Advertisement

ಜಲಮೂಲಗಳ ಅಭಿವೃದ್ಧಿಗೆ ಚಿಂತನೆ

05:17 PM Jun 13, 2019 | Naveen |

ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿ ಯಲ್ಲಿನ ಕುಡಿಯುವ ನೀರಿನ ಮೂಲಗಳಾದ ಬತ್ತಿ ಹೋಗಿರುವ ಕಲ್ಯಾಣಿ, ಬಾವಿಗಳನ್ನು ಶುದ್ಧೀಕರಿ ಸುವ ಕಾರ್ಯಕ್ಕೆ ಚಿಕ್ಕನಾಯಕನಹಳ್ಳಿಯ ನೆರಳು ತಂಡ ಹಾಗೂ ಪುರಸಭೆ ಮುಂದಾಗಿದ್ದು, ಆರೋಗ್ಯಕರ ಬೆಳವಣಿಗೆಯಾಗಿದೆ.

Advertisement

ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪುರ ಸಭೆಯ ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿ ಹೋಗಿವೆ. ಚಿಕ್ಕನಾಯಕನಹಳ್ಳಿಯ ಸಮಾನ ಮನಸ್ಕಾರು ಹಾಗೂ ಪುರಸಭೆ ನೂತನ ಸದಸ್ಯರು, ಅಧಿಕಾರಿಗಳು, ಲಂಚಮುಕ್ತ ವೇದಿಕೆಯ ಮಲ್ಲಿಕಾರ್ಜುನ್‌ ಅವರ ಮಾರ್ಗದರ್ಶನದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಸಲುವಾಗಿ ಜಲ ಮೂಲ ಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ಮಾಡಿದ್ದು, ಇದರ ಮೊದಲ ಹಂತವಾಗಿ ಕೇದಿಗೆಹಳ್ಳಿ ಬಳಿಯಲ್ಲಿನ ಪುರಾತನ ಕಲ್ಯಾಣಿಯನ್ನು ಸ್ವಚ್ಛಗೊಳಿ ಸುವ ಮೂಲಕ ಜಲ ಸಂಶೋಧನೆಗೆ ಚಾಲನೆ ನೀಡಿದ್ದಾರೆ.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಪಟ್ಟಣದ ಸಮಾನ ಮನಸ್ಕಾರು ಹೊರಟಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿನ ಕೊಳವೆ ಬಾವಿಗಳಿಗೆ ಹತ್ತಿರ ವಿರುವ ಹಾಗೂ ಕೊಳವೆ ಬಾವಿಗಳಿಗೆ ಜಲಮೂಲ ವಾಗಿರುವ ಕಲ್ಯಾಣಿಗಳನ್ನು ಶುದ್ಧೀಕರಿಸಿ ಮಳೆ ನೀರನ್ನು ಶೇಖರಿಸುವ ನೂತನ ಪ್ರಯೋಗದ ಮೂಲಕ ಪಟ್ಟಣ ದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ.

ಕೇದಿಗೆಹಳ್ಳಿ ಕಲ್ಯಾಣಿ ಸ್ವಚ್ಛ: ಕೇದಿಗೆಹಳ್ಳಿ ಬಳಿಯಲ್ಲಿನ ಪುರಾತನವಾದ ಕಲ್ಯಾಣಿ ಹಲವು ವರ್ಷಗಳಿಂದ ಗಿಡಗಳು ಬೆಳೆದು, ಕಸ ಕಡ್ಡಿಗಳಿಂದ ಮುಚ್ಚಿ ಹೋಗಿತ್ತು. ನೆರಳು ಸಂಘಟನೆ ಹಾಗೂ ಪುರಸಭೆ ಕಾರ್ಮಿಕರು ಕಲ್ಯಾಣಿ ಸ್ವಚ್ಛತೆ ಮಾಡಿದ್ದಾರೆ. ಈ ಕಲ್ಯಾಣಿ ನೀರಿನಿಂದ ತುಂಬಿದರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಬರುತ್ತವೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ತಾಲೂಕು ಆಡಳಿತದ ಸಹಕಾರ ಅವಶ್ಯ:ನೀರಿನ ಸಮಸ್ಯೆಗಳನ್ನು ಪರಿಹಾರಿಸುವ ಬಗ್ಗೆ ಪಟ್ಟಣದ ಸಮಾನ ಮನಸ್ಕಾರು ಕಲ್ಯಾಣಿಗಳ ಶುದ್ಧೀಕರಣಕ್ಕೆ ಮುಂದಾ ಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇವರ ಕೆಲಸಕ್ಕೆ ತಾಲೂಕು ಆಡಳಿತ ಮುಂದಾಗಿ ಪಟ್ಟಣ ದಲ್ಲಿರುವ ಕಲ್ಯಾಣಿಗಳನ್ನು ಶುದ್ಧೀಕರಿಸಿ, ಅವುಗಳಿಗೆ ಮಳೆ ನೀರು ಹರಿಯುವಂತೆ ಮಾಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next