ದೋಟಿಹಾಳ: ವಾಂತಿಭೇದಿಗೆ ಮಗುವೊಂದು ಮೃತಪಟ್ಟಿರುವ ಘಟನೆ ಸಮೀಪದ ಬಿಜಕಲ್ ಗ್ರಾಮದಲ್ಲಿ ನಡೆದಿದೆ.
ವರ್ಷದ ನಿರ್ಮಲಾ ಈರಪ್ಪ ನೀರಲೂಟಿ(10) ಮೃತ ಬಾಲಕಿ.
ಬಿಜಕಲ್ ಗ್ರಾಮದಲ್ಲಿ ಕಳೆದ 6-7 ದಿನಗಳಿಂದ ವಾಂತಿಭೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದು. ಗುರುವಾರ ಬೆಳಿಗ್ಗೆ ಹತ್ತು ವರ್ಷದ ಮಗು ಸಾವು ವಾಂತಿ ಭೇದಿಯಿಂದ ಸಾವನ್ನಪ್ಪಿದೆ. ಬುಧವಾರ ರಾತ್ರಿಯ ವೇಳೆ ಮಗುವಿಗೆ ಅತಿಯಾದ ವಾಂತಿ ಭೇದಿ ಆಗಿರುವ ಪರಿಣಾಮ ಮಗು ಮೃತಪಟ್ಟಿದೆ.
ಬಾಲಕಿಯ ತಂದೆ – ತಾಯಿ ದುಡಿಯಲು ಹೊರ ಹೋಗಿದ್ದರಿಂದ ಮಗುನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಇದ್ದ ನಿರ್ಮಲಾ ಈರಪ್ಪ ನೀರಲೂಟಿಗೆ ಬುಧವಾರ ರಾತ್ರಿ ಭೇದಿ ಹೆಚ್ಚಾಗಿದೆ. ಸೂಕ್ತ ಸಮಯದಲ್ಲಿ ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಿಲ್ಲ ಎನ್ನಲಾಗಿದೆ.
Related Articles
ಸ್ಥಳಕ್ಕೆ ಡಿ ಎಚ್ ಓ, ಡಾ.ಅಲಕಾನಂದ ಮಳಗಿ, ಟಿಹೆಚ್ ಓ ಡಾ. ಆನಂದ ಗೋಟೂರು, ಇ ಓ ಶಿವಪ್ಪ ಸುಭೇದಾರ, ಅವರು ಭೇಟಿ ನೀಡಿದ್ದಾರೆ.