Advertisement

ಚಿಕ್ಕೋಡಿ: ಏತ ನೀರಾವರಿ ಯೋಜನೆ: ಸಚಿವ ಕಾರಜೋಳಗೆ ರೈತರ ಅಭಿನಂದನೆ

06:55 PM Jul 18, 2022 | Team Udayavani |

ಚಿಕ್ಕೋಡಿ: ತಾಲೂಕಿನ ಪಶ್ಚಿಮ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ವಿಶೇಷ ಆಧ್ಯತೆ ನೀಡಿ ಮಂಜೂರು ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಸೋಮವಾರ ರೈತರು ಸನ್ಮಾನಿಸಿ ಗೌರವಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಚಿಕ್ಕೋಡಿಗೆ ಆಗಮೀಸಿದ ಸಂದರ್ಭದಲ್ಲಿ ನೀರಾವರಿಗೆ ಒಳಪಡುವ ಪಟ್ಟಣಕುಡಿ, ಚಿಂಚಣಿ, ನವಲಿಹಾಳ, ನಾಯಿಂಗ್ಲಜ, ಯಾದ್ಯಾನವಾಡಿ, ದೂಳಗನವಾಡಿ, ಕುಪ್ಪಾಣವಾಡಿ, ಕೋಥಳಿ,ಕುಠಾಳಿ, ರಾಮಪೂರ ಮುಂತಾದ ಗ್ರಾಮಗಳ ರೈತರು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಗೌರವಿಸಿದರು.

ಚಿಕ್ಕೋಡಿ ತಾಲೂಕಿನ ಬಹುದಿನಗಳ ಬೇಡಿಕೆಯಾದ ೩೮೨ ಕೋಟಿ ರೂಪಾಯಿ ಮೊತ್ತದ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ನಿಗಮ ನಿರ್ದೇಶನ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿದ್ದು ಸಂತಸ ತಂದಿದೆ. ಶೀಘ್ರವಾಗಿ ಯೋಜನೆಯ ಕಾಮಗಾರಿ ಆರಂಭಿಸಬೇಕು ಎಂದು ಸಚಿವರ ಬಳಿ ಮನವಿ ಮಾಡಿದರು.
ರವೀಂದ್ರ ಮಿರ್ಜೆ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಪಾಟೀಲ, ಪುರಸಭೆ ಸದಸ್ಯ ಸಾಭೀರ ಜಮಾದಾರ, ರಾಮಾ ಮಾನೆ, ಮುದ್ದಸರ ಜಮಾದಾರ, ವಿನೋಧ ಕಾಗೆ, ಶಿವಕುಮಾರ ಕಮತೆ, ಕುಮಾರ ಪಾಟೀಲ, ಕಲಗೌಡ ಪಾಟೀಲ, ನಸಲಾಪೂರೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next