Advertisement

23 ಕೆರೆಗಳ ತೆರವಿಗೆ ತಹಶೀಲ್ದಾರ್‌ಗೆ ಪತ್ರ

06:02 PM Oct 10, 2019 | Naveen |

ಚಿಕ್ಕನಾಯಕನಹಳ್ಳಿ: ಸಚಿವ ಜೆ.ಸಿ ಮಾಧುಸ್ವಾಮಿಯವರ ಮೌಖೀಕ ಆದೇಶ ಮೇರೆಗೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸಣ್ಣ ನೀರಾವರಿ ಕೆರೆಗಳ ಮತ್ತು ಹಳ್ಳಗಳ ಒತ್ತುವರಿ ತೆರವುಗೊಳಿಸುವ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ-ವಿಭಾಗ ಶಿರಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ.

Advertisement

ತಾಲೂಕಿನಲ್ಲಿ ಬಾವನಹಳ್ಳಿ ದುರ್ಗದ ಕೆರೆ, ಬಾವನಹಳ್ಳಿ ಹೊಸಕೆರೆ, ನವಿಲೆ ಕೆರೆ, ನಾಗತಿಹಳ್ಳಿ ಕೆರೆ, ಮುದ್ದೇನ ಹಳ್ಳಿ ಊರಮುಂದಿನಕೆರೆ, ಮುದ್ದೇನಹಳ್ಳಿ ಮೇಲಿನ ಕೆರೆ, ಶೆಟ್ಟಿಕೆರೆ ಹಿರೇಕೆರೆ, ಮಾದಿ ಹಳ್ಳಿ ಕೆರೆ, ಗೋಪಾಲನಹಳ್ಳಿ ಕೆರೆ, ಪೆಮ್ಮಲದೇವರಹಳ್ಳಿ ಕೆರೆ, ಪಂಕಜನಹಳ್ಳಿ ಕೆರೆ, ಕಂದಿಕೆರೆ ನೊಣವಿನ ಕೆರೆ, ಬೆಳವಾಡಿ ಕೆರೆ, ಶಿಡ್ಯಾ ಅಕ್ಕನವರ ಕೆರೆ, ಹಂದನಕೆರೆ ಹಿರೇಕೆರೆ ಬಂಗಾರಕೆರೆ, ಸೊರಲಮಾವು ಕೆರೆ, ಹೊಸಕೆರೆ ಕೆರೆ, ಯಳ್ಳೇನಹಳ್ಳಿ ಕೆರೆ, ಎಣ್ಣೇಗೆರೆ ಕೆರೆ, ಗೋಪಾಲಪುರು ಕೆರೆ, ಹುಳಿಯಾರ ಅಮಾನಿಕೆರೆ ಜೋಡಿ ತಿಮ್ಮಾಪುರು ಕೆರೆ ಸೇರಿ ಒಟ್ಟು 23 ಸಣ್ಣ ನೀರಾವರಿ ಇಲಾಖೆ ಕೆರೆ ಒತ್ತುವರಿ ಯಾಗಿದೆ.

ಮೂರು ಪ್ರಮುಖ ಹಳ್ಳಗಳಾದ ಶೆಟ್ಟಿಕೆರೆಯಿಂದ ಬೋರನ ಜಣಿವೆ ಜಲಾಶಯಕ್ಕೆ ಬರುವ ತೊರೆಹಳ್ಳ, ಗಂಟೇನಹಳ್ಳಿಯಿಂದ ಗಾಯತ್ರಿ ಜಲಾಶಯಕ್ಕೆ ಹೋಗುವ ಹಳ್ಳ, ಬೋರನ ಕಣಿವೆಯಿಂದ ಗಾಯತ್ರಿ ಜಲಾಶಯಕ್ಕೆ ಹೋಗುವ ಹಳ್ಳವೂ ಒತ್ತುವರಿ ಯಾಗಿರುವುದಾಗಿ ತಿಳಿಸಲಾಗಿದೆ.

ತಾಲೂಕಿಗೆ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಯಿಂದ ತಾಲೂಕಿನ ಸಣ್ಣ ನೀರಾವರಿ ಮತ್ತು ಜಿಪಂ ಕೆರೆಗಳಿಗೆ ನೀರು ಒದಗಿಸಲು ಯೋಜನೆ ರೂಪಿಸಿದ್ದು, ಪೈಪಲೈನ್‌ ಹಾಗೂ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದರಿಂದ 23 ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವುದು ಗಮನಕ್ಕೆ ಬಂದಿದ್ದು ಒತ್ತುವರಿಯಾಗಿರುವ ಜಾಗ ತೆರವುಗೊಳಿಸಬೇಕು ಎಂದು ತಾಲೂಕು ತಹಶೀಲ್ದಾರ್‌ಗೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next