Advertisement

ತುಮಕೂರು : ಕಲ್ಪತರುನಾಡಲ್ಲಿ ಬಾಲ್ಯವಿವಾಹ ಇನ್ನೂ ಜೀವಂತ

04:39 PM Sep 21, 2020 | Suhan S |

ತುಮಕೂರು: ಸಾಮಾಜಿಕ ಪಿಡುಗುಗಳಲ್ಲಿ ಬಾಲ್ಯ ವಿವಾಹ ಪದ್ಧತಿಯೂ ಒಂದಾಗಿದ್ದು, ಸರ್ಕಾರ ನಿಷೇಧಿಸಿದ್ದರೂಕಲ್ಪತರು ನಾಡಿನಲ್ಲಿ ಮಾತ್ರ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ.

Advertisement

ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಬಾಲ್ಯ ವಿವಾಹಗಳು ಕದ್ದು ಮುಚ್ಚಿ ನಡೆಯುತ್ತಿ ದ್ದವು. ಆದರೆ ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ಕಲ್ಪತರುನಾಡಿನ ವಿವಿಧ ಕಡೆ ಬಾಲ್ಯವಿವಾಹಗಳು ನಡೆದಿವೆ.ಬಾಲ್ಯವಿವಾಹ ಪದ್ಧತಿ ನಡೆಯುತ್ತಿರುವಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ಕೂಡಲೇ ಹಲವು ಬಾಲ್ಯ  ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಜಾ ದಿನದಲ್ಲಿ ಮದುವೆ: ಮಹಾಮಾರಿ ಕೋವಿಡ್ ವೇಳೆಯಲ್ಲಿ ಸರ್ಕಾರ ಲಾಕ್‌ಡೌನ್‌ಮಾಡಿ ಎಲ್ಲಾ ಶುಭ ಸಮಾರಂಭಗಳಿಗೆ ಕಡಿವಾಣ ಹಾಕಲಾ ಗಿತ್ತು, ಆ ನಂತರದ ವೇಳೆಯಲ್ಲಿ ಲಾಕ್‌ ಡೌನ್‌ನಲ್ಲಿ ಸ್ಪಲ್ಪ ಸಡಿಲಿಕೆ ಮಾಡಿ 20 ಜನರನ್ನು ಸೇರಿಸಿ ತಮ್ಮ ಮನೆಗಳಲ್ಲಿಯೇ ಮದುವೆ ಮಾಡಬಹುದು ಎಂದು ಆದೇಶ ಹೊರಡಿ ಸಿದ ಹಿನ್ನೆಲೆಯಲ್ಲಿ ಮತ್ತು ಶಾಲಾ ಕಾಲೇಜುಗಳು ರಜಾ ಇರುವುದರಿಂದ ಇದರ ಲಾಭ ಪಡೆದು ಕೊಂಡ ಕೆಲವು ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಂಡರೆ ಸಾಕು ಎಂದು ವಯಸ್ಸಿಗೆ ಬಾರದ ಮಕ್ಕಳನ್ನು ಮದುವೆ ಮಾಡಿ ಬಾಲ್ಯವಿವಾಹವನ್ನು ಪ್ರೋತ್ಸಾಹಿಸಿದ್ದಾರೆ.

ಬಾಲ್ಯವಿವಾಹಕ್ಕೆ ಪ್ರಮುಖ ಕಾರಣಗಳೇನು..?: ಬಾಲ್ಯವಿವಾಹಕ್ಕೆ ಪ್ರಮುಖವಾಗಿ ಅನಕ್ಷರತೆ, ಬಡತನ, ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗೆಗಿನ ಅರಿವಿನ ಕೊರತೆ, ಪ್ರೀತಿ -ಪ್ರೇಮ ಪ್ರಕರಣಗಳು ಹಳೆಯ ನೆಂಟಸ್ಥಿಕೆ ಸಂಬಂಧಗಳನ್ನು ಉಳಿಸಿ ಕೊಳ್ಳಲು ಮತ್ತು ಸಾಮೂಹಿಕ ವಿವಾಹಗಳ ಉಪಯೋಗ ಪಡೆದುಕೊಳ್ಳಲು ವಯಸ್ಸಿಗೆ ಬಾರದ ಮಕ್ಕಳಿಗೆ ಮದುವೆ ಮಾಡುತ್ತಿರುವುದು ಕಂಡು ಬಂದಿದೆ.

ಕೋವಿಡ್ ವೇಳೆ 4 ಬಾಲ್ಯ ವಿವಾಹ: ಕೋವಿಡ್ವೇಳೆಯಲ್ಲಿ ನಾಲ್ಕು ಬಾಲ್ಯ ವಿವಾಹಗಳು ನಡೆದಿವೆ, ಆದರೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಹಲವು ಬಾಲ್ಯವಿವಾಗಳು ನಡೆದಿವೆ. ಈ ಕೋವಿಡ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ 80 ಬಾಲ್ಯ ವಿವಾಹಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 80 ಬಾಲ್ಯ ವಿವಾಹವನ್ನು ತಡೆಯಲಾಗಿದೆ.

Advertisement

ಬಾಲಮಂದಿರದಲ್ಲಿ ಬಾಲಕಿಯರು: 18 ವರ್ಷ ತುಂಬದೇ ಅನೇಕ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ವಿವಾಹ ಮಾಡಲು ಮುಂದಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೊರೆತಿರುವ ಮಾಹಿತಿ ಮೇರೆಗೆ ಪೊಲೀಸ್‌ ಮತ್ತು ಇತರೆ ಅಧಿಕಾರಿಗಳ ಸಹಕಾರ ಪಡೆದು ಬಾಲ್ಯ ವಿವಾಹವನ್ನು ಜಿಲ್ಲಾಡಳಿತದಿಂದ ತಡೆದು ಬಾಲಕಿಯರನ್ನು ರಕ್ಷಿಸಲಾಗಿದೆ.

ಈ ವೇಳೆಯಲ್ಲಿ ಅಧಿಕಾರಿಗಳು ಪೋಷಕರ ಮನವೊಲಿಸಿ, ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡಬಾರದು ಎಂದು ತಿಳಿ ಹೇಳಿದಾಗ ‌ ಪೋಷಕರು ನಿರಾಕರಿಸಿ, ಬಾಲಕಿಯನ್ನು ರಕ್ಷಣೆ ಪೋಷಣೆ ಮಾಡುವುದರಲ್ಲಿ ಅಸಮರ್ಥರಾಗಿದ್ದಲ್ಲಿ ಅಂತಹ ಮಕ್ಕಳಿಗೆ ಸ‌ರ್ಕಾರಿ ಬಾಲಕಿಯ‌ರ ಬಾಲಮಂದಿರದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗುತ್ತಿದೆ.

18 ತುಂಬುವವರೆಗೂ ಮದುವೆ ಮಾಡಬೇಡಿ : ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಪದ್ಧತಿ ನಿಷೇಧಿಸಲಾಗಿದೆ. ಬಾಲ್ಯ ವಿವಾಹ ಮಾಡಲು ಮುಂದಾದರೆಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿ ಇಂತಹ ಪದ್ಧತಿಯನ್ನು ನಿಷೇಧಿಸಲು ಅವರ ಮನಸ್ಸು ಪರಿ ವರ್ತನೆ ಮಾಡಬೇಕು, ಬಾಲ್ಯ ವಿವಾಹದಿಂದ ಬಾಲಕಿಯ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿ ಬಾಲಕಿಗೆ 18 ವರ್ಷ ತುಂಬುವವರೆಗೂ ವಿವಾಹ ಮಾಡದಿರುವ ಬಗ್ಗೆ ಅರಿವು ಮೂಡಿಸಬೇಕು.

ಹಿಂದುಳಿದ ಸಮುದಾಯದಲ್ಲೇ ಹೆಚ್ಚು : ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿದ್ದವು, ಆದರೆ ಈಗ ಕಡಿಮೆಯಾಗಿ ಅಲ್ಲೊಂದು ಇಲ್ಲೊಂದು ನಡೆಯುತ್ತಿತ್ತು, ಅತೀ ಹಿಂದುಳಿದಿರುವ ಜನಾಂಗವಿರುವ ಪಾವಗಡ,ಮಧುಗಿರಿ, ಶಿರಾ ಪ್ರದೇಶದ ಗೊಲ್ಲರ ಹಟ್ಟಿಗಳಲ್ಲಿ  ಪ.ಪಂಗಡ, ಹಿಂದುಳಿದ ಸಮುದಾಯದ ಜನರಲ್ಲಿ ಈ ರೀತಿಯ ವಿವಾಹಗಳು ಹೆಚ್ಚು ನಡೆಯುತ್ತವೆ ಎನ್ನುತ್ತಾರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್‌.

ಬಾಲ್ಯ ವಿವಾಹ ಪದ್ಧತಿಯನ್ನು ಪ್ರತಿಯೊಬ್ಬರೂ ತಡೆಯಬೇಕು, ವಿವಾಹ ಮಾಡಲು ಈಗ ಹೆಣ್ಣಿಗೆಕನಿಷ್ಠ 18 ವರ್ಷ ಗಂಡಿಗೆ 21 ವರ್ಷ ತುಂಬಿರಬೇಕು, ವಯಸ್ಸಿಗೆ ಬಾರದ ಬಾಲಕ, ಬಾಲಕಿಗೆ ವಿವಾಹ ಮಾಡಿದರೆ ಅವರ ಮನಸ್ಸು, ದೈಹಿಕ ಆರೋಗ್ಯದ ಮೇಲೆ ತೀವ್ರ ರೀತಿಯ ಪರಿಣಾಮ ಬೀರಲಿದೆ, ಪೋಷಕರು ಮಕ್ಕಳನ್ನು ಪಾಪದ ಕೂಪಕ್ಕೆ ತಳ್ಳಬಾರದು, ಅವರು ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಬೇಕು. ನಟರಾಜ್‌, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು

ಸಾರ್ವಜನಿಕರು ಮಕ್ಕಳ ಸಹಾಯವಾಣಿ -1098 ಕರೆ ಮಾಡುತ್ತಾರೆ ನಾವು ತಕ್ಷಣ ಸಿಡಿಪಿಒ ಪೊಲೀಸ್‌, ಪಿಡಿಒ ಇತರೆ ಅಧಿಕಾರಿಗಳ ಸಹಾಯ ಪಡೆದು ಬಾಲ್ಯ ವಿವಾಹ ನಿಲ್ಲಿಸಲು ಮುಂದಾಗುತ್ತೇವೆ. ಕೋವಿಡ್ ವೇಳೆ ಏಪ್ರಿಲ್‌ ನಿಂದ ಆಗಸ್ಟ್‌ ಕೊನೆಯ ವರೆಗೆ 89 ಬಾಲ್ಯ ವಿವಾಹದ ದೂರು ಬಂದಿದೆ. ಹೆಚ್ಚು ದೂರುಗಳು ಶಿರಾ,ಮಧುಗಿರಿ, ಪಾವಗಡ ದಿಂದಲೇ ಬಂದಿವೆ. – ರಾಧಾ, ಸಂಯೋಜಕಿ, ಮಕ್ಕಳ ಸಹಾಯವಾಣಿ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ತುಮಕೂರು

 

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next