Advertisement

ಚಿಕ್ಕಮಗಳೂರು ಗೆದ್ದ ದೊಡ್ಡ “ಮಗಳು’!

02:21 AM Apr 15, 2019 | sudhir |

ಮಂಗಳೂರು: ಭಾರತದ ರಾಜ ಕೀಯ ಇತಿಹಾಸದಲ್ಲಿ ಈಗಿನ ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ವಾದ ಸ್ಥಾನವಿದೆ. ಏಕೆಂದರೆ, 1978ರ ಸಂದರ್ಭದಲ್ಲಿ ಈ ಎರಡೂ ಕ್ಷೇತ್ರಗಳು ಆಗಿನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿದ್ದವು. ಭಾರತದ ಉಕ್ಕಿನ ಮಹಿಳೆ ಎಂಬ ಬಿರುದಾಂಕಿತ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಈ ಚಿಕ್ಕಮಗಳೂರು ಲೋಕಸಭಾ (ಈಗ ಉಡುಪಿ- ಚಿಕ್ಕಮಗಳೂರು) ಕ್ಷೇತ್ರ.

Advertisement

ತುರ್ತು ಪರಿಸ್ಥಿತಿಯ ನೆರಳಿನ 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಅವರು ಅಲಹಾಬಾದ್‌ ಕ್ಷೇತ್ರದಿಂದ ಪರಾಭವಗೊಂಡರು; ಪಕ್ಷವೂ ಸೋತದ್ದರಿಂದೂ ಪ್ರಧಾನಿ ಪಟ್ಟ ಕಳೆದುಕೊಂಡರು. ಆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಜಯಿಸಿದವರು ಇಂದಿರಾ.
ಅವರು ತುರ್ತು ಪರಿಸ್ಥಿತಿಯ ಅನೇಕ ಕಾನೂನು ಕ್ರಮಗಳನ್ನು ಎದುರಿಸುವಂತಾಗಿತ್ತು. ಈ ಎಲ್ಲಾ ಕಾರಣಗಳಿಂದ ಅವ ರನ್ನು ಲೋಕಸಭೆಗೆ ಆರಿಸಿಕೊಳ್ಳುವುದೇ ಒಳ್ಳೆಯದೆಂದು ಪಕ್ಷ ನಿರ್ಧರಿಸಿತು. ಆಗ, ಕರ್ನಾಟಕದಲ್ಲಿ ಡಿ. ದೇವರಾಜ ಅರಸ್‌ ಅವರು ಪ್ರಬಲರಾಗಿದ್ದರು. ಇಂದಿರಾರನ್ನು ಚಿಕ್ಕಮಗಳೂರು ಕ್ಷೇತ್ರದಿಂದ, ಉಪ ಚುನಾವಣೆ ಮೂಲಕ ಆರಿಸಲು ಯತ್ನಿಸಬೇಕೆಂದು ತೀರ್ಮಾನಿಸಲಾಯಿತು. ಇಂದಿರಾ ಸ್ಪರ್ಧೆಗೆ ಅನುಕೂಲವಾಗಲು ಸಂಸದ ಡಿ. ಬಿ. ಚಂದ್ರೇಗೌಡ ರಾಜೀನಾಮೆ ನೀಡಿದರು.

ಇಂದಿರಾ ನಾಮ ಪತ್ರ ಸಲ್ಲಿಸಿದರು. ಆ ಕಾಲಕ್ಕೆ ಇದು ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆ ಯಾಯಿತು. ಚಿಕ್ಕಮಗಳೂರು ಫಲಿತಾಂಶವನ್ನು ದೇಶ ಮಾತ್ರವಲ್ಲ; ಜಗತ್ತಿಗೆ ಜಗತ್ತೇ ಕಾತರ ಕುತೂಹಲಗಳಿಂದ ಕಾಯುವಂತಾಯಿತು.

ಆಗ, ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಮೊರಾರ್ಜಿ ದೇಸಾೖ ಪ್ರಧಾನಮಂತ್ರಿಯಾಗಿದ್ದರು. ಜನತಾ ಪಕ್ಷ ಆಗ ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗಿ ರೂಪುಗೊಂಡ ಪಕ್ಷವಾಗಿತ್ತು. ಜನತಾ ಪಕ್ಷಕ್ಕೆ ಇಂದಿರಾ ಸೋಲು ಪ್ರಮುಖ ಎಜೆಂಡಾ ಆಗಿತ್ತು; ಅಂತೆಯೇ ಕಾಂಗ್ರೆಸ್‌ಗೆ ಇಂದಿರಾ ಗೆಲುವು ಕೂಡಾ. ಚುನಾವಣೆಯಲ್ಲಿ ಇಂದಿರಾ ವಿರುದ್ಧ ಸ್ಪರ್ಧಿಸಿದವರು ವೀರೇಂದ್ರ ಪಾಟೀಲ್‌. ಅವರು ಆಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಇಂದಿರಾ ಅವರು 70 ಸಾವಿರ ಮತಗಳ ಅಂತರದಿಂದ ಗೆದ್ದರು. ಚಿಕ್ಕಮಗಳೂರ ಹಿರಿಯ ಮಗಳು ಅಂತ ಹೇಳುತ್ತಿದ್ದರು. ಮತ್ತೆ ಪಾರ್ಲಿಮೆಂಟ್‌ ಪ್ರವೇಶಿಸಿದರು. ದೇಶದ ರಾಜಕೀಯದಲ್ಲಿ ಈ ಮೂಲಕ ಸತತ ಬದಲಾವಣೆಯೂ ಉಂಟಾಯಿತು. ಜನತಾ ದಳ ವಿಭಜನೆಯಾಯಿತು. 1980ರಲ್ಲಿ ಮತ್ತೆ ಇಂದಿರಾ ಪ್ರಧಾನಿಯಾದರು. 1984ರಲ್ಲಿ ಅವರ ಹತ್ಯೆಯಾಯಿತು.

ಅಂದಹಾಗೆ..
ಕರಾವಳಿಯ ತಿಂಡಿ ತಿನಿಸು, ಖಾದ್ಯಗ ಳನ್ನು ರಾಷ್ಟ್ರೀಯ ನಾಯಕರೆಲ್ಲ ಸವಿದಿದ್ದಾರೆ. – ಮೆಚ್ಚಿಕೊಂಡಿದ್ದಾರೆ. ನೀರು ದೋಸೆ, ಹೋಳಿಗೆ ಹಲವು ನಾಯಕರಿಗೆ ಅಚ್ಚುಮೆಚ್ಚು. ನಾನ್‌ವೆಜ್‌ನವರಾದರೆ ಮೀನು, ಊರ ಕೋಳಿಯ ಸುಕ್ಕ, ಕೋಳಿ ರೊಟ್ಟಿಗೆ ಆದ್ಯತೆ. ಇಂದಿರಾ ಅವರಿಗೆ ಇಲ್ಲಿನ ತುಪ್ಪದಲ್ಲಿ ಹುರಿದ ಗೋಡಂಬಿ, ಗೋಧಿ ಹಲ್ವಾ ಬಲುಪ್ರಿಯವಾಗಿತ್ತು. ಅವರದ್ದು ವಿರಳವಾದ ಬ್ಲಿಡ್‌ ಗ್ರೂಪ್‌. ಆಕೆ ಮಂಗಳೂರಿಗೆ ಬಂದಾಗಲೆಲ್ಲ ಅದೇ ಬ್ಲಿಡ್‌ ಗ್ರೂಪ್‌ನ ಇಬ್ಬರು (ಮಂಗಳೂರು, ಪಾಣೆ ಮಂಗಳೂರಿನವರು) ಭದ್ರತಾ ಅಧಿಕಾರಿಗಳ ಜತೆಯಲ್ಲಿರುತ್ತಿದ್ದರು.

Advertisement

–  ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next