Advertisement

ಜಿಲ್ಲಾ ಉತ್ಸವ ಅದ್ಧೂರಿ ಯಶಸ್ಸಿಗೆ ಶ್ರಮಿಸಿ

05:13 PM Feb 01, 2020 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆಯಲಿರುವ ಜಿಲ್ಲಾ ಉತ್ಸವವನ್ನು ಅದ್ಧೂರಿಯಾಗಿ ಯಾವುದೇ ಲೋಪವಾಗದಂತೆ ಆಚರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ಹೇಳಿದರು.

Advertisement

ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಬೀದಿ ಉತ್ಸವ ಹಾಗೂ ಆಹಾರ ಮೇಳ ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಗೆ ಮೆರಗು ತರುವಂತಹ ಜಿಲ್ಲಾ ಉತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಬೇಕು. ಅದಕ್ಕಾಗಿ ಬೀದಿ ಉತ್ಸವ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಎಲ್ಲಾ ಸಮುದಾಯದ ಮಹಿಳೆಯರು ಭಾಗವಹಿಸಲು ಅವಕಾಶವಿದೆ. ಬಗೆ ಬಗೆಯ ರುಚಿಕರ ಖಾದ್ಯಗಳ ತಯಾರಿಕೆಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಆಹಾರ ಮೇಳದಲ್ಲಿ ನಗರದ ಎಂ.ಜಿ.ರಸ್ತೆಯ ಎರಡು ಬದಿಗಳಲ್ಲಿ ಸಣ್ಣ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ನಿಷೇಧಿಸಲಾಗುವುದು. ರುಚಿಕರವಾದ ವಿವಿಧ ದೇಶಿ-ವಿದೇಶಿಯ ಖಾದ್ಯ ತಯಾರಿಸಲು, ವಿವಿಧ ಮನೋರಂಜನಾತ್ಮಕ ಆಟಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ,
ನಗರದ ಸ್ವತ್ಛತೆ ಮೊದಲ ಆದ್ಯತೆ ನೀಡಲಾಗಿದೆ. ವಾಹನಗಳ ದಟ್ಟಣೆ ತಡೆಯಲು ನಗರದ ಹೊರ ವಲಯಗಳಲ್ಲಿ ಹಾಗೂ ಮಾರ್ಕೆಟ್‌ ರಸ್ತೆಯ ಭಾಗಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು
ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಉತ್ಸವಕ್ಕೆ ಎಲ್ಲಾ ಅಧಿಕಾರಿ ವರ್ಗದವರ ಸಹಕಾರ ಅತ್ಯಗತ್ಯವಾಗಿದೆ. ವಿವಿಧ ಜಿಲ್ಲೆಗಳಿಂದ ನಾನಾ ಕಲಾವಿದರು, ಗಣ್ಯರು ಬರಲಿದ್ದು, ಅವರಿಗೆ ಉಳಿಯಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ವಸತಿಗೃಹ ಮಾಲಿಕರಲ್ಲಿ ಮನವಿ ಮಾಡಿದರು.

ಕಲಾವಿದರಿಗೆ ಅಂಬೇಡ್ಕರ್‌ ಭವನ, ಜೈನ ಸಮುದಾಯ, ಕಲಾ ಮಂದಿರಗಳಲ್ಲಿ ಉಳಿದುಕೊಳ್ಳುವ ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಅಗತ್ಯವಿದ್ದಲ್ಲಿ 5 ಕಿ.ಮೀ. ವ್ಯಾಪ್ತಿಯ ಪ್ರದೇಶದೊಳಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಉತ್ಸವದಲ್ಲಿ ಯಾವುದೇ ಕೊರತೆಯಾಗದಂತೆ ಅದರ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೇಳಿಕೊಂಡರು.
ಸಭೆಯಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಎಚ್‌.ಡಿ.ರೇವಣ್ಣ, ಆಹಾರ ಮತ್ತು ಸುರಕ್ಷಿತ ಅಂಕಿತ ಅಧಿಕಾರಿ ಡಾ| ಪುರುಷೋತ್ತಮ್‌, ವರಸಿದ್ಧಿ ವೇಣುಗೋಪಾಲ್‌, ಮಂಜುನಾಥ್‌ ಜೋಷಿ, ದೀಪಕ್‌ ದೊಡ್ಡಯ್ಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next