ಬೆಂಗಳೂರು: ಅಂಗನವಾಡಿಗಳಲ್ಲಿ ಪಾರದರ್ಶ ಕತೆ ತರಲು ಬಾಲವಿಕಾಸ ಸಮಿತಿ ರಚಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸರ್ಕಾರದ 30ಕ್ಕೂ ಅಧಿಕ ಯೋಜನೆಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಲುಪಲಿದ್ದು, ಗ್ರಾಮೀಣ ಭಾಗದಲ್ಲಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲವೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ 62,540 ಅಂಗನವಾಡಿ ಗಳು, 3,331 ಮಿನಿ ಅಂಗನವಾಡಿಗಳು ಸೇರಿ 66 ಸಾವಿರ ಅಂಗನವಾಡಿಗಳಿದ್ದು, 6 ತಿಂಗ ಳಿಂ ದ 6 ವರ್ಷದ 38. 64 ಲಕ್ಷ ಮಕ್ಕಳಿ ದ್ದಾರೆ. ಇದರಲ್ಲಿ ಅರ್ಧದಷ್ಟು ಅಂಗನವಾ ಡಿಗೆ ಹೋಗುತ್ತಿದ್ದು, ಬಹುತೇಕ ಮಕ್ಕಳು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಅದಕ್ಕಾಗಿ ಸರ್ಕಾರ ಬಾಲವಿಕಾಸ ಸಮಿತಿ ರಚಿಸಿದ್ದು, ಸಮಿತಿಯು ಅಂಗನವಾಡಿಗಳ ಕಾರ್ಯವೈಖರಿ ಬಗ್ಗೆ ನಿಗಾ ವಹಿಸಲಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮೇಲೆ ಅವ್ಯವಹಾರ ಆರೋಪ ಕೇಳಿಬಂದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಅಧಿಕಾರ ನೀಡಲಾಗಿದೆ.
ಆರ್ಥಿಕ ವ್ಯವಹಾರಗಳ ನಿರ್ವಹಣೆ: ಮಕ್ಕಳಿಗೆ ಹಾಗೂ ಮಾತೃ ಪೂರ್ಣ ಯೋಜನೆಯ ಫಲಾನುಭವಿ ಗಳಿಗೆ ಸ್ಥಳಿಯವಾಗಿ ತರಕಾರಿ, ಮೊಟ್ಟೆ, ಚಿಕ್ಕಿ ಖರೀದಿ,ಅಂಗನವಾಡಿ ದಿನಾಚರಣೆ ವೆಚ್ಚ ಕ್ಕಾಗಿ ಹಾಗೂ ಬಾಲಸ್ನೇಹಿ ಯೋಜನೆಯಡಿ ಬಿಡುಗಡೆ ಮಾಡಲಾಗುವ ಅಥವಾ ಯೋಜನೆಯ ಉದ್ದೇಶ ಈಡೇರಿಕೆಗಾಗಿ ಯಾವುದೇ ಅನುದಾನವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿ ಹೆಸರಿನಲ್ಲಿ ಜಂಟಿ ಖಾತೆ ತೆರೆದು ನಿರ್ವಹಣೆ ಮಾಡುವ ಅಧಿಕಾರ ಸಮಿತಿಗೆ ನೀಡಲಾಗಿದೆ.
ಸಮಿತಿಯಲ್ಲಿ ಯಾರು ಇರುತ್ತಾರೆ?: ಅಂಗನವಾಡಿ ಕೇಂದ್ರದ ಯಾವುದಾದರೂ ಒಂದು ಫಲಾನುಭವಿ ಮಗು ವಿನ ತಾಯಿ (ಅಧ್ಯಕ್ಷೆ), ಸಂಬಂಧ ಪಟ್ಟ ವಾರ್ಡ್‌ನ ಸದಸ್ಯರು, ಅಂಗನವಾಡಿ ವ್ಯಾಪ್ತಿಯಲ್ಲಿನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯರು, ಆಶಾ ಕಾರ್ಯಕರ್ತೆ, ಅಂಗನವಾಡಿ ವ್ಯಾಪ್ತಿಯಲ್ಲಿನ ಪ್ರಾಯ ಪೂರ್ವ ಬಾಲಕಿ, ಅಂಗನವಾಡಿಯ ಇಬ್ಬರು ಮಕ್ಕಳ ಪೋಷಕರು (ಪರಿಶಿಷ್ಟ ಜಾತಿ ಮತ್ತು ಪಂಗಡದವರು), ಅಂಗನ ವಾಡಿ ಫಲಾನುಭವಿಯಾದ ಒಂದು ಮಗುವಿನ ಅಜ್ಜಿ, ಅಂಗನವಾಡಿ ಫಲಾನುಭವಿಯಾದ ಮಗುವಿನ ತಂದೆ, ಸಮು ದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆ ಯ ಪ್ರತಿನಿಧಿ, ಸ್ತ್ರೀ ಶಕ್ತಿ ಗುಂಪಿನ ಒಬ್ಬರು ಪ್ರತಿನಿಧಿ (ಸದಸ್ಯರು), ಅಂಗನವಾಡಿ ಕಾರ್ಯಕರ್ತೆ ( ಸದಸ್ಯ ಕಾರ್ಯದರ್ಶಿ ) ಸಮಿತಿಯಲ್ಲಿ ಇರಲಿದ್ದಾರೆ.
ಅಂಗನವಾಡಿ ಕೇಂದ್ರದ ಮೂಲಕ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂ ತಿಯರು ಸೇರಿ ಇನ್ನಿತರರಿಗೆ ವಿವಿಧ ಯೋಜನೆಗಳು ತಲುಪಲಿದ್ದು, ಇದರಲ್ಲಿ ಅವ್ಯವಹಾರ ನಡೆಯು ತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಬಾಲವಿಕಾಸ ಸಮಿತಿ ರಚಿಸಲಾಗಿದೆ.
-ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ