ಪಾಟ್ನಾ: ಬಿಹಾರದ ಮುಜಫ್ಫರಪುರದಲ್ಲಿ ಮಿದುಳು ಜ್ವರವು 100ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ನಾಗರಿಕರು, ಮಂಗಳವಾರ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ತಮ್ಮ ಕೋಪವನ್ನು ಪ್ರದರ್ಶಿಸಿದ್ದಾರೆ. ಮುಜಫ್ಪರಪುರ ಜಿಲ್ಲೆಯ ಆಸ್ಪತ್ರೆಗೆ ಮಂಗಳವಾರ ನಿತೀಶ್ ಕುಮಾರ್ ಭೇಟಿ ನೀಡುತ್ತಲೇ, ಅಲ್ಲಿ ಸೇರಿದ್ದ ಸಾರ್ವಜನಿಕರು, ‘ಗೋ ಬ್ಯಾಕ್ ನಿತೀಶ್’ ಎಂದು ಘೋಷಣೆ ಕೂಗುತ್ತಾ, ಅವರಿಗೆ ಪ್ರತಿಭಟನೆಯ ಸ್ವಾಗತ ನೀಡಿದ್ದಾರೆ. 3 ವಾರಗಳ ಹಿಂದೆಯೇ ಇಲ್ಲಿನ ಮಕ್ಕಳಲ್ಲಿ ಮಿದುಳು ಜ್ವರ ಕಾಣಿಸಿಕೊಂಡಿದ್ದು, ಮೃತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಇದೆ. ಆದರೆ, ಮುಖ್ಯಮಂತ್ರಿ ಆಸ್ಪತ್ರೆಗೆ ಭೇಟಿ ನೀಡಲು ಇಷ್ಟೊಂದು ವಿಳಂಬ ಮಾಡಿದ್ದೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳು ಖಾಲಿ ಹೊಟ್ಟೆಗೆ ಲಿಚ್ಚಿ ಹಣ್ಣನ್ನು ತಿಂದ ಕಾರಣ, ಅವರ ದೇಹದ ಸಕ್ಕರೆ ಪ್ರಮಾಣದಲ್ಲಿ ಏಕಾಏಕಿ ಏರುಪೇರಾಗಿ ಈ ಅವಘಡ ಸಂಭವಿಸಿದೆ.
Advertisement