Advertisement

ಶಂಕರಾಚಾರ್ಯರು ಹಿಂದೂ ಧರ್ಮ ಒಗ್ಗೂಡಿಸಿದವರು

06:22 PM Apr 29, 2020 | Naveen |

ಚಿಕ್ಕಮಗಳೂರು: ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ ಶಂಕರಾಚಾರ್ಯರು ತಮ್ಮ ವೈಚಾರಿಕ ತತ್ವ- ಸಿದ್ಧಾಂತಗಳ ಮೂಲಕ ಹಿಂದೂ ಧರ್ಮವನ್ನು ಒಗ್ಗೂಡಿಸುವ ಕೆಲಸ
ಮಾಡಿದವರು ಎಂದು ಪತ್ರಕರ್ತ ಸ. ಗಿರಿಜಾ ಶಂಕರ್‌ ಹೇಳಿದರು.

Advertisement

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅದ್ವೈತ ಸಿದ್ಧಾಂತ ಪ್ರತಿಪಾದಿಸುವ ಮೂಲಕ ಆತ್ಮದಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮಕ್ಕೂ ಪರಮಾತ್ಮನಿಗೂ ಯಾವುದೇ ಭೇದವಿಲ್ಲ ಎಂಬ ಸಂದೇಶವನ್ನು ಸಾರಿದವರು. ಶಂಕರಾಚಾರ್ಯರು, 32 ವರ್ಷಗಳ ಕಾಲ ದೇಶವನ್ನು ಸುತ್ತುವ ಮೂಲಕ ಧರ್ಮ ಜಾಗೃತಿಯ ಮೂಲಕ ಧರ್ಮವನ್ನು ಒಗ್ಗೂಡಿಸುವ ಕೆಲಸಕ್ಕೆ ಮುಂದಾದವರು ಎಂದರು. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ತಾಪಂ ಅಧ್ಯಕ್ಷೆ ಶುಭಸತ್ಯಮೂರ್ತಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿ ಕಾರಿ ಎಸ್‌. ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ| ರಮೇಶ್‌, ಮುಖಂಡರಾದ ಮಂಜುನಾಥ ಜೋಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next