Advertisement
ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ, ಛತ್ರಪತಿ ಶಿವಾಜಿ ಹಾಗೂ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಶ್ರಮ ಸಂಸ್ಕೃತಿ ಎಂದರೆ ದುಡಿದು ತಿನ್ನಬೇಕು. ಶ್ರಮವಿಲ್ಲದ ಸಂಪಾದನೆ ಪಾತಕವಿದ್ದಂತೆ. ದಾಸೋಹ ಕಾಯಕ ಮಹತ್ವವಾದುದು. ಅತಿಯಾದ ಸಂಗ್ರಹಣೆ ಒಳ್ಳೆಯದಲ್ಲ. ಜಾತಿ ಪದ್ಧತಿ ಅಳಿಸಿ ನೀತಿವಂತರಾಗಬೇಕೆಂದು ತಿಳಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ್ ಸರ್ವಜ್ಞರ ಕುರಿತು ಉಪನ್ಯಾಸ ನೀಡಿ, ಭಾರತದಲ್ಲಿ ಇಂದಿಗೂ ಜಾತಿವ್ಯವಸ್ಥೆ, ಮೇಲು-ಕೀಳು ಎಂಬ ಭಾವನೆ ಅಸ್ಥಿತ್ವದಲ್ಲಿರುವುದು ದುರಂತ ಸಂಗತಿ. ಪ್ರಕೃತಿ ಮಾತೆಯಲ್ಲಿ ಇಲ್ಲದ ಜಾತಿ ವ್ಯವಸ್ಥೆ, ಅಸಮಾನತೆ, ಭಾವನೆ ಇಂದಿನ ಜನತೆಯಲ್ಲಿದೆ. 12ನೇ ಶತಮಾನದಲ್ಲಿ ಅನೇಕ ಶಿವಶರಣರು ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿ ಸಮಾಜ ಸುಧಾರಣೆಗೆ ಮುಂದಾಗಿದ್ದರು ಎಂದು ಹೇಳಿದರು.
ಸರ್ವಜ್ಞರು ಸಮಾಜದಲ್ಲಿ ಕಂಡಂತಹ ಅಂಕು ಡೊಂಕುಗಳು, ಆಗು ಹೋಗುಗಳನ್ನು ತ್ರಿಪದಿ ಸಾಹಿತ್ಯದ ಮೂಲಕ ತಿದ್ದುವ ಕೆಲಸ ಮಾಡಿದರು. ತಿರುವಳ್ಳುವರ್, ವೇಮನರ ಸಾಲಿನಲ್ಲಿ ಸರ್ವಜ್ಞ ಕವಿ ಶ್ರೇಷ್ಠರು ನಾಡಿನಾದ್ಯಂತ ಸಂಚರಿಸಿ ಸಮಾಜದ ಗರಿಷ್ಠ-ಕನಿಷ್ಠ, ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಸುಧಾರಣೆಗೆ ಮುಂದಾದವರು. ಅವರು ಪ್ರತಿಯೊಬ್ಬರ ಬದುಕಿಗೂ ಸೂರ್ತಿಯಾಗಿದ್ದಾರೆ ಎಂದರು.
ಕಳಸಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ| ಸತ್ಯ ನಾರಾಯಣ್ ಛತ್ರಪತಿ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ| ಸಿ. ರಮೇಶ್, ದಲಿತ ಮುಖಂಡ ಕೆ.ಟಿ. ರಾಧಾಕೃಷ್ಣ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಗಣೇಶ್ ರಾವ್, ಕುಂಬಾರ ಸಮಾಜದ ಮುಖಂಡ ಏಕಾಂತ್ ರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.