Advertisement

ದೇಶದ ಸಮಸ್ಯೆಗಳಿಗೆ ಸಂವಿಧಾನದಲ್ಲಿದೆ ಪರಿಹಾರ

06:07 PM Apr 15, 2020 | Naveen |

ಚಿಕ್ಕಮಗಳೂರು: ದೇಶ ಎದುರಿಸುತ್ತಿರುವ ಆರ್ಥಿಕ, ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಯಲ್ಲಿ ಯೋಗ್ಯ ಮಾರ್ಗದರ್ಶನಗಳಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕೆಂದು ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ಮಂಗಳವಾರ ನಗರದ ಜಿಪಂ ಆವರಣದಲ್ಲಿ ಭಾರತರತ್ನ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 129ನೇ ಜನ್ಮ ದಿನಾಚರಣೆ ಅಂಗವಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಂವಿಧಾನವನ್ನು ಕೇವಲ ಶೋಷಿತ ವರ್ಗದವರ ಕಲ್ಯಾಣಕ್ಕೆ ಮಾತ್ರವಲ್ಲದೇ, ದೇಶದ ಸರ್ವಜನರ ಒಳಿತಿಗೂ ಮಾರ್ಗ ದರ್ಶನ ಮಾಡಿದ್ದಾರೆ. ಕೇವಲ ಸಂವಿಧಾನದಿಂದ ಮಾತ್ರ ಸಮಾಜದ ಹಾಗೂ ರಾಷ್ಟ್ರದ ಉದ್ಧಾರ ಆಗುವುದಿಲ್ಲ. ಆದರೆ, ಸಂವಿಧಾನ ಯಾರ ಕೈಯಲ್ಲಿ ಇರುತ್ತದೆ ಎನ್ನುವುದರ ಮೇಲೆ ಹಾಗೂ ಅದು ಹೇಗೆ ಅನುಷ್ಠಾನ ಆಗುತ್ತದೆ ಎನ್ನುವುದರ ಮೇಲೆ ನಿರ್ಧಾರವಾಗಿರುತ್ತದೆ ಎಂದರು.

ಮೇಲ್ಮನೆ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಸಂವಿಧಾನ ನಮ್ಮ ಶ್ರೇಷ್ಠ ಗ್ರಂಥ ವಾಗಿದ್ದು, ಅದರ ಆಶಯಕ್ಕೆ ತಕ್ಕಂತೆ ನಾವು ಕರ್ತವ್ಯ ನಿರ್ವಹಿಸಬೇಕು ಎಂದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯಕುಮಾರ್‌, ಸದಸ್ಯರಾದ ಸೋಮ ಶೇಖರ್‌, ಜಸಂತಾ ಅನಿಲ್‌ ಕುಮಾರ್‌, ಕವಿತಾ ಲಿಂಗರಾಜು, ತಾಪಂ ಸದಸ್ಯರಾದ ಮಹೇಶ್‌, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್‌, ಸಿಇಒ ಎಸ್‌.ಪೂವಿತಾ, ಎಸ್ಪಿ ಹರೀಶ್‌ ಪಾಂಡೆ, ದಲಿತ ಮುಖಂಡ ಕೆ.ಟಿ.ರಾಧಾಕೃಷ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next