Advertisement
39 ರ ಹರೆಯದ ಸುಚನಾ ಜನವರಿ 6 ರಂದು ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್ ಗೆ ತೆರಳಿ ಜನವರಿ 8 ರವರೆಗೆ ಅಲ್ಲಿಯೇ ಇದ್ದರು. ಆಕೆ ತನ್ನ ಮಗನನ್ನು ಅಪಾರ್ಟ್‌ಮೆಂಟ್‌ನಲ್ಲಿಯೇ ಶವವನ್ನು ತೆಗೆದುಕೊಂಡು ಹೋಗುವ ಮೊದಲು ಬ್ಯಾಗ್‌ನಲ್ಲಿ ತುಂಬಿದ್ದಳು. ಸೋಮವಾರ ರಾತ್ರಿ ಟ್ಯಾಕ್ಸಿಯಲ್ಲಿ ಬರುತ್ತಿದ್ದ ವೇಳೆ ಚಿತ್ರದುರ್ಗದಲ್ಲಿ ಆಕೆಯನ್ನು ಬಂಧಿಸಿ ಮಂಗಳವಾರ ಗೋವಾಕ್ಕೆ ಕರೆತರಲಾಗಿತ್ತು.
Related Articles
Advertisement
ತನ್ನ ಮಗ ತನ್ನ ಪತಿ ವೆಂಕಟ್ ರಾಮನ್‌ನನ್ನು ಹೋಲುತ್ತಾನೆ ಮತ್ತು ಯಾವಾಗಲೂ ತಮ್ಮ ದೂರವಾದ ಸಂಬಂಧವನ್ನು ನೆನಪಿಸುತ್ತಾನೆ ಎಂದು ಸುಚನಾ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಹೇಳಿದ್ದಳು ಎಂದು ಪ್ರಕರಣದ ಆಳವಾದ ತನಿಖೆ ವೇಳೆ ತಿಳಿದು ಬಂದಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ರಾಮನ್ ಅವರು ಸುಚನಾಗೆ ಕರೆ ಮಾಡಿ ಮಗನನ್ನು ಭೇಟಿಯಾಗಲು ಬಯಸಿದ್ದರು ಎಂದು ತಿಳಿದುಬಂದಿದೆ. ಸುಚನಾ ತನ್ನ ವಿಚ್ಛೇದಿತ ಗಂಡನ ಮನವಿಯನ್ನು ತಿರಸ್ಕರಿಸಿ, ನಗರದ ಸಾರ್ವಜನಿಕ ಸ್ಥಳದಲ್ಲಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ.
ಆಕೆಯ ಕೋರಿಕೆಯ ಮೇರೆಗೆ, ರಾಮನ್ ಸುಚನಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾದಿದ್ದು, ಬರದಿದ್ದಾಗ ಹಲವಾರು ಬಾರಿ ಕರೆ ಮಾಡಿದ್ದರು. ಸಂದೇಶಗಳು ಮತ್ತು ಇಮೇಲ್‌ಗಳಿಗೆ ಅವಳು ಪ್ರತಿಕ್ರಿಯಿಸಲಿಲ್ಲ ಎಂದು ಆರೋಪಿಸಲಾಗಿದೆ.
ಪಶ್ಚಾತ್ತಾಪ ಇಲ್ಲ
ಮಗುವನ್ನು ಕೊಂದಿರುವ ಬಗ್ಗೆ ಕೊಂಚವೂ ಪಶ್ಚತ್ತಾಪ ಪಡುತ್ತಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಸರ್ವೀಸ್ ಅಪಾರ್ಟ್‌ಮೆಂಟ್‌ನ ಸಿಬಂದಿ ಕಾರ್‌ಗಿಂತ ವಿಮಾನದ ದರವೇ ಕಡಿಮೆ ಇದೆ ಎಂದರೂ ಸುಚನಾ ಅದನ್ನು ನಿರಾಕರಿಸಿದ್ದರು. 30,000ರೂ.ಗಳನ್ನು ನೀಡಿ ಕಾರ್ ಬಾಡಿಗೆ ಪಡೆದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ತನಿಖೆ ವೇಳೆ ಪತ್ರ ಪತ್ತೆ: ಮಗುವನ್ನು ಕೊಲ್ಲು ವುದಕ್ಕೆ ನಿಜವಾದ ಕಾರಣವೇನು ಎನ್ನುವ ನಿಟ್ಟಿನಲ್ಲಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಈ ವೇಳೆ ಸುಚನಾ ಅವರ ಕೊಠಡಿ ಯಲ್ಲಿ 4 ಸಾಲು ಗಳು ಬರೆದಿರುವ ಆಕೆಯ ಕೈಬರಹದ ಪತ್ರವೊಂದು ಸಿಕ್ಕಿದೆ. ಮಾದ ರಿಗಾಗಿ ಅದನ್ನು ವಶಪಡಿಸಿ ಕೊಂಡಿ ರುವುದಾಗಿ ಪೊಲೀಸರು ಹೇಳಿದ್ದಾರೆ.