ಆಗ್ರಹಿಸಿದರು.
Advertisement
ಈ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಅನೀಸ್ ಪಾಷಾ, ಮುಗ್ಧ ಬಾಲಕಿಯನ್ನು ದೇವಸ್ಥಾನದಲ್ಲಿ ಕೂಡಿಹಾಕಿ, ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಇಡೀ ಮಾನವ ಕುಲಕ್ಕೆ ಕಂಟಕಪ್ರಾಯರು. ಈ ಘಟನೆ ದೇಶದ ಮಕ್ಕಳು, ಪೋಷಕರ ಮೇಲೆ ಗಾಢ ಪರಿಣಾಮ ಬೀರಿದೆ. ಇಂತಹ ನೀಚ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕೆಲ ಹಿಂದು ಪರ ಸಂಘಟನೆಗಳು ಆರೋಪಿಗಳ ಪರ ನಿಂತಿವೆ. ನಮ್ಮ ದೇಶದ ಸ್ವಾಸ್ಥ್ಯ, ಸಂಸ್ಕೃತಿ ಹಾಳುಗೆಡುವುವ ದುಷ್ಕರ್ಮಿಗಳ ಪರ ನಿಂತಿರುವವರ ವಿರುದ್ಧ ಸಹ ಕ್ರಮ ವಹಿಸಬೇಕಿದೆ. ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ಯೋಜನೆ ಜಾರಿ ಮಾಡಿದೆ. ಆದರೆ, ಇಂತಹ ದುಷ್ಕೃತ್ಯಗಳ ತಡೆಗೆ ಯಾವುದೇ ಕ್ರಮ ವಹಿಸಲ್ಲ ಎಂದು ಅವರು ಆರೋಪಿಸಿದರು. ವೇದಿಕೆಯ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನಿ, ಫಾಸ್ಟರ್ ರಾಜಶೇಖರ್, ಕತ್ತಲಗೆರೆ ಡಿ. ತಿಪ್ಪಣ್ಣ, ವಿಜಯಕುಮಾರ್, ಕತ್ತಲಗೆರೆ ಡಿ. ತಿಪ್ಪಣ್ಣ, ವಿಜಯಕುಮಾರ್, ಅಹಮದ್ ಷರೀಫ್, ರಾಘು ದೊಡ್ಡಮನಿ, ಬಿ.ಟಿ. ವಿಶ್ವನಾಥ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ದುಷ್ಕೃತ್ಯ ಖಂಡಿಸಿ, ಆರೋಪಿಗಳಿಗೆ ಕಠಿಣಿ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.