Advertisement

ಅಪ್ಪನ ಹುಚ್ಚಾಟ : ಪುಟ್ಟ ಮಗಳಿಗೆ ಬೀಡಿ ಸೇದಿಸಿ ಮೂಗಿನಲ್ಲಿ ಹೊಗೆ ಬಿಡಲು ಹೇಳಿದ ಧೂರ್ತ

08:13 PM Nov 11, 2021 | Team Udayavani |

ಚಿಕ್ಕಮಗಳೂರು: ಮಕ್ಕಳನ್ನು ತಿದ್ದಿ ತೀಡಿ ಬದುಕಿನ ನೇರ ದಾರಿ ತೋರಬೇಕಾದವರೇ ಅಡ್ಡದಾರಿ ತೋರಿದರೆ? ಧೂರ್ತನೊಬ್ಬ ಪುಟ್ಟ ಬಾಲಕಿಗೆ ಬೀಡಿ ಕೊಟ್ಟು ಮೂಗಿನಲ್ಲಿ ಹೊಗೆ ಬಿಡಲು ಹೇಳಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.

Advertisement

ಮೂಡಿಗೆರೆ ತಾಲೂಕಿನ ಅಂಗಡಿ ಸಮೀಪದ ಜಾಣಿಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗಳ ಕೈಗೆ ಬೀಡಿ ಕೊಟ್ಟು, ಸೇದಿಸಿ ಅದರ ವಿಡಿಯೋ ತೆಗೆದು ವಿಕೃತ ಆನಂದ ಪಡೆದಿದ್ದಾನೆ ಎನ್ನಲಾಗಿದ್ದು. ಆತನ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಳೆಯುವ ಮಕ್ಕಳ ಮುಂದೆ ಧೂಮಪಾನ, ಮಧ್ಯಪಾನದಂತಹ ದುಶ್ಚಟ ಮಾಡುವುದೇ ತಪ್ಪು. ಅದರಲ್ಲೂ ತಮ್ಮ ಮಗಳ ಕೈಗೆ ಬೀಡಿ ಕೊಟ್ಟು ವಿಡಿಯೋ ಮಾಡಿದ್ದಲ್ಲದೆ ಮೂಗಿನಿಂದ ಹೊಗೆ ಬಿಡು ಎಂದು ಹೇಳಿದ್ದಾನೆ.ಈ ವಿಡಿಯೋ ನೋಡಿದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಾಷೆಗೋ ಅಥವಾ ಹುಚ್ಚಾಟಕ್ಕೂ ಮಗಳ ಕೈಗೆ ಬೀಡಿ ಕೊಟ್ಟು ವಿಡಿಯೋ ಮಾಡಿರುವುದು ಸರಿಯಲ್ಲ. ಆ ವ್ಯಕ್ತಿ ಯಾರೇ ಆಗಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next