Advertisement

ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ

11:49 AM Jun 13, 2021 | Team Udayavani |

ಮೈಸೂರು: ತನ್ನ ಸ್ನೇಹಿತೆಗೆ ಬಾಲ್ಯ ವಿವಾಹವಾಗುವುದನ್ನು ತಿಳಿದ ಬಾಲಕಿ, ಅದನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ.

Advertisement

10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ತನ್ನ ಸ್ನೇಹಿತೆಗೆ ರಾಮನಗರದ ಯುವಕನ ಜೊತೆ ಮದುವೆಗೆ ಸಿದ್ಧತೆ ನಡೆದಿರುವ ಮಾಹಿತಿ ತಿಳಿದ ಬಾಲಕಿ, ತಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಶಿಕ್ಷಕಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಶಿಕ್ಷಕಿ ಒಡನಾಡಿಯ ಸ್ಟ್ಯಾನ್ಲಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಸ್ಟ್ಯಾನ್ಲಿ ಅವರು, ಮಕ್ಕಳ ರಕ್ಷಣಾ ಘಟಕದೊಂದಿಗೆ ವಿಜಯ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದಿಢೀರ್‌ ಮನೆಗೆ ಭೇಟಿ ನೀಡಿದ ಪೊಲೀಸರು, ಬಾಲಕಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಪೋಷಕರು, ಮನೆಯಲ್ಲಿ ಇಲ್ಲ ಎಂದು ಸಬೂಬು ಹೇಳಲು ಮುಂದಾಗಿದ್ದಾರೆ. ಮನೆಯೇಲ್ಲಾ ಶೋಧ ಕಾರ್ಯ ನಡೆಸಿದಾಗ ಕೋಣೆಯಲ್ಲಿ ಮಂಚದ ಕೆಳಗೆ ಬಾಲಕಿಯನ್ನು ಬಚ್ಚಿಟ್ಟಿರುವುದು ಕಂಡು ಬಂದಿದೆ. ಬಾಲಕಿ ಯನ್ನು ರಕ್ಷಿಸಿದ ಪೊಲೀಸರು, ಆಕೆಯ ಹೇಳಿಕೆ ಪಡೆದು ಪೋಷಕರಿಗೆ ಬುದ್ಧಿವಾದ ಹೇಳಿದ್ದಾರೆ.

ಈ ಸಂಬಂಧ ಮಕ್ಕಳ ಪೊಲೀಸ್‌ ಘಟಕದವರು ನೀಡಿದ ದೂರಿನ ಮೇರೆಗೆ ವಿಜಯ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next