Advertisement

ತ್ಯಾಜ್ಯ ವಿಲೇವಾರಿಗೆ 9ಕೋಟಿ ರೂ. ವೆಚ್ಚ

11:19 AM Jul 04, 2019 | Naveen |

ಚಿಕ್ಕಮಗಳೂರು: ನಗರದ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರಸಭೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಬಂದಿದ್ದು, ನಗರಸಭೆ ಪಾಲುಸೇರಿ ದಂತೆ ಒಟ್ಟು 9 ಕೋಟಿ ರೂ. ಅನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಪರಮೇಶಿ ಮಾಹಿತಿ ನೀಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಕೇಂದ್ರ ಸರ್ಕಾರ ಶೇ.35 ರಷ್ಟು ಹಣ ನೀಡಿದರೆ, ರಾಜ್ಯ ಸರ್ಕಾರ ಶೇ.23 ಮತ್ತು ಉಳಿದ ಶೇ.32 ರಷ್ಟು ಹಣವನ್ನು ನಗರಸಭೆ ಭರಿಸಬೇಕಾಗಿದೆ. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ದಿಂದ ಹಣ ಬಂದಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ನಗರದಲ್ಲಿ ಪ್ರತಿದಿನ 45 ಟನ್‌ ಘನತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಇದರಲ್ಲಿ 15 ಟನ್‌ಗೂ ಹೆಚ್ಚು ಕರಗದ ಪ್ಲಾಸ್ಟಿಕ್‌ ಹಾಗೂ ಇತರೆ ಒಣ ಕಸವೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಯಿಂದ ಟಿಪ್ಪರ್‌ಗಳಿಗೆ ಕಸ ನೀಡುವಾಗಲೆ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡಲು ಸೂಚಿಸಲಾಗುತ್ತಿದೆ. ಸಾರ್ವಜನಿಕರು ಅವರ ಮನೆಗಳಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಕಸವನ್ನು ಬೇರ್ಪಡಿಸಿ 2 ಬುಟ್ಟಿಗಳಲ್ಲಿ ಸುಲಭವಾಗಿ ಸಂಗ್ರಹಿಸಿ ನೀಡಿದರೆ, ನಗರಸಭೆಗೆ ಹಸಿ ಕಸ ಉಪಯೋಗಿಸಿಕೊಂಡು ಸಾವಯವ ಗೊಬ್ಬರ ತಯಾರಿಸಲು ಸುಲಭವಾಗುತ್ತದೆ ಎಂದು ಹೇಳಿದರು.

ನಗರದ 35ವಾರ್ಡ್‌ಗಳಲ್ಲೂ ಪ್ರತಿನಿತ್ಯ ಕಸ ಸಂಗ್ರಹಣೆ ವ್ಯವಸ್ಥಿತವಾಗಿ ನಡೆಯಲು ನಗರಸಭೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಕಸ ಸಂಗ್ರಹಿಸುವಾಗ ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್‌, ಸೀಸೆ ಹಾಗೂ ಲೋಹದ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಕರಗುವ ಕಸವನ್ನು ಮತ್ತೂಂದು ಬುಟ್ಟಿಯಲ್ಲಿ ಸಂಗ್ರಹಿಸಿ ಗಾಡಿಗಳಿಗೆ ನೀಡಿದರೆ, ಕಸ ಸಂಗ್ರಹಣೆ ಹಾಗೂ ವಿಲೇವಾರಿ ಅತ್ಯಂತ ಕ್ರಮಬದ್ಧವಾಗಿ ನಡೆಯುತ್ತದೆ. ಅಲ್ಲದೆ ಹಸಿ ಕಸವನ್ನು ಬಳಸಿಕೊಂಡು ಗೊಬ್ಬರ ತಯಾರಿಸುವುದು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು.

ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಒಟ್ಟು ಕಸವನ್ನು ತೂಕ ಮಾಡಲು ಇಂದಾವರ ತಾಕಿನಲ್ಲಿ ಒಂದು ವೇ ಬ್ರಿಡ್ಜ್, ಸಣ್ಣ ಕಚೇರಿ ಹಾಗೂ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ಶೌಚಾಲಯ ನಿರ್ಮಿಸಲು ಆಲೋಚಿಸಲಾಗಿದೆ ಎಂದು ಆಯುಕ್ತರು ಹೇಳಿದರು.

Advertisement

ಹೊಸದಾಗಿ ಯಂತ್ರಗಳು ಹಾಗೂ ಪೂರಕ ವಾಹನಗಳು ಬಂದಲ್ಲಿ ನಗರದಲ್ಲಿ ಕಸ ಸಂಗ್ರಹಣೆ ಇನ್ನಷ್ಟುಉತ್ತಮವಾಗಿ ನಡೆಯುವುದಲ್ಲದೆ ಕಸವನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸುವುದನ್ನು ಇನ್ನಷ್ಟು ತ್ವರಿತವಾಗಿ ಮಾಡಬಹುದೆಂದು ತಿಳಿಸಿದರು. ಇಂದಾವರದ ಕಸ ಸಂಗ್ರಹಣೆ ತಾಕಿನಲ್ಲಿ ಈಗ ತಯಾರಿಸಿರುವ 450 ಚೀಲ ಸಾವಯವ ಗೊಬ್ಬರವನ್ನು ಸದ್ಯದಲ್ಲೇ ಮಾರಾಟ ಮಾಡಲು ಆಲೋಚಿಸಲಾಗಿದೆ. ಈಗ ನಗರಸಭೆಯಲ್ಲಿ ಪರಿಸರ ಇಂಜಿನಿಯರ್‌ ಹುದ್ದೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಹುದ್ದೆ ತುಂಬಲಾಗಿದೆ. ಮುಂದೆ ನಗರದಲ್ಲಿ ಕಸ ಸಂಗ್ರಹಣೆ ಹೆಚ್ಚು ವ್ಯವಸ್ಥಿತವಾಗಿ ನಡೆಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next