ಕೊಪ್ಪಳ: ಅಪೌಷ್ಟಿಕ ಮಗುವಿನ ಸಮೀಕ್ಷೆ ಮಾಡಿಸಮರ್ಪಕ ಪೌಷ್ಟಿಕ ಆಹಾರ ಪೂರೈಸಿ ಆರೋಗ್ಯಸುಧಾರಣೆಗೆ ಕ್ರಮ ವಹಿಸಿ ಎಲ್ಲ ಮಕ್ಕಳ ಜೊತೆ ಆಮಗುವು ಬೆರೆಯುವಂತಾಗಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದಪೋಷಣ್ ಅಭಿಯಾನ ಮಾಸಾಚರಣೆ, ಪ್ರಧಾನಮಂತ್ರಿಮಾತೃ ವಂದನಾ ಸಪ್ತಾಹ ಮತ್ತು ಶಿಶು ಪಾಲನಾಕೇಂದ್ರ ಹಾಗೂ ಮಹಿಳಾ ವಿಶ್ರಾಂತಿ ಗೃಹ ಉದ್ಘಾಟನಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಸಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿಪೂರೈಸುವ ಜವಾಬ್ದಾರಿ ಅಧಿಕಾರಿಗಳ ಜೊತೆಗೆಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಒಂದನೇವಾರದಲ್ಲಿ ಪೌಷ್ಟಿಕ ಸಸಿಗಳ ನೆಡುವ ಕಾರ್ಯಕ್ರಮದಡಿಪೌಷ್ಟಿಕಾಂಶ ಹೊಂದಿದ ತರಕಾರಿ, ಹಣ್ಣುಗಳನ್ನು ಯಾವರೀತಿ ಬೆಳೆಯಬಹುದು ಎನ್ನುವ ಬಗ್ಗೆ ತೋಟಗಾರಿಕೆಇಲಾಖೆಯ ಮಾದರಿ ಕೈತೋಟದ ನಕ್ಷೆ ಪ್ರದರ್ಶನದಲ್ಲಿತೋರಿಸಿದ್ದು ಸಂತಸ ತಂದಿದೆ.
2ನೇ ವಾರದಲ್ಲಿ ಪೌಷ್ಟಿಕತೆಗಾಗಿ ವಿವಿಧ ಚಟುವಟಿಕೆಮತ್ತು ಆಯುಷ ವೈದ್ಯ ಮಾಹಿತಿ ಹಂಚಿಕೊಳ್ಳುವುದು.ಮೂರನೇ ವಾರದಲ್ಲಿ ಜಿಲ್ಲಾ, ತಾಲೂಕುಗಳಲ್ಲಿ ಅಪೌಷ್ಟಿಕನಿವಾರಣೆಗಾಗಿ ಪ್ರಾದೇಶಿಕ ಪೌಷ್ಟಿಕ ಕಿಟ್ ಇಲಾಖೆ,ದಾನಿ, ಸಂಘ-ಸಂಸ್ಥೆಗಳಿಂದ ವಿತರಣೆ ಮಾಡುವಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಕೊನೆಯ ವಾರ ಅಪೌಷ್ಟಿಕತೆಯಿಂದ ಬಳಲುವಮಕ್ಕಳನ್ನು ಗುರುತಿಸುವ ಮತ್ತು ಪೌಷ್ಟಿಕ ಆಹಾರವನ್ನುವಿತರಣೆ ಮಾಡುವ ವಿಶೇಷ ಅಭಿಯಾನದಡಿ ಅಪೌಷ್ಟಿಕಮಕ್ಕಳ ಕುರಿತು ಸಮೀಕ್ಷೆ ಮಾಡಿ ಸರ್ಕಾರ ನೀಡುವಯೋಜನೆಗಳನ್ನು ಮಗುವಿಗೆ ಸಮರ್ಪಕವಾಗಿಪೂರೈಸಿದರೆ ಆ ಮಗುವು ಕೂಡ ಸಮಾಜದಲ್ಲಿ ಎಲ್ಲರಜೊತೆಗೆ ಬದುಕಲಿದೆ ಎಂದರು.ಸಂಸದ ಕರಡಿ ಸಂಗಣ್ಣ ಮಾತನಾಡಿ, ಅಂಗನವಾಡಿಕಾರ್ಯಕರ್ತೆಯರು ತಂದೆ-ತಾಯಿ ಇದ್ದಂತೆ.ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ಪೋಷಿಸಬೇಕು.
ಹಾಗೆಯೇಈಮಾಸಾಚರಣೆಯನ್ನುಕೂಡಯಶಸ್ವಿಯಾಗಿಮಾಡುವಿರಿಎಂದುಭರವಸೆಯಿದೆಎಂದರು. ಕಾರ್ಯಕ್ರಮದಡಿ ಸೆಲ್ಫಿà ಕ್ಯಾಂಪೇನ್, ಸ್ತ್ರೀ ಶಕ್ತಿಸ Ìಸಹಾಯ ಸಂಘ, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ,ಪೌಷ್ಟಿಕ ಕೈತೋಟ, ಕೋವಿಡ್-19 ಲಸಿಕೆ ಅಭಿಯಾನಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಭಿತ್ತಿಪತ್ರಬಿಡುಗಡೆ, ಎರಡನೇ ಹಂತದ ಸಾಯಿಸೂರ್ (ರೆಡ್‌ಕ್ರಾಸ್ ಸಂಸ್ಥೆ) ಬಾಟಲ್ ವಿತರಣೆ, ಅಂಗನವಾಡಿಕಾರ್ಯಕರ್ತರಿಗೆ ಪ್ರಶಸ್ತಿ ಪತ್ರ ವಿತರಣೆ, ಸ್ಪರ್ಧೆವಿಜೇತರಿಗೆ ಮತ್ತು ರಂಗೋಲಿ ಸ್ಪರ್ಧೆ ವಿಜೇತರಿಗೆಪ್ರಶಸ್ತಿ ಪತ್ರ ವಿತರಣೆ, ಪಿಎಂಎಂವಿವೈ ಯೋಜನೆಯಡಿಸಾಧನೆ ಮಾಡಿದ ಮೇಲ್ವಿಚಾರಕಿಯರಿಗೆ ಪ್ರಶಸ್ತಿ ಪತ್ರವಿತರಿಸಲಾಯಿತು.
ಕುರಿ ಮತ್ತು ಉಣ್ಣೆ ಅಭಿವೃದ್ಧಿನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾಧಿಕಾರಿ ವಿಕಾಸ್‌ಕಿಶೋರ್, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್,ಎಸ್ಪಿ ಟಿ. ಶ್ರೀಧರ, ಹೇಮಂತ ಕುಮಾರ ಇದ್ದರು.