Advertisement

ಚಿಕ್ಕಮಗಳೂರು:ಕಡವೆ ಬೇಟೆ ಆರೋಪಿಗಳಿಗೆ ಸಚಿವದ್ವಯರ ರಕ್ಷಣೆ ?

11:43 AM Jan 07, 2017 | |

 ಚಿಕ್ಕಮಗಳೂರು: ನೂತನ ವರ್ಷಾಚರಣೆ ವೇಳೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪ ನೆತ್ತಿಚೌಕ ಅರಣ್ಯ ಪ್ರದೇಶದಲ್ಲಿ ಎರಡು ಕಡವೆ ಬೇಟೆಯಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕೆಲ ಆರೋಪಿಗಳು ಗುರುವಾರ ರಾತ್ರಿ ಮತ್ತೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಇದೀಗ ಪ್ರಕರಣದ ಆರೋಪಿಗಳಲ್ಲಿ ಪ್ರಭಾವಿಗಳು ಸೇರಿಕೊಂಡಿದ್ದು, ಅವರಿಗೆ ಸಚಿವರಿಬ್ಬರು ರಕ್ಷಣೆ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. 

Advertisement

ಆರೋಪಿಗಳ ಪೈಕಿ ಕೆಲವರು ನಿರೀಕ್ಷಣಾ ಜಾಮೀನು ಪಡೆಯುವ ಸಲುವಾಗಿ ನಗರದ ವಕೀಲರೊಬ್ಬರನ್ನು ಕಾಣಲು ಬಂದಿದ್ದ ಸುಳಿವಿನ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಖುದ್ದು ದಾಳಿ ನಡೆಸಿ, ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿಗಳು ಕೂದಲೆಳೆ ಅಂತರದಲ್ಲಿ ಪರಾರಿಯಾಗಿದ್ದರು. ದಾಳಿ ವೇಳೆ ಇಬ್ಬರು ತಾವು ತಂದಿದ್ದ ವಾಹನದಿಂದ ಜಿಗಿದು ಪರಾರಿಯಾಗಿದ್ದು, ಅಪರಿಚಿತರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯ ಇಂಜಿನಿಯರ್‌ಗಳು, ಬೆಂಗಳೂರು ರೈಫ‌ಲ್‌ ಕ್ಲಬ್‌ ಸದಸ್ಯರು ಎಂದು ತಿಳಿದು ಬಂದಿದ್ದು,  ಪ್ರಮುಖ ಆರೋಪಿ ರಫೀಕ್‌ ಎಂಬಾತನಿಗೆ ಸಚಿವರು ರಕ್ಷಣೆ ನೀಡುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. . 

Advertisement

Udayavani is now on Telegram. Click here to join our channel and stay updated with the latest news.

Next