ಅವಲಂಬಿಸಿದೆ. ಮಕ್ಕಳನ್ನು ಸರಿಯಾದ ರೀತಿ ಬೆಳೆಸಿ, ಉತ್ತಮ ಶಿಕ್ಷಣ ಕೊಡಿಸಿದರೆ ಕುಟುಂಬ, ಗ್ರಾಮ, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿ ಕಾಣುತ್ತದೆ ಎಂದರು.

ಅಧಿಕಾರಿಗಳೊಂದಿಗೆ ಕೈಜೋಡಿಸಿ: ಗ್ರಾಪಂ ಮೂಲಕಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದ್ದು,ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕಿಸಲಾಗುತ್ತಿದೆ. ಚುನಾಯಿತ ಜನ ಪ್ರತಿನಿಧಿಗಳು ಮಕ್ಕಳ ಪೋಷಣೆ, ಜವಾಬ್ದಾರಿಯನ್ನು ತಿಳಿಸಿಕೊಡುವ ಜೊತೆಗೆ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಶಿಕ್ಷಣ, ಆರೋಗ್ಯ ಅವಶ್ಯ: ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ, ಆರೋಗ್ಯ ಕೊಡುವುದು ಅತ್ಯಾವಶ್ಯಕವಾಗಿದೆ. ಮಕ್ಕಳನ್ನು ಕೆಲಸಕ್ಕೆ ದೂಡದೆಅವರ ಅಭಿವೃದ್ಧಿಗೆ ಮುಂದಾಗಬೇಕು. ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಭಿಕ್ಷಾಟನೆಗೆ ದೂಡಲಾಗುತ್ತಿದೆ. ಇಂತಹ ಪಾಪ ಮತ್ತೂಂದಿಲ್ಲ. ಮುಂದೆ ದೊಡ್ಡ ಭವಿಷ್ಯ ಹೊಂದಿರುವ ಮಕ್ಕಳನ್ನು ಬದುಕನ್ನು ಚಿವುಟಬಾರದುಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಅಪೌಷ್ಠಿಕತೆ ಕಾಣುತ್ತಿದೆ. ಬಾಲ ಕಾರ್ಮಿಕರ ಪದ್ಧತಿಗೆ ದೂಡುವುದು ಕಾನೂನುಉಲ್ಲಂಘನೆಯಾಗಿದೆ. ಅಲ್ಲದೆ, ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಅಂತಹ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಸಹಾಯವಾಣಿ 1098, ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಮಕ್ಕಳನ್ನು ರಕ್ಷಿಸಿ: ಬರ್ಡ್ಸ್‌ ಸಂಸ್ಥೆ ಮಿಕ್ಕೆರೆ ವೆಂಕಟೇಶ್‌ ಮಾತನಾಡಿ, ಸಮಾಜದಲ್ಲಿ ಇನ್ನೂ ಮಕ್ಕಳು ಹಲವಾರು ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಂತಹ ಮಕ್ಕಳನ್ನು ರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ಮಕ್ಕಳ ಸಹಾಯವಾಣಿ ವತಿಯಿಂದ ಮಕ್ಕಳ ದಿನಾಚರಣೆಅಂಗವಾಗಿ ಒಂದುವಾರಗಳ ಕಾಲ ಮಕ್ಕಳ

ಸ್ನೇಹಿ ಪಂಚಾಯ್ತಿ ಮಾಡಲು ಹಲವಾರು ಕಾರ್ಯಕ್ರಮ ರೂಪಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಮಾಹಿತಿ ಕುರಿತು ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು. ಮಕ್ಕಳಿಗೆ ರಕ್ಷಾ ಬಂಧನ ಕಟ್ಟಲಾಯಿತು.

ತಾಪಂ ಸದಸ್ಯೆ ಕವಿತಾ ಜ್ಞಾನಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೇತನ್‌ಕುಮಾರ್‌, ಸಬ್‌ ಇನ್ಸ್ಪೆಕ್ಟರ್‌ ಹರೀಶ್‌, ಪಿಡಿಒ ಎಚ್‌.ಎಸ್‌.ಶ್ರೀಧರ್‌, ಬಿಆರ್‌ಪಿ ರಘು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ರಾಜೇಂದ್ರ, ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಟಿ.ಜಿ.ಇಂಪನಾ, ಆರ್‌.ಶೋಭಾವತಿ, ಭವ್ಯ, ಮಾನಸ, ನಂದಿನಿ, ಸುಜಾತ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next