Advertisement

ಜಿಲ್ಲೆಯಲ್ಲಿದೆ 20 ಮಾಲಿನ್ಯ ತಪಾಸಣಾ ಕೇಂದ್ರ

03:05 PM Sep 14, 2019 | Naveen |

ಎಸ್‌.ಕೆ.ಲಕ್ಷ್ಮೀಪ್ರಸಾದ್‌
ಚಿಕ್ಕಮಗಳೂರು:
ಜಿಲ್ಲಾದ್ಯಂತ ಒಟ್ಟು 20 ಕಡೆಗಳಲ್ಲಿ ಎಲ್ಲಾ ಬಗೆಯ ವಾಹನಗಳ ಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

Advertisement

ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ 15 ಹಾಗೂ ತರೀಕೆರೆಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯ ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲಿ 5 ಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ.

ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲು ಬಯಸುವವರು ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲ್ಲಿಂದ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಅರ್ಜಿಗಳನ್ನು ರವಾನಿಸಲಾಗುತ್ತಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯವರು ಸ್ಥಳ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಿದ ನಂತರ ಕೇಂದ್ರ ತೆರೆಯಲು ಅವಕಾಶ ನೀಡಲಾಗುತ್ತದೆ.

ಜಿಲ್ಲೆಯಲ್ಲಿ 3,16,582 ವಾಹನ ನೋಂದಣಿ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಒಟ್ಟು 3,16,582 ವಾಹನಗಳು ನೋಂದಣಿಯಾಗಿವೆ.

ಜಿಲ್ಲಾ ಕೇಂದ್ರವಾದ ನಗರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ತರೀಕೆರೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳು ಇವೆ. ಎರಡೂ ಕಚೇರಿಗಳಲ್ಲಿ ಒಟ್ಟಾರೆ 3,16,482 ವಾಹನಗಳು ನೋಂದಣಿಯಾಗಿವೆ.

Advertisement

ಜಿಲ್ಲೆಯಲ್ಲಿ ಮೋಟಾರ್‌ ಸೈಕಲ್ಗಳ ಪೈಕಿ 90 ಸಿಸಿಯ 29,176,51 ಇದ್ದರೆ, 300 ಸಿಸಿಯ 1,82,262 ಇವೆ. 300 ಸಿಸಿಗಿಂತ ಹೆಚ್ಚಿನವು 1,495 ಮೋಟಾರ್‌ ಕಾರುಗಳು, 38,325 ಸರಕು ಸಾಗಣೆ ವಾಹನಗಳು, 513, 4,167 ಜೀಪುಗಳು ಹಾಗೂ 9,699 ಆಟೋ ರಿಕ್ಷಾಗಳು ಇವೆ. 2,437 ಟ್ಯಾಕ್ಸಿಗಳು, 2,751 ಓಮ್ನಿ ಬಸ್‌ಗಳು, ಪಿಎಸ್‌ವಿಗಳು 285, ಕೆಎಸ್‌ಆರ್‌ಟಿಸಿ ಬಸ್‌ಗಳು 1,197, ಖಾಸಗಿ ಬಸ್‌ಗಳು 412, ಗೂಡ್ಸ್‌ ವಾಹನಗಳು 4,264, ಕಾಂಟ್ರ್ಯಾಕ್ಟ್ ಕ್ಯಾರಿಯೇಜಸ್‌ 14, ಟ್ರ್ಯಾಕ್ಟರ್‌ಗಳು 11,119, ಟ್ರೈಲರ್‌ಗಳು 10,267, ಮೋಟಾರ್‌ ಕ್ಯಾಬ್‌ಗಳು 252 ಇವೆ.

136 ಟಿಪ್ಪರ್‌ಗಳು, 3,547 ಪವರ್‌ ಟಿಲ್ಲರ್‌ಗಳು, 4 ರೂಕರ್, 5 ಅಗ್ನಿಶಾಮಕ ವಾಹನಗಳು, 3,665 ಎಲ್ಜಿವಿ, 3 ವ್ಹೀಲರ್, 60 ಆ್ಯಂಬುಲೆನ್ಸ್‌ಗಳು, 5 ಫೈರ್‌ ಫೈಟರ್, 747 ಮ್ಯಾಕ್ಸಿ ಕ್ಯಾಬ್‌ಗಳು, 7,997 ಎಲ್ಜಿವಿ, 4 ವ್ಹೀಲರ್ ಸೇರಿದಂತೆ ಇತರೆ 1,598 ವಾಹನಗಳು ಇವೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ, ಕೇಂದ್ರದಲ್ಲಿ ಎಲ್ಲವೂ ಸರಿಯಾಗಿದೆಯೇ?, ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಲಾಗುತ್ತಿದೆಯೇ? ಎಂಬ ಬಗ್ಗೆ ಪರಿಶೀಲಿಸುತ್ತಾರೆ. ಪ್ರತಿ 5 ವರ್ಷಗಳಿಗೊಮ್ಮೆ ಮಾಲಿನ್ಯ ತಪಾಸಣಾ ಕೇಂದ್ರದ ಪರವಾನಗಿಯನ್ನು ನವೀಕರಣಗೊಳಿಸಬೇಕಾಗುತ್ತದೆ.
ಮುರುಗೇಂದ್ರಪ್ಪ ಶಿರೋಡ್ಕರ್‌,
 ಪ್ರಾದೇಶಿಕ ಸಾರಿಗೆ ಅಧಿಕಾರಿ

ಖರೀದಿ ಕುಸಿತ
ಪ್ರತಿವರ್ಷ ಜಿಲ್ಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಹೊಸ ವಾಹನಗಳನ್ನು ಸಾರ್ವಜನಿಕರು ಖರೀದಿಸು ತ್ತಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಹೊಸ ವಾಹನಗಳ ಖರೀದಿ ಬಹಳ ಕಡಿಮೆಯಾಗಿದೆ. ಶೇ.40ರಷ್ಟು ವಾಹನಗಳ ಖರೀದಿ ಕಡಿಮೆಯಾಗಿದೆ ಎಂದು ಸಾರಿಗೆ ಇಲಾಖೆ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next