Advertisement

ವ್ಯಕ್ತಿ ನಿಷ್ಠೆ ತೋರುವ ಚಿಕ್ಕೋಡಿ ಮತದಾರರು 

12:30 AM Mar 08, 2019 | |

ಹುಬ್ಬಳ್ಳಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರು ಸತತ ಮೂರು ಬಾರಿ ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ತೋರಿದ್ದರು. ಪ್ರಸ್ತುತ ವಿಜಯಪುರದ ಸಂಸದ ಹಾಗೂ ಕೇಂದ್ರ ಸಚಿವರಾಗಿರುವ ರಮೇಶ ಜಿಗಜಿಣಗಿ ಅವರು ಈ ಹಿಂದೆ ಚಿಕ್ಕೋಡಿ ಕ್ಷೇತ್ರದಿಂದ ಬೇರೆ, ಬೇರೆ ಪಕ್ಷಗಳಿಂದ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದರು.

Advertisement

ಒಂದೇ ಪಕ್ಷ, ಒಬ್ಬರನ್ನೇ ಸತತವಾಗಿ ಏಳು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರು ನಂತರದ ದಿನಗಳಲ್ಲಿ ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿದ್ದರೂ ಒಬ್ಬರೇ ವ್ಯಕ್ತಿಯನ್ನು ಸತತ ಮೂರು ಬಾರಿ ಆಯ್ಕೆ ಮಾಡಿದ್ದರು. ಚಿಕ್ಕೋಡಿ ಕ್ಷೇತ್ರದಿಂದ ಸತತ ಏಳು ಬಾರಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ನ ಬಿ.ಶಂಕರಾನಂದ ಅವರು ದಾಖಲೆ ತೋರಿದ್ದರು. ಇದೇ ಕ್ಷೇತ್ರದಿಂದ ರಮೇಶ ಜಿಗಜಿಣಗಿ ಅವರು ಸತತ ಮೂರು ಬಾರಿ ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಿ ಮತ್ತೂಂದು ದಾಖಲೆ ಬರೆದಿದ್ದರು.

ಚಿಕ್ಕೋಡಿ ಕ್ಷೇತ್ರ ಈ ಹಿಂದೆ ಬೆಳಗಾವಿ ಉತ್ತಲೋಕಸಭಾ ಕ್ಷೇತ್ರವಾಗಿತ್ತು. 1951ರಲ್ಲಿ ನಡೆಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಶಂಕರಗೌಡ ಪಾಟೀಲ ಆಯ್ಕೆಯಾಗಿದ್ದರು. ನಂತರದಲ್ಲಿ ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಹುಕ್ಕೇರಿ, ಚಿಕ್ಕೋಡಿ-ಸದಲಗಾ, ಅಥಣಿ, ಕಾಗವಾಡ, ರಾಯಭಾಗ, ಕುಡಚಿ, ಯಮಕನಮರಡಿ ವಿಧಾನಸಕ್ಷೇತ್ರಗಳು ಬರುತ್ತವೆ.

ಎರಡು ರೀತಿಯ ದಾಖಲೆ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ಎರಡು ರೀತಿಯ ದಾಖಲೆಗೆ ವೇದಿಕೆಯಾಗಿದೆ. ಕಾಂಗ್ರೆಸ್‌ನ ಬಿ.ಶಂಕರಾನಂದ ಅವರು ಚಿಕ್ಕೋಡಿ ಕ್ಷೇತ್ರದಿಂದ 1967ರಿಂದ 1991ರವರೆಗೆ ಸತತ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಇದೊಂದು ದಾಖಲೆಯಾಗಿದೆ.

ಚಿಕ್ಕೋಡಿ ಕ್ಷೇತ್ರದಲ್ಲಿ ಬಿ.ಶಂಕರಾನಂದರನ್ನು ಸೋಲಿಸುವವರು ಯಾರೂ ಇಲ್ಲ ಎನ್ನುವ  ಸ್ಥಿತಿ ಇತ್ತು. ಜೀವಿತಾವಧಿ ಅವರೇ ಸಂಸದರಾಗಿ ಮುಂದುವರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುವಷ್ಟರ ಮಟ್ಟಿಗೆ ಅವರು ಪ್ರಭಾವ ಹೊಂದಿದ್ದರು. ಆದರೆ, 1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳದ ರತ್ನಮಾಲಾಸವಣೂರು ಅವರು ಬಿ.ಶಂಕರಾನಂದರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರಲ್ಲದೆ, ಶಂಕರಾನಂದರಿಗೆ ಬಹುದೊಡ್ಡ ಶಾಕ್‌ ನೀಡಿದ್ದರು.

Advertisement

ಜನತಾ ಪರಿವಾರದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ರಾಮಕೃಷ್ಣ ಹೆಗಡೆ ಅವರ‌ು ಜನತಾದಳದಿಂದ ಉಚ್ಛಾಟಿಸಿದ್ದರಿಂದ, ರಾಷ್ಟ್ರಮಟ್ಟದ ನಾಯಕರಾಗಿದ್ದ ರಾಮಕೃಷ್ಣ ಹೆಗಡೆುವರು 1997ರ ಫೆಬ್ರವರಿಯಲ್ಲಿ ಲೋಕಶಕ್ತಿ ಎಂಬ ಪಕ್ಷ ಸ್ಥಾಪಿಸಿದ್ದರು. ರಾಮಕೃಷ್ಣ ಹೆಗಡೆುವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿ ರಮೇಶ ಜಿಗಜಿಣಗಿ ಅವರು ಗುರುತಿಸಿಕೊಂಡಿದ್ದರು.

1998ರಲ್ಲಿ ಲೋಕಸಭೆಗೆ ನಡೆದ ಮಧ್ಯಂತರ ಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಶಕ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ ಜಿಗಜಿಣಗಿ ಅವರು, ಬಿ.ಶಂಕರಾನಂದರನ್ನು ಸುಮಾರು 1,31,238 ಮತಗಳಿಂದ ಸೋಲಿಸುವ ಮೂಲಕ ಲೋಕಸಭೆ ಪ್ರವೇಶಿಸಿ ಗಮನ ಸೆಳೆದಿದ್ದರು. ಆಗ ಲೋಕಶಕ್ತಿ, ಎನ್‌ಡಿಎ ಪಕ್ಷದ ಅಂಗಪಕ್ಷವಾಗಿ ಕಾರ್ಯ ನಿರ್ವಹಿಸಿತ್ತು. ನಂತರದಲ್ಲಿ, ಜನತಾ ಪರಿವಾರ ಒಗ್ಗೂಡಿಕೆ ಯತ್ನದಲ್ಲಿ ಲೋಕಶಕ್ತಿ, ಸಂಯುಕ್ತ ಜನತಾದಳದಲ್ಲಿ ವಿಲೀನವಾಗಿತ್ತು. 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಜನತಾದಳ ಆಭ್ಯರ್ಥಿಯಾಗಿ ಕಣಕ್ಕಿಳಿದು ಸತತ ಎರಡನೇ ಬಾರಿಗೆ ಗೆಲುವು ಕಂಡಿದ್ದರು.

ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ರಮೇಶ ಜಿಗಜಿಣಗಿಯವರು ಬಿಜೆಪಿ ಸೇರಿ, 2004ರ ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗಲೂ ಕ್ಷೇತ್ರದ ಮತದಾರರು ಅವರನ್ನು ಗೆಲ್ಲಿಸುವ ಮೂಲಕ ಹ್ಯಾಟ್ರಿಕ್‌ ಗೆಲುವಿನ ಸಾಧನೆ ತೋರುವಂತೆ ಮಾಡಿದ್ದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಬಿ.ಶಂಕರಾನಂದರನ್ನು ಬಿಟ್ಟರೆ, ಅತಿ ಹೆಚ್ಚು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾದ ಕೀರ್ತಿ ರಮೇಶ ಜಿಗಜಿಣಗಿ ಅವರದ್ದಾಗಿದೆ. ಶಂಕರಾನಂದ ಅವರು ಸತತ ಏಳು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, ರಮೇಶ ಜಿಗಜಿಣಗಿ ಅವರು ಸತತ ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ಪ್ರಸ್ತುತ ವಿಜಯಪುರ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರು ಕೇಂದ್ರ ಸಚಿವರಾಗಿದ್ದಾರೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next