Advertisement
ಕೇರಳದಿಂದ ಬಹುತೇಕ ಮಂದಿ ಇಲ್ಲಿಗೆ ಆಗಮಿಸಿ ನೆಲೆಯೂರಿದ್ದಾರೆ. ಕೋಟೆ ತಾಲೂಕಿನ ಗಡಿಯಲ್ಲಿ ನೆಲೆಯೂರಿದ್ದರೂ ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಮಕ್ಕಳಿಗೆ ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುತ್ತಿದ್ದಾರೆ. ಡಿ.ಬಿ.ಕುಪ್ಪೆ ಹಾಗೂ ಕೇರಳ ನಡುವೆ ಕಪಿಲಾ ನದಿ ಹರಿಯುತ್ತಿದ್ದು, ಡಿ.ಬಿ.ಕಪ್ಪೆಯಿಂದ ದೋಣಿ ಮೂಲಕ ಕೇವಲ 300 ಮೀಟರ್ ಹಾದು ಹೋದರೆ ಕೇರಳದ ಪೆರಿಯಕಲ್ಲೂರು ತಲುಪಬಹುದು.
Related Articles
Advertisement
ದೋಣಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. 300 ಮೀಟರ್ ನದಿ ದಾಟದೇ ಬದಲಿ ರಸ್ತೆ ಮಾರ್ಗವಾಗಿ ಪೆರಿಯಕಲ್ಲೂರಿಗೆ ಹೋಗಬೇಕಾದರೆ ಬರೋಬ್ಬರಿ 39 ಕಿ.ಮೀ. ಸಂಚರಿಸಬೇಕು. ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನ ಭೀತಿಯಿಂದ ಮಕ್ಕಳು ಕಲಿಕೆಯಿಂದ ಹಿಂದೆ ಸರಿದಿದ್ದಾರೆ. ಈಗ ಮತ್ತೆ 1 ವರ್ಷ ಶಿಕ್ಷಣದಿಂದ ವಂಚಿತರಾಗುವುದು ಎಷ್ಟು ಸರಿ. ಈಗ ಪ್ರಯಾಣಿಕರನ್ನು ಸಾಗಿಸುವ ದೋಣಿಗಳಿಗೆ ವಿಮೆ ಇಲ್ಲ.
ಹೀಗಾಗಿ ಜೀವಕ್ಕೆ ರಕ್ಷಣೆ ಇಲ್ಲ ಎನ್ನುವುದಾದರೆ ಬಳ್ಳೆ, ಗುಂಡತ್ತೂರು ಹಾಗೂ ಉದೂºರು ಅರಣ್ಯ ಇಲಾಖೆಗೆ ಸೇರಿದ 3 ಬೋಟುಗಳು ಕೆಲಸವಿಲ್ಲದೇ ನಿಲುಗಡೆ ಮಾಡಲಾಗಿದೆ. ಅದೇ ದೋಣಿಗಳನ್ನು ಬೆಳಗ್ಗೆ ಮತ್ತು ಸಂಜೆ ಕಳುಹಿಸಿಕೊಟ್ಟರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ. ಅಗತ್ಯ ಎನಿಸಿದರೆ ಪೋಷಕರು ಬೋಟ್‌ಗಳಿಗೆ ಇಂತಿಷ್ಟು ಹಣ ಪಾವತಿಸಲು ಕೂಡ ಸಿದ್ಧರಿದ್ದಾರೆ.
ಬೆಳಗ್ಗೆ, ಸಂಜೆ ಸಂಚರಿಸಲಿ: ಕಪಿಲಾ ನದಿ ದಾಟಿಸುವ ಎಲ್ಲಾ ದೋಣಿಗಳ ವಿಮೆ ಚಾಲನೆಯಲ್ಲಿಲ್ಲ, ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಕನಿಷ್ಠ ಪಕ್ಷ ಬೆಳಗ್ಗೆ ಮತ್ತು ಸಂಜೆ ಶಾಲೆ ವೇಳೆಗೆ ದೋಣಿ ಸಂಚಾರಕ್ಕೆ ಅನುವು ಮಾಡಿಕೊಡುವುದು ಒಳಿತು ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ತಿರುಪತಿ ತಿಳಿಸಿದ್ದಾರೆ.
ದೋಣಿಗೆ ವಿಮೆ ಮಾಡಿಸಿ ಸಂಚರಿಸಲಿ: ತಹಶೀಲ್ದಾರ್ ಕಪಿಲಾ ನದಿ ದಾಟುವ ದೋಣಿಗಳಿಗೆ ವಿಮೆ ಇಲ್ಲ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದೋಣಿಗಳಲ್ಲಿ ಸಾಗುವಾಗ ಅವಘಡ ಸಂಭವಿಸಿದರೆ ಪರಿಹಾರವೂ ದೊರೆಯುವುದಿಲ್ಲ ಎನ್ನುವ ಕಾರಣದಿಂದ ದೋಣಿಗಳಿಗೆ ವಿಮೆ ಮಾಡಿಸಿ ಸಂಚರಿಸಲಿ ಎಂದು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ದೋಣಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ನರಗುಂದ್ ತಿಳಿಸಿದ್ದಾರೆ.
–ಎಚ್.ಬಿ.ಬಸವರಾಜು