ಚಿಕ್ಕಮಗಳೂರು: ಕಾಫಿನಾಡಲ್ಲಿ ಬೆಳ್ಳಂ ಬೆಳಗ್ಗೆ ಐ.ಟಿ. ದಾಳಿ ನಡೆಸಿದ್ದು, ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್ ಮನೆಗೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Advertisement
ನಗರದ ಷರಿಫ್ ಗಲ್ಲಿಯಲ್ಲಿರುವ ಅಕ್ಮಲ್ ಅವರ ನಿವಾಸಕ್ಕೆ ದಾಳಿ ನಡೆಸಿದ್ದು, ಆ ಬಳಿಕ ಅಕ್ಮಲ್ ಒಡೆತನದ ಕಾಫಿ ಕ್ಯೂರಿಂಗ್ ಮೇಲೂ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಅಕ್ಮಲ್ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.