Advertisement

Chikodi; ಸಿಲಿಂಡರ್‌ ಸ್ಪೋಟ ಓರ್ವ ಸಾವು: ಮೂವರಿಗೆ ಗಾಯ

09:37 PM Aug 22, 2024 | Team Udayavani |

ಚಿಕ್ಕೋಡಿ: ಲೈಟ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್‌ ಸ್ಫೋಟಗೊಂಡಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಗುರುವಾರ (ಆ.22)ನಡೆದಿದೆ.

Advertisement

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸೆಳಕೆ (55) ಮೃತ ದುರ್ದೈವಿ.

ಮತ್ತೋರ್ವ ಕಾರ್ಮಿಕ ಜ್ಞಾನೋದಯ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದ್ದು, ಆತನನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಲಿಂಡರ್ ಸ್ಫೋಟದ ತೀವ್ರತೆಗೆ ಪಕ್ಕದ ಮನೆಯ ಗೋಡೆ ಕುಸಿದು, ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.

ಮಕ್ಕಳಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

ಘಟನೆ ವಿವರ
ಗ್ಯಾಸ್‌ ಪೈಪ್ ಕಟ್ ಆಗಿ ರಾತ್ರಿಯಿಡೀ ಸೋರಿಕೆಯಾಗಿದೆ. ಇದರ ಅರಿವು ಇರದ ಸೂರ್ಯಕಾಂತ ಬೆಳಗಿನ ಜಾವ ಅಡುಗೆ ಮನೆ ಲೈಟ್ ಆನ್‌ ಮಾಡಿದ್ದಾರೆ. ಈ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡು ಸಿಲಿಂಡ್‌ ಬ್ಲಾಸ್ಟ್‌ ಆಗಿದೆ. ಸೂರ್ಯಕಾಂತ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದು, ಪಕ್ಕದ ಮನೆಯ ಗೋಡೆಗೂ ಹಾನಿಯಾಗಿದೆ. ಮಕ್ಕಳಿಬ್ಬರ ಮೇಲೆ ಗೋಡೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next