Advertisement

ಮಗು ಮತ್ತು ವಿದ್ಯುತ್‌

10:10 AM Dec 25, 2019 | mahesh |

ಕಾಂತತ್ವವನ್ನು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟವನು ಇಂಗ್ಲೆಂಡಿನ ವಿಜ್ಞಾನಿ ಮೈಕಲ್‌ ಫ್ಯಾರಡೆ. ಇದನ್ನು ಪ್ರಯೋಗದ ಮೂಲಕ ಫ್ಯಾರಡೆ ಲಂಡನ್ನಿನ ರಾಯಲ್‌ ಸೊಸೈಟಿಯಲ್ಲಿ ಮೊದಲ ಬಾರಿಗೆ ಪ್ರಕಟಪಡಿಸಿದ. ಆ ವಿಶೇಷ ಸಂದರ್ಭಕ್ಕೆಂದು ಇಂಗ್ಲೆಂಡಿನ ಪ್ರಧಾನಿಯಾಗಿದ್ದ ವಿಲಿಯಂ ಗ್ಲಾಡ್‌ಸ್ಟನ್‌ನನ್ನು ಕೂಡ ಆಮಂತ್ರಿಸಲಾಗಿತ್ತು. ಫ್ಯಾರಡೆ ಆ ಕಾಲಕ್ಕಾಗಲೇ ಪ್ರಸಿದ್ಧ ವಿಜ್ಞಾನಿಯಾಗಿದ್ದುದರಿಂದ ಅವನ ಹೊಸ ಅನ್ವೇಷಣೆಯ ವಿಷಯದಲ್ಲಿ ಸಹಜವಾಗಿಯೇ ಕುತೂಹಲ ಸೃಷ್ಟಿಯಾಗಿತ್ತು. ಪ್ರಯೋಗ ಯಶಸ್ವಿಯಾಗಿ ನಡೆಯಿತು. ತುಂಬಿದ ಸಭಾಂಗಣದಲ್ಲಿ ದೊಡ್ಡ ಕರತಾಡನ ಹುಟ್ಟಿತು. ಎಲ್ಲವೂ ಸರಿ, ಕೊನೆಗೆ ಪ್ರಧಾನಿ ಗ್ಲಾಡ್‌ಸ್ಟನ್‌ ಎದ್ದುನಿಂತ. ಅವನ ಅಭಿಪ್ರಾಯ ಏನಿರಬಹುದೆಂಬ ಕುತೂಹಲದಿಂದ ಸಭಾಂಗಣ ಸ್ತಬ್ಧವಾಯಿತು. ಗ್ಲಾಡ್‌ಸ್ಟನ್‌ ಆಗ, ಪ್ರಯೋಗವೇನೋ ಅದ್ಭುತ. ಆದರೆ ಇದರಿಂದ ಪ್ರಯೋಜನ ಏನು? ಎಂದು ಪ್ರಶ್ನಿಸಿದ. ಫ್ಯಾರಡೆ ಕೂಡಲೇ, ಪ್ರಯೋಜನ ಯಾಕಿಲ್ಲ! ನೀವು ಮುಂದೊಂದು ದಿನ ಇದರ (ವಿದ್ಯುತ್ತಿನ) ಮೇಲೆ ತೆರಿಗೆ ಹಾಕಿ ದುಡ್ಡುಪೀಕಲು ಎಲ್ಲ ಸಾಧ್ಯತೆಗಳೂ ಉಂಟಲ್ಲ! ಎಂದುತ್ತರಿಸಿ ಪ್ರಧಾನಿಯ ಬಾಯಿಮುಚ್ಚಿಸಿದ. ಇಂದು ವಿದ್ಯುತ್‌ ಸೇವೆ ಕೊಟ್ಟು ಜನರಿಂದ ಶುಲ್ಕ ಪಡೆಯದ ದೇಶ ಯಾವುದಿದೆ!

Advertisement

ಇದೇ ಪ್ರಯೋಗವನ್ನು ಫ್ಯಾರಡೆ ಇನ್ನೊಮ್ಮೆ ಸಾರ್ವಜನಿಕರಿಗಾಗಿ ಪ್ರದರ್ಶಿಸಿದಾಗಲೂ ಅವನಿಗೆ ಎದುರಾದದ್ದು ಅದೇ ಪ್ರಶ್ನೆಯೇ. ಕೈಯಲ್ಲಿ ಮಗುವನ್ನು ಹಿಡಿದುಕೊಂಡಿದ್ದ ತಾಯಿಯೊಬ್ಬಳು ಎದ್ದುನಿಂತು ಫ್ಯಾರಡೆಯವರೆ, ಈ ಪ್ರಯೋಗದಿಂದ ಏನು ಉಪಯೋಗ? ಆ ವಿದ್ಯುತ್ತಿನಿಂದ ಏನು ಮಾಡಲು ಬರುತ್ತದೆ? ಎಂದು ಕೇಳಿದಳಂತೆ. ಒಡನೆ ಫ್ಯಾರಡೆ, ಆಗತಾನೇ ಹುಟ್ಟಿದ ಮಗುವಿನಿಂದ ಏನು ಪ್ರಯೋಜನ, ಹೇಳಿ ತಾಯಿ! ಎಂದನಂತೆ.

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next