Advertisement

ಚಿಕ್ಕೋಡಿ : ಕಡು ಬಡತನದಲ್ಲಿ ಹುಟ್ಟಿ ಅರೋಗ್ಯ ಸೇವೆಗೆ ಮುಂದಾದ ಗಡಿ ಭಾಗದ ಯುವಕ

10:13 PM May 16, 2022 | Team Udayavani |

ಚಿಕ್ಕೋಡಿ : ಹಿಂದುಳಿ ವರ್ಗದ ಸಮುದಾಯದ ಯುವಕನೋರ್ವ ಕಡು ಬಡತನದಲ್ಲಿ ಹುಟ್ಟಿ ಗುಣಮಟ್ಟದ ಶಿಕ್ಷಣ ಪಡೆದು ಇಂದು ವೈದ್ಯಕೀಯ ಪದವಿ ಯಶಸ್ವಿಯಾಗಿ ಮುಗಿಸಿ ಗಡಿ ಭಾಗದ ಕೀರ್ತಿ ಹೆಚ್ಚಿಸಿದ್ದಾನೆ.

Advertisement

ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಯುವಕ ಹರ್ಷಲ್ ಮಾಳು ಕೋರೆ ಎಂಬ ಯುವಕ ಎಂಬಿಬಿಎಸ್ ಪದವಿ ಪಡೆದಿದ್ದು, ಇತ್ತಿಚ್ಚೆಗೆ ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಜ್ಞಾನಿ ಪದ್ಮವಿಭೂಷಣ ವಿಜೇತ ಡಾ.ವಿ.ಕೆ.ಅತ್ರೆ, ಪಿಎಸ್‌ಪಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಆರ್.ದ್ವಾರಸ್ವಾಮಿ ನಾಯ್ಡು,   ಪ್ರಾಂಶುಪಾಲ ಎಸ್.ಎಲ್.ವಿಶ್ವನಾಥ್ ಹಾಗೂ ವೈದ್ಯಕೀಯ ಕ್ಷೇತ್ರದ ಗಣ್ಯರು ಹರ್ಷಲ್ ಕೋರೆ ಅವರಿಗೆ ಪದವಿ ಪ್ರಧಾನ ಮಾಡಿದ್ದು, ಇದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.

ತಂದೆ ಮಾಳು-ತಾಯಿ ಸಂಗೀತಾ ಕೋರೆ ಮಾರ್ಗದರ್ಶನದಲ್ಲಿ ಹರ್ಷಲ್ ಕೋರೆ 2014-16 ರಲ್ಲಿ ಸಿಎಟಿ ಮೂಲಕ ದೇಶದ ನಾಲ್ಕನೇ ಅತಿದೊಡ್ಡ ವೈದ್ಯಕೀಯ ಕಾಲೇಜು ಮತ್ತು ಕರ್ನಾಟಕದಲ್ಲಿ ಪ್ರಥಮ ವೈದ್ಯಕೀಯ ಕಾಲೇಜು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಆಯ್ಕೆಯಾದರು.  ಕಳೆದ ಆರು ವರ್ಷಗಳಿಂದ ನಿರಂತರವಾಗಿ ವ್ಯಾಸಂಗ ಮಾಡುತ್ತಿದ್ದು, ಎಂಬಿಬಿಎಸ್ ಪದವಿ ಪಡೆದು ಇಂದು ಸಾರ್ವಜನಿಕ ಆರೋಗ್ಯ ಸೇವೆಗಾಗಿ ಯುವಕ ಸಜ್ಜಾಗಿದ್ದಾನೆ.

ಇದನ್ನೂ ಓದಿ : ದುಬಾರಿ, ಕಳಪೆ ರಸಗೊಬ್ಬರ: ಕ್ರಮ ಕೈಗೊಳ್ಳಲು ಶಾಸಕ ಕೆ. ಮಹದೇವ್ ಸೂಚನೆ

ಬಾಲ್ಯದಿಂದಲೇ ಶಿಕ್ಷಣದತ್ತ ಆಕರ್ಷಿತರಾಗಿದ್ದ ಹರ್ಷಲ್ 6ನೇ ತರಗತಿಯಿಂದ 12ನೇ ತರಗತಿವರೆಗೆ ಉತ್ತಮ ಶಿಕ್ಷಣ ಪಡೆಯುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿರುವ ಶ್ರೀ ಸತ್ಯ ಸಾಯಿಬಾಬಾ ಸಾರ್ವಜನಿಕ ಸೇವಾ ಟ್ರಸ್ಟ್ನ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರು.  ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ಶೇ.100ರಷ್ಟು ಕೊಡುಗೆ ನೀಡಿ ಈ ಜನಸೇವೆಯಲ್ಲಿ ಉತ್ತಮ ಶಿಕ್ಷಣ ಪಡೆದು 12ರ ನಂತರ ಸಿಇಟಿ ಪರೀಕ್ಷೆಗೆ ಸಿದ್ಧರಾಗಿ ದೇಶದಲ್ಲಿ 352 ರ‍್ಯಾಂಕ ಪಡೆದು ವೈದ್ಯಕೀಯ ಪದವಿಗೆ ಆಯ್ಕೆಯಾಗಿದ್ದರು.

Advertisement

ಕಡು ಬಡತನಲ್ಲಿ ಜೀವನ ಸಾಗಿಸುವ ನಮ್ಮ ಕುಟುಂಬವು ನನ್ನ ಶಿಕ್ಷಣಕ್ಕೆ ಯಾವುದೇ ಅಡೆತಡೆ ಮಾಡದೇ ತಂದೆ-ತಾಯಿ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡಿದ್ದು ಇಂದು ವೈದ್ಯಕೀಯ ಪದವಿ ಪಡೆಯಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ನೀಡುವ ಸಂಕಲ್ಪ ನಾನು ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ ಡಾ. ಹರ್ಷಲ ಕೋರೆ.

ಬೆಂಗಳೂರಿನಲ್ಲಿ ನಡೆದ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ಗಡಿ ಭಾಗದಿಂದ  ನಿಂಗಪ್ಪ ಹರಕೆ, ರಾಯಪ್ಪ ಬನ್ನೆ, ಕೃಷ್ಣ ಅರಗೆ, ಮಾಳು ಕೋರೆ, ಸಂಗೀತಾ ಕೋರೆ, ಮಹಾದೇವ ಕೋರೆ, ಮಾಯವ್ವ ಕೋರೆ, ಸಂತೋಷ ಗಾವಡೆ, ಪ್ರದೀಪ ಲಗಾರೆ, ಲೀನಾ ಲಗಾರೆ, ವಿನಾಯಕ ಕೋರೆ, ಕೃಷ್ಣಾರೆಡ್ಡಿ ನಾವಳ್ಳಿ, ಪ್ರದೀಪ ಲಗಾರೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next