Advertisement

ಬೀದಿಗಿಳಿದವರಿಗೆ ಪೊಲೀಸರ ಲಾಠಿ ರುಚಿ

01:06 PM Apr 08, 2020 | Naveen |

ಚಿಕ್ಕಮಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯಾದ್ಯಂತ ಲಾಕ್‌ಡೌನ್‌ ವಿಧಿಸಲಾಗಿದ್ದು, ಮಂಗಳವಾರ ಜಿಲ್ಲೆಯಲ್ಲೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನು ಇನಷ್ಟು ಬೀಗಿಗೊಳಿಸುವ ಮೂಲಕ ಜನರಿಗೆ ಬಿಸಿ ಮುಟ್ಟಿಸಿದೆ.

Advertisement

ನಗರದ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ಪೊಲೀಸರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಗರದ ಒಳ ಬರುವ ಮತ್ತು ಹೊರ ಹೋಗುವ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಾರಣವಿಲ್ಲದೇ ಸುತ್ತುವ ಬೈಕ್‌, ಕಾರು ಸವಾರರ ವಾಹನಗಳನ್ನು ಸೀಜ್‌ ಮಾಡಲಾಗುತ್ತಿದೆ. ಆಸ್ಪತ್ರೆ ಸೇರಿದಂತೆ ತುರ್ತು ಕಾರ್ಯಗಳಿಗೆ ತೆರಳುವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಖುದ್ದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹರೀಶ್‌ ಪಾಂಡೆ ಅವರೇ ರಸ್ತೆಗಳಿದಿದ್ದು, ಮಂಗಳವಾರ ಬೆಳಿಗ್ಗೆ ನಗರದಿಂದ ಕೊಪ್ಪ ಮಾರ್ಗವಾಗಿ ಸಂಚರಿಸಿದ ಎಸ್‌ಪಿ ಹರೀಶ್‌ ಪಾಂಡೆ ಚೆಕ್‌ಪೊಸ್ಟ್‌ಗಳಿಗೆ ಭೇಟಿ ನೀಡಿ ಕರ್ಫ್ಯೂ ಪಾಸ್‌ ಹೊಂದಿರುವರನ್ನು ತಾಪಸಣೆಗೆ ಒಳಪಡಿಸುವಂತೆ ಪೊಲೀಸ್‌ ಸಿಬ್ಬಂದಿಗೆ ಸೂಚಿಸಿದ್ದಾರೆ. ನಕಲಿ ಪಾಸ್‌ ಹಾವಳಿ ಬಗ್ಗೆ ಸೋಮವಾರ ವರದಿಯಾಗಿದ್ದು, ಎಸ್‌ಪಿ ಖುದ್ದು ಆಲ್ದೂರು ಚೆಕ್‌ಪೋಸ್ಟ್‌ನಲ್ಲಿ ಪಾಸ್‌ ಉಳ್ಳವರನ್ನು ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಅನಗತ್ಯ ಸಂಚರಿಸುವ ವಾಹನಗಳಿಗೆ ಕಡಿವಾಣ ಬಿದ್ದಿದ್ದು, ಪಡಿತರ ಪಡೆದುಕೊಳ್ಳಲು ಪಡಿತರ ಅಂಗಡಿಗಳ ಮುಂದೇ ಸಾಲು ನಿಲ್ಲುತ್ತಿದ್ದವರಿಗೆ ಕಡಿವಾಣ ಹಾಕಲು ಪೊಲೀಸರು ಹೆಣಗಾಡಿದ ದೃಶ್ಯಗಳು ಕಂಡು ಬಂದವು.

ರಾಜ್ಯ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲೂ ಪಡಿತರ ವಿತರಣೆ ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಸಾಮಾನ್ಯ ಜನತೆ ಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ಜನ್‌ಧನ್‌ ಖಾತೆಗೆ ಹಣ ಜಮಾ ಮಾಡಿದ್ದಾರೆಂಬ ಕಾರಣಕ್ಕೂ ನಗರದ ಕೆಲ ಬ್ಯಾಂಕ್‌ಗಳ ಮುಂದೇ ಮಹಿಳೆಯರು ಜಮಾಯಿಸಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಮಾರುಕಟ್ಟೆಯ ಸಮಯ ವನ್ನು 5 ಗಂಟೆಗೆ ಬದಲಾಗಿ 8 ಗಂಟೆಗೆ ಜಿಲ್ಲಾಡಳಿತ ಮತ್ತು ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ 8 ಗಂಟೆಗೆ ಸಮಯ ನಿಗದಿ ಮಾಡಿ ಸಾಮಾಜಿಕ ಅಂತರ ಕಾಪಾಡಿ ಕೊಂಡು ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ. ಆದೇಶ ಗಾಳಿಗೆ ತೂರಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮುಗಿಬಿಳುತ್ತಿರುವ ಕಾರಣ ಜನರನ್ನು ನಿಯಂತ್ರಿ ಸಲು ಮಂಗಳವಾರ ಪೊಲೀಸರು ಲಾಠಿ ಬಿಸಿದ ಘಟನೆ ವರದಿಯಾಗಿದೆ. ಜಿಲ್ಲಾಡಳಿತ ಜನಸಂಚಾರ ನಿಯಂತ್ರಿಸಲು ಬಿಗಿ ಕ್ರಮ ಅನುಸರಿಸುತ್ತಿರುವ ಹಿನ್ನೆಲೆ ಅನಗತ್ಯ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next