Advertisement

ಕೋವಿಡ್  ಸಂಕಷ್ಟದಲ್ಲೂ ಕೈ ಹಿಡಿದ ನರೇಗಾ!

01:06 PM Apr 27, 2020 | Naveen |

ಚಿಕ್ಕಮಗಳೂರು: ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಹಿಮ್ಮೆಟ್ಟಿಸಲು ಸರ್ಕಾರ ಲಾಕ್‌ಡೌನ್‌ ವಿಧಿಸಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಲಾಕ್‌ ಡೌನ್‌ನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ದಿಕ್ಕೇ ತೋಚದಂತಾದಾಗ ಇಂತವರ ನೆರವಿಗೆ ಬಂದಿದ್ದೇ ಮಹಾತ್ಮಾ ಗಾಂಧಿ ನರೇಗಾ ಯೋಜನೆ.

Advertisement

ಅಂದಿನ ದುಡಿಮೆಯಿಂದಲೇ ತಮ್ಮ ಇಡೀ ಕುಟುಂಬವನ್ನು ಸಲಹುತ್ತಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರದಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಗತ್ಯ ಕುಟುಂಬಗಳಿಗೆ ಉದ್ಯೋಗ ನೀಡುವಂತೆ ನಿರ್ದೇಶನ ನೀಡಲಾಯಿತು. ಸರ್ಕಾರದ ಆದೇಶದಂತೆ ಕಾರ್ಯಪ್ರವೃತ್ತವಾದ ಇಲಾಖೆ ಕೆಲಸ ಮಾಡಲು ಆಸಕ್ತಿ ಉಳ್ಳವರಿಗೆ ಉದ್ಯೋಗವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಜನರಿಗೆ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ತೆರೆದ ಬಾವಿ, ಕೊಳವೆ ಬಾವಿಗಳ ಮರು ಪೂರಣ ಕೆಲಸ ನೀಡಲು ಮುಂದಾಯಿತು. 275 ರೂ. ವೇತನದಂತೆ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗವನ್ನು
ನೀಡಿದೆ.

ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,45,874 ಮಂದಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಲಾಕ್‌ ಡೌನ್‌ನಿಂದಾಗಿ ಜಿಲ್ಲೆಯಲ್ಲಿ 3,479 ಮಂದಿ ಉದ್ಯೋಗಕ್ಕೆ ಬೇಡಿಕೆ ಇಟ್ಟಿದ್ದು, ಅಷ್ಟೂ ಮಂದಿಗೆ ಉದ್ಯೋಗ ನೀಡಲಾಗಿದೆ. 54,805 ಮಾನವ ದಿನಗಳ ಉದ್ಯೋಗವನ್ನು ಸೃಜನ ಮಾಡಲಾಗಿದೆ. ಬದು ನಿರ್ಮಾಣ, ಕೃಷಿ ಹೊಂಡ, ಕೊಟ್ಟಿಗೆ ನಿರ್ಮಾಣ, ತೋಟಗಾರಿಕೆ, ವಸತಿ, ಮಳೆನೀರು ಕೊಯ್ಲು ಕಾಮಗಾರಿ ನಡೆಸಿದ್ದು, 1,323 ಕಾಮಗಾರಿಗಳನ್ನು ಲಾಕ್‌ಡೌನ್‌ ನಂತರ ಪ್ರಾರಂಭಿಸಲಾಗಿದೆ.

ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗವನ್ನು ಸೃಜನೆ ಮಾಡಲಾಗಿದ್ದು, ಓರ್ವ ವ್ಯಕ್ತಿಗೆ ಒಂದು ದಿನದ ಕೆಲಸಕ್ಕೆ 275 ರೂ. ವೇತನವನ್ನು ನೀಡಲಾಗುತ್ತಿದೆ. ಏ.1ರಿಂದ ಇದುವೆರೆಗೂ 1 ಕೋಟಿ 45ಲಕ್ಷದ 75ಸಾವಿರ ರೂ. ವೇತನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಜನರಿಗೆ ಇದುವರೆಗೂ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾಸಿಕ ಗುರಿ 1,6800 ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ಶೇ.33 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಲಾಕ್‌ ಡೌನ್‌ ವಿದಿ ಸಿದ್ದರಿಂದ ಉದ್ಯೋಗವಿಲ್ಲದೇ ಜನರು ಪರದಾಡುವಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಉದ್ಯೋಗ ನೀಡಿದೆ.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ಜನತೆಗೆ ಉದ್ಯೋಗ ನೀಡಿರುವುದು ಜಿಲ್ಲೆಯ ಜನತೆಗೆ ಅನುಕೂಲವಾಗಿದೆ. ಕೊರೊನಾಗೆ ಸಂಬಂ ಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಉದ್ಯೋಗ ನೀಡಲಾಗಿದೆ. ಜಿಲ್ಲೆಯಲ್ಲಿ ಗುಂಪು ಕಾಮಗಾರಿಗಳಿಗಿಂತ ಹೆಚ್ಚು ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಉದ್ಯೋಗಕ್ಕೆ ಬರುವ ಪ್ರತಿಯೊಬ್ಬರು ಕೋವಿಂಡ್‌-19 ರೋಗವನ್ನು ಹರಡಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಎಲ್ಲರೂ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಮೇಲ್ಪಿಚಾರಣೆಗೆ ನೇಮಿಸಲಾಗಿದೆ.
ಹನುಮಂತಪ್ಪ, ಉಪ ಕಾರ್ಯದರ್ಶಿ (ಪ್ರಭಾರ)

ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next