Advertisement

ಚಿಕ್ಕಮಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಸಾಂಖ್ಯಿಕ ಅಧಿಕಾರಿ

09:49 PM Aug 03, 2023 | Team Udayavani |

ಚಿಕ್ಕಮಗಳೂರು : ಮರಣ ದೃಢೀಕರಣ ಪತ್ರ ಮಾಡಿಕೊಡಲು 12 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕು ಕಚೇರಿಯ ಸಾಂಖ್ಯಿಕ ಅಧಿಕಾರಿ ಇಕ್ಬಾಲ್ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

ನಗರದ ಆದಿಶಕ್ತಿ ನಗರದ ನಿವಾಸಿ ತಾಜ್ ಎಂಬುವರ ಪತಿ ಇದೇ ಜುಲೈ 7ರಂದು ಸಾವನ್ನಪ್ಪಿದ್ದರು. ಅವರ ಮರಣ ದೃಢೀಕರಣ ಪತ್ರ ಮಾಡಿಕೊಡುವಂತೆ ತಾಲೂಕು ಕಚೇರಿಯ ಸಾಂಖ್ಯಿಕ ನಿರೀಕ್ಷಕರಿಗೆ ಮನವಿ ಮಾಡಿದ್ದರು. ಮನವಿ ಪತ್ರವನ್ನ ಗಮನಿಸಿದ ಸಾಂಖ್ಯಿಕ ಅಧಿಕಾರಿ ಇಕ್ಬಾಲ್ ತಾಜ್ ಅವರಿಗೆ ಫೋನ್ ಮಾಡಿ ಕಚೇರಿಗೆ ಕರೆಸಿಕೊಂಡು ಮರಣ ದೃಢೀಕರಣ ಪತ್ರ ಮಾಡಿಕೊಡಲು 12 ಸಾವಿರ ರೂ. ಖರ್ಚಾಗುತ್ತದೆ ಎಂದು ನಿಮ್ಮ ಗಂಡನ ಎಲ್ಲಾ ದಾಖಲೆಗಳನ್ನ ನೀಡಿ ಎಂದು ಹೇಳಿದ್ದರು.

ಅದಕ್ಕೆ ತಾಜ್ ಅಷ್ಟೊಂದು ಹಣ ಯಾಕೆ ಸರ್ ಎಂದು ಕೇಳಿದಾಗ,ಅದನ್ನ ನಾವು ಇಲ್ಲಿ ಮಾಡಿಕೊಡುವುದಿಲ್ಲ. ಕೋರ್ಟಿನಲ್ಲಿ ಮಾಡಿಸಬೇಕು, ಇಲ್ಲವಾದರೆ ರಿಜಕ್ಟ್ ಆಗುತ್ತದೆ ಎಂದು ಹೇಳಿದ್ದಾರೆ. ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣ ತಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಪೊಲೀಸರು, ಅವರು ಹಣ ಕೇಳುವ ವಾಯ್ಸ್ ರೆಕಾರ್ಡ್ ಮಾಡಿಕೊಡುವಂತೆ ಸೂಚಿಸಿದ್ದರು. ಅದರಂತೆ ಮತ್ತೆ ಇಕ್ಬಾಲ್ ಕಚೇರಿಗೆ ಬಂದ ತಾಜ್ ಮರಣ ಪತ್ರ ಕೇಳಿದಾಗ, ಕಚೇರಿಯಲ್ಲಿ ಕೆಲಸ ಮಾಡುವ ಜೀವನ್ ಎಂಬ ಹುಡುಗನನ್ನ ಕರೆದು ಅವರಿಂದ ಅವರ ಪತಿಯ ಎಲ್ಲಾ ದಾಖಲೆ ಹಾಗೂ 12 ಸಾವಿರ ಹಣ ಪಡೆದುಕೊಳ್ಳುವಂತೆ ತಿಳಿಸಿದ್ದರು. ಆಗ ತಾಜ್ ಅಷ್ಟೊಂದು ಹಣವಾ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸರ್ ಎಂದು ಕೇಳಿಕೊಂಡಿದ್ದರು. ಅದಕ್ಕೆ ಜೀವನ್ ಕೂಡ ಇಲ್ಲ ಅದನ್ನ ಕೋರ್ಟಿನಿಂದ ಮಾಡಿಸಿಕೊಡಬೇಕು. ಅಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದನು. ಆ ಎಲ್ಲಾ ಸಂಭಾಷಣೆಯನ್ನ ರೆಕಾರ್ಡ್ ಮಾಡಿಕೊಂಡ ತಾಜ್ ಅದನ್ನ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದರು. ಮಹಿಳೆಯಿಂದ ಲಿಖಿತ ದೂರು ಪಡೆದುಕೊಂಡ ಲೋಕಾಯುಕ್ತ ಪೊಲೀಸರು ಇದು ಮರಣ ದೃಢೀಕರಣ ಪತ್ರ ಮಾಡಿಕೊಡಲು 12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 5000 ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next