Advertisement

ಆಗುಂಬೆ ಘಾಟಿಯಲ್ಲಿ ಕಾರಿನಿಂದ ಕೆಳಗೆ ಬಿದ್ದ ಮಗು, ಪೋಷಕರಿಗೆ ತಿಳಿದದ್ದು ಕೊಪ್ಪ ತಲುಪಿದ ಮೇಲೆ

09:37 AM Feb 01, 2020 | keerthan |

ತೀರ್ಥಹಳ್ಳಿ: ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಅಪರಿಚಿತ ಹೆಣ್ಣು ಮಗುವೊಂದು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ನಂತರ ಪೋಷಕರನ್ನು ಪತ್ತೆ ಹಚ್ಚಿ, ಮಗುವನ್ನು ಅವರ ಸುಪರ್ದಿಗೆ ನೀಡಿದ ಬಳಿಕ ಪ್ರಸಂಗ ಸುಖಾಂತ್ಯವಾಯಿತು.

Advertisement

ಆಗಿದ್ದೇನು?
ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರೊಂದು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿರುವಾಗ ಘಾಟಿಯಲ್ಲಿ ಹೆಣ್ಣು ಮಗುವೊಂದು ಅಳುತ್ತಾ ನಿಂತಿತ್ತು. ಇದನ್ನು ನೋಡಿ ಕಾರು ಚಾಲಕ ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಎನ್‌ ಆರ್ ಪುರ ಬೀನು ಎನ್ನುವವರ ಕುಟುಂಬ ಕೇರಳ ಮತ್ತು ತಮಿಳುನಾಡು ಪ್ರವಾಸದಿಂದ ಹಿಂದೆ ಬರುವಾಗ ರಾತ್ರಿ ಸಮಯವಾಗಿದ್ದರಿಂದ ಗಾಡಿಯಲ್ಲಿದ್ದವರು ನಿದ್ದೆಗೆ ಜಾರಿದ್ದರು. ಆ ವೇಳೆಯಲ್ಲಿ ವಾಹನದ ಹಿಂದಿನ ಬಾಗಿಲು ಅಚಾನಕ್ ಆಗಿ ತೆರೆದ ಕಾರಣ ಮಗು ಆಗುಂಬೆ ಏಳನೆಯ ಕ್ರಾಸ್ ‌ನಲ್ಲಿ ವಾಹನದಿಂದ ಹೊರಗೆ ಬಿದ್ದಿದೆ.

ಐದು ವರ್ಷದ ಹೆಣ್ಣು ಮಗು ವಾಹನದಿಂದ ಕಳೆಗೆ ಬಿದ್ದರೂ ನಿದ್ದೆಯಲ್ಲಿದ್ದ ಪೋಷಕರಿಗೆ ತಿಳಿಯಲಿಲ್ಲ. ವಾಹನ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ಮಗು ವಾಹನದಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೇ ಮಾರ್ಗವಾಗಿ  ವಾಪಾಸು ಬಂದರು. ಮಗುವನ್ನು ಹುಡುಕುತ್ತಾ ಬಂದಿದ್ದಾರೆ ಬರುವಾಗ ಆಗುಂಬೆ ಫಾರೆಸ್ಟ್ ಗೇಟ್‌ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ.

ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಪೊಲೀಸರು ತಂದೆ ತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next