Advertisement

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಕೈಗೆ ಅಧಿಕಾರ, ಸಚಿವ ಸುಧಾಕರ್ ಗೆ ಮುಖಭಂಗ

09:45 AM Feb 12, 2020 | keerthan |

ಚಿಕ್ಕಬಳ್ಳಾಪುರ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಒಟ್ಟು 31 ಕ್ಷೇತ್ರಗಳ ಪೈಕಿ 16 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಸಚಿವ ಡಾ. ಕೆ.ಸುಧಾಕರ್ ಬೆಂಬಲಿತ ಬಿಜೆಪಿಗೆ ತೀವ್ರ ಮುಖಭಂಗ ಉಂಟು ಮಾಡಿದೆ.

Advertisement

31 ವಾರ್ಡ್‌ಗಳಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ರಲ್ಲಿ ಮಾತ್ರ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆದಿದ್ದು, ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಮೂಲಕ ನಗರಸಭೆಯನ್ನು ಉಳಿಸಿಕೊಂಡಿದೆ. ಇದೇ ಮೊದಲ ಬಾರಿಗೆ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದು ಕಮಲ ಅರಳಿಸುವ ಬಿಜೆಪಿ ಕನಸು ಭಗ್ನಗೊಂಡಿದೆ.

ಇನ್ನೂ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಕೇವಲ 2 ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿದೆ. 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷೇತರರು ಕೇವಲ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. 3 ಸ್ಥಾನಗಳಲ್ಲಿ ಬಿಎಸ್ಪಿ ಸ್ಪರ್ಧಿಸಿದ್ದರೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಚಿಕ್ಕಬಳ್ಳಾಪುರ ನಗರಸಭೆ 31 ವಾರ್ಡ್ ಗಳ ಫಲಿತಾಂಶ

01) ಸುಮ ಶಶಿಶೇಖರ್-ಬಿಜೆಪಿ-ಗೆಲುವು

Advertisement

02) ರತ್ನಮ್ಮ-ಕಾಂಗ್ರೆಸ್-ಗೆಲುವು

03 ಶಕೀಲಾ ಭಾನು-ಕಾಂಗ್ರೆಸ್-ಗೆಲುವು

04) ಗಜೇಂದ್ರ-ಬಿಜೆಪಿ-ಗೆಲುವು

05) ನಾಗರಾಜ್-ಬಿಜೆಪಿ-ಗೆಲುವು

06 )ರುಕ್ಮಿಣಿ ಮುನಿರಾಜು-ಪಕ್ಷೇತರ-ಗೆಲುವು

07 )ಸತೀಶ್-ಕಾಂಗ್ರೆಸ್-ಗೆಲುವು

08) ದೀಪ.ಬಿ.ಕೆ-ಬಿಜೆಪಿ-ಗೆಲುವು

09) ಮಟಮಪ್ಪ-ಜೆಡಿಎಸ್-ಗೆಲುವು

10) ಸುಬ್ರಮಣ್ಯಂ-ಪಕ್ಷೇತರ-ಗೆಲುವು

11) ಮಂಜೂಳ.ಆರ್-ಬಿಜೆಪಿ-ಗೆಲುವು

12) ಮಹಮದ್ ಜಾಫರ್-ಪಕ್ಷೇತರ-ಗೆಲುವು

13) ನಿರ್ಮಲಾಪ್ರಭು-ಕಾಂಗ್ರೆಸ್-ಗೆಲುವು

14)ದೀಪಕ್-ಕಾಂಗ್ರೇಸ್-ಗೆಲುವು

15) ಅಂಬರೀಶ್-ಕಾಂಗ್ರೆಸ್-ಗೆಲುವು

16) ಯತೀಶ್-ಬಿಜೆಪಿ-ಗೆಲುವು

17) ರಫೀಕ್-ಕಾಂಗ್ರೆಸ್-ಗೆಲುವು

18) ಎ.ಬಿ.ಮಂಜುನಾಥ್-ಬಿಜೆಪಿ-ಗೆಲುವು

19) ಬಿ.ಎನ್.ರಾಜೇಶ್ವರಿ-ಬಿಜೆಪಿ-ಗೆಲುವು

20) ನರಸಿಂಹಮೂರ್ತಿ-ಕಾಂಗ್ರೆಸ್-ಗೆಲುವು

21) ಅಪ್ಜಲ್-ಕಾಂಗ್ರೆಸ್-ಗೆಲುವು

22) ಸ್ವಾತಿ.ಎಂ-ಕಾಂಗ್ರೆಸ್-ಗೆಲುವು

23) ಡಿ.ಎಸ್.ಆನಂದ್ ರೆಡ್ಡಿ ಬಾಬು-ಪಕ್ಷೇತರ-ಗೆಲುವು

24) ಅಂಬಿಕ-ಕಾಂಗ್ರೆಸ್-ಗೆಲುವು

25) ವೀಣಾರಾಮು-ಜೆಡಿಎಸ್-ಗೆಲುವು

26) ಭಾರತಿದೇವಿ-ಬಿಜೆಪಿ-ಗೆಲುವು

27) ನೇತ್ರಾವತಿ-ಕಾಂಗ್ರೆಸ್-ಗೆಲುವು

28 ) ಚಂದ್ರಶೇಖರ್-ಕಾಂಗ್ರೆಸ್-ಗೆಲುವು

29) ವೆಂಕಟೇಶ್-ಕಾಂಗ್ರೆಸ್-ಗೆಲುವು

30) ಮೀನಾಕ್ಷಿ-ಕಾಂಗ್ರೆಸ್-ಗೆಲುವು

31) ಜಯಲಕ್ಷ್ಮೀ-ಕಾಂಗ್ರೆಸ್-ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next