Advertisement
ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಕೊರೊನಾ ಸೋಂಕು ಬಾಧಿಸಿದಾಗ ಮಕ್ಕಳ ಆರೈಕೆ, ತೆಗೆದುಕೊಳ್ಳಬೇಕಾದ ಜಾಗ್ರತ ಕ್ರಮಗಳು ಹಾಗೂ ಈ ಸಂದರ್ಭದಲ್ಲಿ ಬದಲಾದ ಮಕ್ಕಳ ದಿನಚರಿ ಹೆತ್ತವರ ಮುಂದಿರುವ ಸವಾಲುಗಳಾಗಿವೆ.
1. ಕೈ ತೊಳೆಯಲು ಮಕ್ಕಳಿಗೆ ತರಬೇತಿ ನೀಡುವುದು, ಜ್ವರ, ಶೀತ ಇರುವವರ ಸಂಪರ್ಕದಿಂದ ದೂರವಿರಿಸುವುದು, ಮಾಸ್ಕ್ ಧರಿಸುವುದರ ಮೂಲಕ ಮಕ್ಕಳನ್ನು ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು. ಅಲ್ಪ ಅವಧಿಯಲ್ಲಿ ರೋಗದ ಪ್ರತಿರೋಧವನ್ನು ಯಾವುದೇ ವಿಧಾನದಿಂದ ಹೆಚ್ಚಿಸಲು ಸಾಧ್ಯವಿಲ್ಲ. ಮನೆಯಲ್ಲಿ ಕೊರೊನಾ ನಿರೋಧಕ ಲಸಿಕೆ ಪಡೆಯಲು ಅರ್ಹತೆ ಇರುವವರೆಲ್ಲ ಸಾಧ್ಯವಾದಷ್ಟು ಬೇಗ ಲಸಿಕೆ ತೆಗೆದುಕೊಳ್ಳಬೇಕು. 2. ಕಾಯಿಲೆಯ ಬಗ್ಗೆ ಸರಿಯಾದ ಮಾಹಿತಿಯ ಮೂಲಕ ಆತಂಕ, ಭಯ, ನಿದ್ರಾಹೀನತೆ, ಕೆಟ್ಟ ಸ್ವಪ್ನ ಬಾರದಂತೆ ನೋಡಿಕೊಳ್ಳಬಹುದು. ದೈನಂದಿನ ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಶೇ. 98 ಜನರು ಕಾಯಿಲೆಯಿಂದ ಗುಣ ಹೊಂದುತ್ತಾರೆ. ಹೆತ್ತವರ ಧನಾತ್ಮಕ ಮನೋಭಾವ ಹಾಗೂ ಧೈರ್ಯದ ನಡವಳಿಕೆ ಮಾನಸಿಕ ಆರೋಗ್ಯಕ್ಕೆ ಬೇಕಾದ ಹಿತಕರ ವಾತಾವರಣವನ್ನು ಸೃಷ್ಟಿಸುತ್ತದೆ.
Related Articles
Advertisement
(ಬಿ) ಇ- ಕಲಿಕೆ ಈಗಿನ ವಿಧಾನವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಆವಶ್ಯಕತೆ ಗಳನ್ನು ಪೂರೈಸುವ ಅಗತ್ಯವಿದೆ. ಮೊಬೈಲ್ ಫೋನ್ ಸ್ಕಿನ್‌ನ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ಕಣ್ಣು, ಮನಸ್ಸು, ಭಾವ ಭಂಗಿ/ ದೇಹ ಸ್ಥಿತಿ ಹಾಗೂ ನಿದ್ರೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ. ಲ್ಯಾಪ್‌ಟಾಪ್ ಬಳಸುವ ಮೂಲಕ ಕಣ್ಣಿಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡಬಹುದು.
(ಸಿ) ಸಾಂಸ್ಕೃತಿಕ, ಅಡುಗೆ, ಚಿತ್ರಕಲೆ ಮುಂತಾದ ವಿರಾಮದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿ ಆ ಮೂಲಕ ಅವರ ಕೌಶಲವನ್ನು ಹೆಚ್ಚಿಸಬಹುದಾಗಿದೆ.
4. ಮೊಬೈಲ್ ಫೋನ್‌ನಲ್ಲಿ ಅಧಿಕ ಸಮಯ ಕಳೆಯುವ ಕುರಿತಂತೆ ಹಾಗೂ ಸಾಮಾಜಿಕ ಜಾಲತಾಣಗಳ ಸುಳ್ಳು ಮಾಹಿತಿಗಳ ಬಗ್ಗೆ ಮಕ್ಕಳಿಗೆ ಸರಿಯಾದ ಮಾಹಿತಿ, ಅರಿವು ಇರಬೇಕು. ಮಕ್ಕಳು ಅದರಲ್ಲೂ ಹದಿ ಹರೆಯದವರು ಸಾಮಾಜಿಕ ಜಾಲತಾಣಗಳಲ್ಲಿ ಏನನ್ನು ನೋಡುತ್ತಾರೆ ಎಂಬ ಬಗ್ಗೆ ನಿಗಾ ಇರಬೇಕು.
5. ಆರೋಗ್ಯಕರ ಆಹಾರ ಕ್ರಮ: ಆರೋಗ್ಯಕರ ಆಹಾರ ಕ್ರಮವು ಜಾಸ್ತಿ ತೂಕ ಹಾಗೂ ಬೊಜ್ಜು ಬಾರದಂತೆ ನೋಡಿಕೊಳ್ಳುವುದರ ಜತೆಗೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಆರ್ಥಿಕ ಸಂಕಷ್ಟದಿಂದಾಗಿ ಆನೇಕ ಕುಟುಂಬಗಳಿಗೆ ಉತ್ತಮ ಆಹಾರ ಹೊಂದಿಸಲು ಕಷ್ಟವಾಗುತ್ತಿದ್ದರೂ ವಿಟಮಿನ್ ಹಾಗೂ ಪೋಷಕಾಂಶಯುಕ್ತ ಆಹಾರಗಳನ್ನು ಮಕ್ಕಳಿಗೆ ನೀಡಲು ಪ್ರಯತ್ನಿಸಬೇಕು. “ಜಂಕ್ ಫುಡ್’ ಮತ್ತು ಜಾಸ್ತಿ ಕ್ಯಾಲರಿ ಇರುವ ಆಹಾರಗಳನ್ನು ದೂರ ಮಾಡಿ ಬೊಜ್ಜು ಬಾರದಂತೆ ತಡೆಗಟ್ಟಿ.ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ವೈದ್ಯರ ಜತೆ ಮುಖತಃ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಮಕ್ಕಳ ಸಣ್ಣಪುಟ್ಟ ತೊಂದರೆಗಳಿಗೆ ಟೆಲಿ ಸಲಹೆಗಳ ಮೂಲಕ ಸಂಪರ್ಕ ಬೆಳೆಸಿ ಹೆತ್ತವರು ಸಮಸ್ಯೆ ಪರಿಹರಿಸಿಕೊಳ್ಳಬಹುದು. ಯಾವುದೇ ಗಂಭೀರ ಕಾಯಿಲೆಗಳಿಗೆ ಚಿಕಿತ್ಸಾಲಯ ಅಥವಾ ಆಸ್ಪತ್ರೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸುರಕ್ಷಿತ ವಿಧಾನ. ಕೋವಿಡ್ ಸೋಂಕಿತರ ಸಂಪರ್ಕ ಹೊಂದಿದವರು ಫಿವರ್
ಕ್ಲಿನಿಕ್‌ಗೆ ಭೇಟಿ ನೀಡಬಹುದು. 6. ಕೋವಿಡ್ ಸೋಂಕು ಇದ್ದು, ಉಸಿರಾಟದ ವೇಗ ಜಾಸ್ತಿ ಇದ್ದರೆ ಹಾಗೂ ಆಕ್ಸಿಜನ್ ಪ್ರಮಾಣ 94 ಕ್ಕಿಂತ ಕಡಿಮೆ ಇದ್ದರೆ, 3 ದಿನಕ್ಕಿಂತ ಜಾಸ್ತಿ ಜ್ವರ ಇದ್ದರೆ, ಮಂಪರು ಬಂದ ಹಾಗೆ ಇದ್ದರೆ, ಸರಿಯಾಗಿ ಆಹಾರ ಸೇವಿಸದಿದ್ದರೆ ಆಸ್ಪತ್ರೆಗೆ ದಾಖಲಾಗುವುದು ಅಗತ್ಯ. ಡಾ| ಬಿ.ಎಸ್. ಬಾಳಿಗಾ, ಪ್ರೊಫೆಸರ್ ಎಮಿರಟಸ್, ಮಕ್ಕಳ ಚಿಕಿತ್ಸಾ ವಿಭಾಗ, ಕೆ.ಎಂ.ಸಿ., ಮಂಗಳೂರು