Advertisement
ನಗರದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಮನೆಗಳ ಪರಿಶೀಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 83 ಸಾವಿರ ಮನೆ ನಿರ್ಮಾಣ ಮಂಡಳಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ನಿವೇಶನ ಸಮಸ್ಯೆಯಿರುವ ಕಾರಣ ಅಂತಹವುಗಳನ್ನು ಹೊರತುಪಡಿಸಿ ಉಳಿದ ಮನೆಗಳ ನಿರ್ಮಾಣ ಕೆಲಸ ಆರಂಭಗೊಂಡಿದೆ. ಚಿಕ್ಕಮಗಳೂರು ನಗರದ ಎರಡು ಕೊಳಚೆ ಪ್ರದೇಶದಲ್ಲಿ 280 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದು, ಕೆಲ ಕಾರಣಗಳಿಂದ ಕೆಲ ಮನೆಗಳು ಕೆಲಸ ನಿಂತುಕೊಂಡಿದೆ. ಅಂತಹ ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದು, ಶೀಘ್ರದಲ್ಲೇ ನಿಂತಿರುವ ಮನೆಗಳ ನಿರ್ಮಾಣ ಕೆಲಸವನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ವರೆಗೂ ಹಣ ವ್ಯಯಿಸಲಾಗುತ್ತಿದೆ. ಈಗಾಗಲೇ ಹಾಸನದಲ್ಲಿ ನಿರ್ಮಾಣ ಹಂತದ ಮನೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಜಿಲ್ಲೆಯ ತರೀಕೆರೆ, ಬೀರೂರು, ಕಡೂರು ಸೇರಿದಂತೆ ವಿವಿಧೆಡೆ ಕೊಳಗೇರಿಗಳಲ್ಲಿ ನಿರ್ಮಾಣವಾಗುತ್ತಿರುವ ಮನೆ ಪರಿಶೀಲನೆ ನಡೆಸಲಾಗುವುದು ಎಂದರು. ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಮಾತನಾಡಿ, ಇತ್ತೀಚೆಗೆ ಸಚಿವ ಸಿ.ಟಿ.ರವಿಯವರು ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿದಾಗ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ ಎಂದು ಸ್ಥಳೀಯರು ದೂರಿದ್ದರು. ಕೂಡಲೇ ವಸತಿ ಸಚಿವರು ಹಾಗೂ ಸಂಬಂಧಪಟ್ಟ ಅಧಿ ಕಾರಿಗಳಿಗೆ ಮಾತನಾಡಿ ಗುತ್ತಿಗೆದಾರರಿಗೆ ಹಣ ಮಂಜೂರು ಮಾಡಿ ಮನೆ ನಿರ್ಮಾಣ ಕೆಲಸ ಮುಂದುವರಿಸಿ ಶೀಘ್ರದಲ್ಲಿ ಎಲ್ಲ ಮನೆಗಳು ಪೂರ್ಣಗೊಳಿಸುವಂತೆ ಹೇಳಿದ್ದರು. ಈ ಸಂಬಂಧ ಬೆಂಗಳೂರಿನಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲಿಸಿದ್ದಾರೆ. 280 ಮನೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಲಾಗಿದ್ದು, ಉಳಿದಂತೆ ಶಾಂತಿನಗರ, ತಮಿಳು ಕಾಲೋನಿ, ದಂಟರಮಕ್ಕಿ ಫಕೀರ ಕಾಲೋನಿಗಳಲ್ಲಿ ಸಾಮಾನ್ಯ ವರ್ಗದವರು ಸೇರಿದಂತೆ ಹಿಂದುಳಿದ ವರ್ಗಕ್ಕೆ 400 ಮನೆಗಳ ನಿರ್ಮಾಣಕ್ಕೆ ಟೆಂಡರ್ ಹಂತದಲ್ಲಿದೆ ಸದ್ಯದಲ್ಲೇ ಕೆಲಸ ಆರಂಭವಾಗುತ್ತದೆ ಎಂದರು.
Related Articles
Advertisement