Advertisement

ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

07:35 PM Dec 05, 2019 | Naveen |

ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ಹೊನ್ನೇಭಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮಸಾಲ್ತಿ ಗುಡ್ಲು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೇ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಭೀತಿಯಲ್ಲಿ ನರಳುತ್ತಿದ್ದಾರೆ.

Advertisement

ಗ್ರಾಮದ ಚರಂಡಿ ಹಲವಾರು ತಿಂಗಳಿಂದ ಸ್ವಚ್ಛ ಮಾಡದಿರುವುದರಿಂದ ಗಬ್ಬು ವಾಸನೆ ಬೀರುತ್ತಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ. ಗ್ರಾಮಸ್ಥರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಸಾಲ್ತಿ ಗುಡ್ಲು ಗ್ರಾಮ ಪಟ್ಟಣಕ್ಕೆ ಸುಮಾರು 500 ಮೀ ದೂರ ದಲ್ಲಿದ್ದು, ಗ್ರಾಮದ ಚರಂಡಿಗಳು ಗಬ್ಬು ನಾರುತ್ತಿದೆ. ಚರಂಡಿ ಸುತ್ತ ಗಿಡಗಳು ಬೆಳೆದು ನಿಂತು, ರಸ್ತೆ ಹಾಗೂ ಚರಂಡಿಗೆ ವ್ಯತ್ಯಾಸವಿಲ್ಲದಂತೆ ಕಾಣುತ್ತಿದೆ.

ದಿನನಿತ್ಯ ಈ ಭಾಗದಲ್ಲಿ ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಚರಂಡಿ ಸುತ್ತ ಗಿಡಗಳು ಬೆಳೆದಿರುವುದರಿಂದ ಅಪಘಾತ ವಾಗುವ ಸಾಧ್ಯತೆ ಹೆಚ್ಚಾಗಿದೆ. ವಿಷ ಜಂತುಗಳ ಆವಾಸಸ್ಥಾನ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಕೂಡಲೇ ಇತ್ತ ಗಮನ ಕೊಟ್ಟು ಊರಿನ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಊರಿನ ಕೆಲವರೂ ಚರಂಡಿಗೆ ಮಣ್ಣು ಹಾಕಿದ್ದಾರೆ. ಇದರ ಬಗ್ಗೆ ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಗಿದೆ. ಇನ್ನೂ ಚರಂಡಿ ಕಾಮಗಾರಿ ಬಾಕಿ ಇದ್ದು, ಕೆಲ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸಲಾಗುತ್ತದೆ.
ಕೋಕಿಲ, ಪಿಡಿಒ ,
ಹೊನ್ನೇಭಾಗಿ ಗ್ರಾಪಂ

ಜನರು ಗ್ರಾಮದ ಸ್ವಚ್ಛತೆ ಬಗ್ಗೆ ಸಹಕಾರ ನೀಡಬೇಕು. ವೈಯಕ್ತಿಕ ದ್ವೇಷ ಬಿಟ್ಟು ಕಾಮಗಾರಿಗೆ ಸಹಕರಿಸಬೇಕು. ನಾನೇ ಮುಂದೆ ನಿಂತು ಮುಂದಿನ ದಿನಗಳಲ್ಲಿ ಚರಂಡಿ ಕಾಮಗಾರಿ ಪ್ರಾರಂಭಿಸುತ್ತೇನೆ.
●ಶಶಿಧರ್‌, ಗ್ರಾಪಂ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next