Advertisement
ಜಗದೀಶ್ ಎಂಬುವರು ಗಾಂಧೀಜಿ ಅವರ ಭಾವಚಿತ್ರ ಹಿಡಿದು ಧರಣಿ ನಡೆಸುತ್ತಿದ್ದು, ಇಲಾಖೆ ತಮಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವುದೇಕೆ ಎಂಬ ಬಗ್ಗೆ ಹಿಂಬರಹ ಕೊಡಬೇಕೆಂದು ಒತ್ತಾಯಿಸಿದ್ದಾರೆ.
Related Articles
Advertisement
18 ವರ್ಷ ಕಳೆದರೂ ಇಲಾಖೆ ಅನುಕಂಪ ತೋರದಿದ್ದರೆ ನಾನೇನು ಮಾಡಬೇಕು. ನನಗೂ ಒಂದು ಜೀವನ ಇದೆ. ಇಲಾಖೆ ಸಿಬ್ಬಂದಿ ಕಡತಗಳು ಎಂದರೆ ಒಂದು ಘನವಸ್ತು ಎಂದಷ್ಟೇ ತಿಳಿದಂತಿದೆ. ಪ್ರತಿಯೊಂದು ಕಡತದ ಹಿಂದೆ ಪ್ರತಿಯೊಬ್ಬರ ಜೀವನದ ಜೀವನಾಡಿ ಇದೆ. ಈ ಹಿನ್ನೆಲೆಯಲ್ಲಿ ನನಗಾದ ಅನ್ಯಾಯವನ್ನು ತಕ್ಷಣ ಪರಿಹರಿಸಬೇಕು. ಈ ಬಗ್ಗೆ ಎಲ್ಲಾ ರೀತಿಯ ಹೋರಾಟ ನಡೆಸಿ ಸಾಕಾಗಿ ಈಗ ಶಾಂತಿಯುತವಾಗಿ ಮೌನ ಪ್ರತಿಭಟನೆಗೆ ಮುಂದಾಗಿದ್ದೇನೆ ಎಂದರು.
ವಿಷಯ ತಿಳಿದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತ ಅನಿಲ್ಕುಮಾರ್ ಮತ್ತು ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಸ್ಥಳಕ್ಕೆ ಆಗಮಿಸಿ ಜಗದೀಶ್ ಅವರ ಅಹವಾಲು ಆಲಿಸಿದರು. ಜಗದೀಶ್ ಅವರ ವಿಚಾರದಲ್ಲಿ ರೆಕಾರ್ಡ್ ಸೆಕ್ಷನ್ ಸಂಬಂಧ ಏನೋ ಸಮಸ್ಯೆ ಇದೆ. ಡಿಡಿಪಿಐ ಕಚೇರಿ, ಜೆಡಿ ಕಚೇರಿಯಿಂದ ಡಿಸಿ ಕಚೇರಿಗೆ ಬಂದಿರುವ ಪತ್ರಗಳು ಅವರ ಬಳಿ ಇವೆ. ಇದೆಲ್ಲದಕ್ಕೂ ಸಂಬಂಧಿಸಿದಂತೆ ಜಗದೀಶ್ ಅವರಿಗೆ ಸ್ಪಷ್ಟನೆ ಕೊಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದ್ದೇವೆ ಎಂದು ರವೀಂದ್ರ ಬೆಳವಾಡಿ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಜಗದೀಶ್, ಬಿಇಒ ಹಿಂಬರಹ ನೀಡಿದ್ದಾರೆ. ಒಂದು ವಾರ ಸಮಯಾವಕಾಶ ನೀಡುತ್ತೇನೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜು.26 ರಿಂದ ವಿಷದ ಬಾಟಲಿಯೊಂದಿಗೆ ಡಿಡಿಪಿಐ ಕಚೇರಿ ಎದುರು ಬದುಕು ಇಲ್ಲ ಸಾವು ಎಂದು ಧರಣಿ ಆರಂಭಿಸುವುದಾಗಿ ಹೇಳಿದರು.
ಜಗದೀಶ್ ಅವರಿಗೆ ಶುಕ್ರವಾರ ಹಿಂಬರಹ ನೀಡಲಾಗಿದೆ. ಮೇಲಧಿಕಾರಿಗಳ ಸೂಚನೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.•ಜಯರಾಂ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ