Advertisement

Tourists ಸ್ವರ್ಗ ರಾಣಿಝರಿ: ಮೂಡಿಗೆರೆ ಸುತ್ತಮುತ್ತ ಪ್ರವಾಸಿಗರ ದಟ್ಟಣೆ ಹೆಚ್ಚಳ

11:32 AM Jul 16, 2023 | Team Udayavani |

ಕೊಟ್ಟಿಗೆಹಾರ: ಮಲೆನಾಡಿನ ಹಸಿರ ಸೆರಗಿನಲ್ಲಿ ಐತಿಹಾಸಿಕ ತಾಣವೊಂದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಅದರಲ್ಲೂ ಬಲ್ಲಾಳರಾಯನ ದುರ್ಗದ ರಾಣಿಝರಿ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ.

Advertisement

ಮೂಡಿಗೆರೆ ತಾಲೂಕಿನ ಸುಂಕಸಾಲೆ ಸಮೀಪದ ಬಲ್ಲಾಳರಾಯನ ದುರ್ಗ ತಪ್ಪಲಿನಲ್ಲಿ ಈ ರಾಣಿಝರಿ ಎಂಬ ಪ್ರಪಾತ ಪ್ರವಾಸಿಗ ಯುವಕ ಯುವತಿಯರ ಮನೆ ಮಾತಾಗಿದೆ.

ರಾಣಿಝರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಜೂರು, ನೆರೆಯ ಗ್ರಾಮಗಳು ಕಾಣಿಸುತ್ತದೆ. ಹಸಿರ ಪ್ರಪಾತದ ಕಣಿವೆ ಎಂತಹವರ ಎದೆಯನ್ನೊಮ್ಮೆ ನಡುಗಿಸುವಂತಿದೆ. ಸಾವಿರಾರು ಅಡಿಯ ಪ್ರಪಾತದ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದವರು ರಾಣಿಝರಿಯನ್ನು ಮರೆಯುವುದಿಲ್ಲ.

ರಾಣಿ ಝರಿಗೂ ರಾಣಿ ಚೆನ್ನಮ್ಮಾಜಿಗೂ ಅವಿನಾಭಾವದ ಸಂಬಂಧವಿದೆ. ಬಲ್ಲಾಳರಾಯನ ದುರ್ಗದ ಕೋಟೆಗಳು ಅವನತಿಯ ಅಂಚಿನಲ್ಲಿದ್ದರೂ ಕೂಡ ಇಲ್ಲಿನ ಹಸಿರು ಹೊದಿಕೆಯ ಭೂಸಿರಿ ಪ್ರವಾಸಿಗರ ನೆಚ್ಚಿನ ತಾಣ. ಕಣ್ಣಿನಂಚಿನುದ್ದಕ್ಕೂ ಹಸಿರಾದ ಪರ್ವತದ ಶ್ರೇಣಿಗಳ ನೋಟ ಅವರ್ಣನೀಯ. ಹಾಗೆಯೇ ಬಲ್ಲಾಳರಾಯನ ದುರ್ಗ ನೋಡಲು ಬಂದ ಪ್ರವಾಸಿಗರಿಗೆ ತಂಗಲು ಅನೇಕ ಹೋಂ ಸ್ಟೇಗಳು, ಕಾಫಿ ಕಾರ್ನರ್ ಗಳು ತಲೆ ಎತ್ತಿವೆ.

Advertisement

ರಾಣಿ ಝರಿಯಿಂದ ಬಲ್ಲಾಳರಾಯನ ದುರ್ಗ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು. ಮೊದಲು ರಾಣಿ ಝರಿ ನೋಡಿ ಪ್ರವಾಸಿಗರು ಬಲ್ಲಾಳರಾಯನ ದುರ್ಗದ ಹಾದಿ ಹಿಡಿಯುತ್ತಾರೆ. ಒಂದನೇ ಬಲ್ಲಾಳನ ಕೋಟೆ ಈಗ ಅಳಿವಿನಂಚಿನಲ್ಲಿ ಅರಣ್ಯ ಸೊಬಗು ಮಾತ್ರ ಪ್ರವಾಸಿಗರ ಸ್ವರ್ಗವಾಗಿಯೇ ಉಳಿದಿದೆ.

ಬಲ್ಲಾಳರಾಯನ ದುರ್ಗದ ರಾಣಿ ಝರಿ ಸುತ್ತಮುತ್ತಲಿನ ಪರಿಸರ ಮೋಜು ಮಸ್ತಿ ಮಾಡುವವರನ್ನು ನಿಯಂತ್ರಿಸಿ ಪರಿಸರ ಆಸ್ವಾಧಕರಿಗೆ ಮುಕ್ತ ತಾಣವಾಗಲಿ ಎಂಬುದು ಪರಿಸರ ಪ್ರಿಯರ ಆಶಯವಾಗಿದೆ.

‘ ಬಲ್ಲಾಳರಾಯನ ದುರ್ಗ ಹಾಗೂ ರಾಣಿ ಝರಿ ಹಸಿರ ಮಂಜಿನಲ್ಲಿ ಮಿಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ನಮ್ಮ ರಾಜ್ಯದಲ್ಲೇ ಇಂತಹ ಸ್ಥಳಗಳು ಇರುವಾಗ ನಾವು ಬೇರೆ ರಾಜ್ಯಗಳಿಗೆ ಹೋಗಿ ನೋಡುವ ಅವಶ್ಯಕತೆ ಇರುವುದಿಲ್ಲ. ಜನರಿಗೆ ಇಲ್ಲಿ ಮನಸಿಗೆ ಮುದ ನೀಡುವ ಸ್ಥಳವೆಂದರೆ ತಪ್ಪಾಗಲಾರದು’ – ಶಶಾಂಕ್, ಪ್ರವಾಸಿ, ಮೈಸೂರು

 

Advertisement

Udayavani is now on Telegram. Click here to join our channel and stay updated with the latest news.

Next