Advertisement

ಚಿಕ್ಕಮಗಳೂರು: ಕೋವಿಡ್ ಸೋಂಕಿತ ಬಾಲಕಿ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ತರೀಕೆರೆ ಶಾಸಕ

12:55 PM Jun 12, 2021 | Team Udayavani |

ಚಿಕ್ಕಮಗಳೂರು: ಕೋವಿಡ್ ಸೋಂಕಿತ ಬಾಲಕಿ ಜೊತೆ ತರೀಕೆರೆ ಶಾಸಕ ಸುರೇಶ್  ಭರ್ಜರಿ ಡ್ಯಾನ್ಸ್ ಮಾಡಿದ ಘಟನೆ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಡಿ.ಎಸ್.ಸುರೇಶ್ ತರೀಕೆರೆ ತಾಲೂಕಿನ ಬಿಜೆಪಿ ಶಾಸಕರಾಗಿದ್ದು, ಬಾವಿಕೆರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಬಾಲಕಿ ಹಾಗೂ ಸೋಂಕಿತರಿಗೆ ಧೈರ್ಯ ತುಂಬಲು ನೃತ್ಯ ಮಾಡಿದ್ದಾರೆ.

“ಕಾಲ ಮತ್ತೊಮ್ಮೆ ನಮಗಾಗಿ ಬಂತು”, “ಯಾರೇ ನೀನು ರೋಜಾ ಹೂವೇ” ಮೊದಲಾದ  ಹಾಡು ಹಾಡಿಕೊಂಡು ಶಾಸಕ ಸುರೇಶ್  ನೃತ್ಯ ಮಾಡಿದ್ದಾರೆ.  ಶಾಸಕರ ಜೊತೆ ಸೋಂಕಿತ ಬಾಲಕಿಯೂ ಕುಣಿದು ಕುಪ್ಪಳಿದ್ದಾಳೆ.

ಶಾಸಕರಿಗೆ ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಸಾಥ್ ನೀಡಿದ್ದೂ, ವೈದ್ಯ ಚಂದ್ರಶೇಖರ್, ಪುರಸಭೆ ಆಯುಕ್ತ ಮಹಾಂತೇಶ್ ಕೂಡ ಹಾಡು ಹಾಡಿ ರಂಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next