Advertisement

ನರಭಕ್ಷಕ ಚಿರತೆಗೆ ಬಾಲಕ ಬಲಿ: ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಶಾಸಕ

10:02 AM Jan 11, 2020 | Mithun PG |

ತುಮಕೂರು: ನರಭಕ್ಷಕ ಚಿರತೆಗೆ ಬಾಲಕ ಬಲಿ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದ  ಶಾಸಕ ಗೌರಿಶಂಕರ್ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ  ಮುತ್ತಿಗೆ  ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Advertisement

ನೂರಕ್ಕೂ ಹೆಚ್ಚು ಬೆಂಬಲಿಗರರೊಂದಿಗೆ  ಶಾಸಕ ಗೌರಿಶಂಕರ್ ತುಮಕೂರಿನ ಅಮರ್ ಜ್ಯೋತಿ ನಗರದ ಕಚೇರಿಯ ಮುಂದೆ  ಪ್ರತಿಭಟನೆ  ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ  ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮ 5 ವಷ೯ದ ಸಮಥ೯ಗೌಡನನ್ನ ಚಿರತೆಯೊಂದು ಬಲಿ ಪಡೆದಿತ್ತು.  ಅದರಿಂದ ಕೂಡಲೇ ಚಿರತೆ ಹಾವಳಿ ತಪ್ಪಿಸುವಂತೆ ಹಾಗೂ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆಗೆ ಮಾತನಾಡಿದ ಉಪ ಅರಣ್ಯ  ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ , ಮೃತ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡಲಾಗುವುದು.  ಈವರೆಗೆ  ಸರಕಾರದಿಂದ 5 ಲಕ್ಷ  ಪರಿಹಾರ ನೀಡಲಾಗುತ್ತಿತ್ತು.ಆದರೇ  ಇದೇ ಮೊದಲ ಬಾರಿಗೆ 7.5 ಲಕ್ಷ  ಪರಿಹಾರ  ನೀಡಲಾಗುತ್ತಿದೆ ಎಂದು  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next