Advertisement
ಮಕ್ಕಳಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಅಲರ್ಜಿ ಬಹು ಸಾಮಾನ್ಯವಾದುದು. ಅವು ನಿರಪಾಯಕಾರಿ ಎಂಬುದಾಗಿ ಪರಿಗಣಿತವಾಗಿರುವುದು ಮತ್ತು ಅನೇಕ ಮಕ್ಕಳು ಇದರಿಂದ ಬಳಲುವುದರಿಂದ ತಮ್ಮ ಮಗು ಕೂಡ ತಾನೇ ತಾನಾಗಿ ಗುಣ ಹೊಂದಬಹುದು ಎಂಬ ಹೆತ್ತವರ ಭಾವನೆಯಿಂದಾಗಿ ಮಕ್ಕಳ ಅಲರ್ಜಿಗಳ ಬಗ್ಗೆ ಯಾರೂ ಹೆಚ್ಚು ಗಮನ ಹರಿಸಲು ಹೋಗುವುದಿಲ್ಲ.ಅಲರ್ಜಿಗಳು ಆಹಾರದಿಂದ ಉಂಟಾಗಿ ಚರ್ಮದ ಕಡೆಗೆ ಮತ್ತು ಅಸ್ತಮಾ, ಅಲರ್ಜಿಕ್ ರಿನೈಟಿಸ್ ಆಗಿ ಪ್ರಗತಿ ಹೊಂದುವುದನ್ನು ತಡೆಯಲು ಸಾಧ್ಯವಾಗುವುದು ಮಕ್ಕಳ ಅಲರ್ಜಿಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದಾಗ ಮಾತ್ರ. ಅಲರ್ಜಿಗಳನ್ನು ಬೇಗನೆ ಪತ್ತೆಹಚ್ಚಿದಾಗ ಮಾತ್ರ ಶ್ವಾಸಾಂಗದಲ್ಲಿ ಹಾಗೂ ಚರ್ಮದಲ್ಲಿ ಶಾಶ್ವತ ಬದಲಾವಣೆ ಉಂಟಾಗುವುದನ್ನು ತಡೆಯಬಹುದು ಮತ್ತು ಇದರಿಂದ ಅಂಥ ಮಕ್ಕಳು ಉತ್ತಮ ಗುಣಮಟ್ಟದ ದೀರ್ಘಕಾಲಿಕ ಜೀವನವನ್ನು ನಡೆಸಬಹುದಾಗಿದೆ.
- ಮಕ್ಕಳ ಅಸ್ತಮಾ ಮತ್ತು ಉಬ್ಬಸ
- ಅಲರ್ಜಿಕ್ ರಿನೈಟಿಸ್
- ಅಟಾಪಿಕ್ ಡರ್ಮಟೈಟಿಸ್ ಮತ್ತು ಚರ್ಮದ ಅಲರ್ಜಿ/ ದದ್ದುಗಳು
- ಧೂಳಿನ ಅಲರ್ಜಿ
- ಪರಾಗರೇಣುಗಳ ಅಲರ್ಜಿ
- ಕ್ರಿಮಿಕೀಟಗಳ ಅಲರ್ಜಿ (ಜೇನ್ನೊಣ, ಕಣಜದ ಹುಳು, ಸೊಳ್ಳೆ)
- ಅರ್ಟಿಕೇರಿಯಾ
- ಆ್ಯಂಜಿಯೊಎಡೆಮಾ
- ಆಹಾರದ ಅಲರ್ಜಿಗಳು
- ಲೇಟೆಕ್ಸ್ ಅಲರ್ಜಿ
- ಅಲರ್ಜಿಕ್ ಮತ್ತು ಕಾಂಟ್ಯಾಕ್ಟ್ ಡರ್ಮಟೈಟಿಸ್
- ಔಷಧ ಅಲರ್ಜಿಗಳು
- ಅನಾಫಿಲಾಕ್ಸಿಸ್
Related Articles
Advertisement
ಚರ್ಮದ ಅಲರ್ಜಿಗಳು:
ಕೆಂಪು ಬಣ್ಣದ ದಡಿಕೆಗಳು ಮತ್ತು ತುರಿಕೆ, ಚರ್ಮ ಶುಷ್ಕವಾಗಿದ್ದು ದದ್ದುಗಳು. ಆಹಾರದ ಅಲರ್ಜಿಗಳು ಉಲ್ಬಣಿಸಿ ಚರ್ಮದ ಅಲರ್ಜಿಗಳ ಲಕ್ಷಣಗಳು ಉಂಟಾಗಲೂ ಬಹುದು.
ಆಹಾರದ ಅಲರ್ಜಿಗಳು:
ತುಟಿಗಳು ಬಾತುಕೊಳ್ಳುವುದು, ನಿರ್ದಿಷ್ಟ ಆಹಾರವಸ್ತುಗಳನ್ನು ಸೇವಿಸಿದ ಬಳಿಕ ಬಾಯಿ, ಗಂಟಲು ಮತ್ತು ತುಟಿಗಳಲ್ಲಿ ತುರಿಕೆ ಉಂಟಾಗುವುದು, ಹೊಟ್ಟೆನೋವು, ವಾಂತಿ ಮತ್ತು ಚರ್ಮದಲ್ಲಿ ದಡಿಕೆಗಳು ಉಂಟಾಗುವುದು.
ಅರ್ಟಿಕೇರಿಯಾ: ಚರ್ಮದ ಮೇಲೆ ಕೆಂಪಾದ ದಡಿಕೆಯ ಗುತ್ಛಗಳು
ಲಭ್ಯವಿರುವ ಮಕ್ಕಳ ಅಲರ್ಜಿ ಆರೋಗ್ಯ ಸೇವೆಗಳು :
- ಮೇಲ್ಕಂಡ ಎಲ್ಲ ಅಲರ್ಜಿಗಳ ತಪಾಸಣೆ ಮತ್ತು ಪತ್ತೆ
- ಆಹಾರ ಮತ್ತು ಔಷಧ ಅಲರ್ಜಿ ತಪಾಸಣೆ
- ಸ್ಕಿನ್ ಪ್ರಿಕ್ ತಪಾಸಣೆ
- ಪ್ಯಾಚ್ ತಪಾಸಣೆ
- ಶ್ವಾಸಕೋಶ ಕಾರ್ಯಾಚರಣೆ ಪರೀಕ್ಷೆ
- ಮೇಲ್ಕಂಡ ಎಲ್ಲ ಅಲರ್ಜಿಗಳಿಗೆ ಚಿಕಿತ್ಸೆ